ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕರ್ನಾಟಕ

ಮಂಗಳೂರಿನಿಂದ- ಗೋವಾ. “ಒಂದೇ ಭಾರತ್” ರೈಲು ಸೇವೆ. ಇಂದಿನಿಂದ ಪ್ರಾಯೋಗಿಕ ಸಂಚಾರ !!!

Published

on

ಮಂಗಳೂರು: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವನ್ನು ತಲುಪಿದೆ. ಸೆಮಿ ಹೈ ಸ್ಪೀಡ್‌ ನ ಈ ರೈಲು ಸೋಮವಾರ ಸಂಜೆ ಮಂಗಳೂರಿಗೆ ಬಂದಿದ್ದು, ಇಂದಿನಿಂದ ಪ್ರಾಯೋಗಿಕ ಸಂಚಾರ ಆರಂಭಿಸಲಿದೆ. ಚೆನೈನಿಂದ ಈ ರೈಲು ಮಂಗಳೂರಿಗೆ ಬಂದಿದೆ.

ಇಂದು ಬೆಳಗ್ಗೆ 8.30 ಕ್ಕೆ ಮಂಗಳೂರು ಸೆಂಟ್ರಲ್‌ ನಿಲ್ದಾಣದ ಮೂಲಕ ಹೊರಡುವ ಈ ರೈಲು ಮಧ್ಯಾಹ್ನ 1.15 ರ ಸಮಯಕ್ಕೆ ಮಡಗಾಂವ್‌ ತಲುಪಲಿದೆ. ನಂತರ 1.45 ಕ್ಕೆ ಮಡಗಾಂವ್‌ನಿಂದ ಹೊರಟು ಸಂಜೆ 6.30ರ ವೇಳೆಗೆ ಮಂಗಳೂರು ತಲುಪಲಿದೆ.

ಮಂಗಳೂರು ಸೆಂಟ್ರಲ್‌-ಮಡಗಾಂವ್‌ ಸೆಮಿ ಹೈ ಸ್ಪೀಡ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಡಿ.30 ರಿಂದ ಪ್ರಾರಂಭಗೊಳ್ಳಿದೆ ಎಂದು ವರದಿಯಾಗಿದೆ. ಆದರೆ ಈ ಕುರಿತು ರೈಲ್ವೆ ಮಂಡಳಿ ಇನ್ನೂ ಅಧಿಕೃತ ಪ್ರಕಟನೆ ಹೊರಡಿಸಿಲ್ಲ.



Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version