ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕರ್ನಾಟಕ

ಕಡಬ: ಮುನಿಸು ಮರೆತು ಒಂದಾದ ಕಾಂಗ್ರೆಸ್ ನಾಯಕರು ಕಾರ್ಯಕರ್ತರಲ್ಲಿ ಹುಟ್ಟಿದೆ ಹೊಸ ಉತ್ಸಾಹ

Published

on

ಕಡಬ: ಮುನಿಸು ಮರೆತು ಒಂದಾದ ಕಾಂಗ್ರೆಸ್ ನಾಯಕರು| ಕಾರ್ಯಕರ್ತರಲ್ಲಿ ಹುಟ್ಟಿದೆ ಹೊಸ ಹುರುಪು
ಕಡಬ ಬ್ಲಾಕ್ ಕಾಂಗ್ರೆಸ್ ನ ಸಮಿತಿ ಸಭೆಯು ಡಿ.13 ರಂದು ನಡೆದಿದ್ದು, ಇದರಲ್ಲಿ ಹಲವು ನಾಯಕರುತಮ್ಮೊಳಗಿನ ಮುನಿಸು ಮರೆತು ಒಂದಾಗಿದ್ದಾರೆ.
ಕಳೆದ ವಿಧಾನಸಭೆ ಚುಣಾವಣೆಯ ನಂತರ ಬಣಗಳಾಗಿ ಮುಸುಕಿನ ಗುದ್ದಾಟಗಳು ಬಹಿರಂಗವಾಗಿತ್ತು. ನಂತರ ಕೆಪಿಸಿಸಿ ಯಿಂದ ಹೊಸ ಉಸ್ತೂವಾರಿಗಳಾದ ಮಮತಾ ಗಟ್ಟಿ ಯವರನ್ನು ಕಳಿಸಿ ಮುನಿಸು ಶಮನಗೊಳಿಸಲು ಸೂಚಿಸಿದ್ದರು. ಮಮತಾ ಗಟ್ಟಿಯವರ ಸತತ ಪ್ರಯತ್ನದ ನಂತರ ಕಾಂಗ್ರೆಸ್ಸಿನ ಬಣಗಳು ಒಂದಾಗಿವೆ.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಡಬ ಬ್ಲಾಕ್ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಿಷ್ಟ ಮಾಡುವ ಬಗ್ಗೆ ಚರ್ಚಿಸಿದರು. ಸಭೆಗೆ ಆಗಮಿಸಿದ ಕೆಪಿಸಿಸಿ ಉಸ್ತೂವಾರಿಗಳು ಆದ ಮಮತಾ ಗಟ್ಟಿ ಯವರು ಕಾರ್ಯಕರ್ತರ ಅಹವಾಲನ್ನು ಕೇಳೀದರು ಹಾಗೂ ಹಲವಾರು ಪದಾಧಿಕಾರಿಗಳು ತಮ್ಮ ತಮ್ಮ ಸಮಸ್ಯೆಗಳನ್ನು ನಾಯಕರ ಮುಂದಿಟ್ಟರು.

ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಕೃಷ್ಣಪ್ಪರವರು ಮಾತನಾಡಿ ಕ್ಷೇತ್ರದ ಅಭಿವೃದ್ಧಿ ಯ ಬಗ್ಗೆ ಸಚಿವರ ಬಳಿ ಒಗ್ಗಟ್ಟಿನಿಂದ ನಿಯೋಗ ಹೋಗೋಣ ಎಂದು ಹೇಳಿದರು. ಈ ಸಭೆಯಲ್ಲಿ ನಾಯಕರು ಮುನಿಸು ಮರೆತು ಒಂದಾಗಿದ್ದು ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿತು ಈ ಸಭೆಯ ಅಧ್ಯಕ್ಷತೆಯನ್ನು ಸುಧೀರ್ ಕುಮಾರ್ ಶೆಟ್ಟಿ ಯವರು ವಹಿಸಿದ್ದರು. ಕೆಪಿಸಿಸಿ ಉಸ್ತೂವಾರಿ ಮಮತಾ ಗಟ್ಟಿ ಯವರು ಹಾಜರಿದ್ದರು.

ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೃಷ್ಣಪ್ಪರವರು,ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಮಂಜುನಾಥ ಕುಮಾರ್‌ರವರು, ಡಿಸಿಸಿ ಉಸ್ತುವಾರಿಗಳಾದ ದುರ್ಗಪ್ರಸಾದ್ ರೈ ,ಉಮಾನಾಥ್ ಶೆಟ್ಟಿ, ಭಾಸ್ಕರ ಗೌಡ ಕೋಡಿಂಬಾಲರವರು ಹಾಗು ಕೆಪಿಸಿಸಿ ಸದಸ್ಯರುಗಳು ಡಿಸಿಸಿ ಸದಸ್ಯರುಗಳು ಬ್ಲಾಕ್ ಕಾಂಗ್ರೆಸ್ ಸಮಿತಿ ಪಧಾದಿಕಾರಿಗಳು, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಮಾಜಿ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಸದಸ್ಯರು, ವಲಯ ಕಾಂಗ್ರೆಸ್ಸ್ ಸಮಿತಿ ಪಧಾದಿಕಾರಿಗಳು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version