ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕರ್ನಾಟಕ

ಪುತ್ತೂರು ಉಪ ವಿಭಾಗದ ಆಯುಕ್ತ ಗಿರೀಶ್ ನಂದನ್ ವರ್ಗಾವಣೆ:ಹೊಸ ಆಯುಕ್ತರಾಗಿ ಜುಬಿನ್ ಮಹಾಪಾತ್ರ ನೇಮಕ ಸರಕಾರದ ಆದೇಶ.

Published

on

ಮಂಗಳೂರು(ಪುತ್ತೂರು): ಪುತ್ತೂರು ಉಪವಿಭಾಗದ ಆಯುಕ್ತ ಎಂ ಗಿರೀಶ್ ನಂದನ್ ಅವರನ್ನು ಮಂಗಳೂರು ಮಹಾನಗರಪಾಲಿಕೆ ಉಪ ಆಯುಕ್ತರಾಗಿ (ಕಂದಾಯ) ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಪುತ್ತೂರಿಗೆ 2021ನೇ ಬ್ಯಾಚ್ ನ ಐಎಎಸ್ ಅಧಿಕಾರಿ ಜುಬಿನ್ ಮಹಾಪಾತ್ರ ಅವರನ್ನು ಪುತ್ತೂರು ಉಪ ವಿಭಾಗದ ಆಯುಕ್ತರಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಪುತ್ತೂರು ಉಪವಿಭಾಗದ ಆಯುಕ್ತರಾಗಿದ್ದು, ಬಳಿಕ ಮಡಿಕೇರಿ ಉಪವಿಭಾಗಕ್ಕೆ ವರ್ಗಾವಣೆಗೊಂಡಿದ್ದ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ಡಾ.ಯತೀಶ್ ಉಳ್ಳಾಲ್ ಅವರನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿ (ಆಡಳಿತ) ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.


Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version