ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕ್ರೈಮ್ ನ್ಯೂಸ್ ಚರ್ಚೆಗಳು ಪ್ರಕಟಣೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಾಮಾನ್ಯ ಸ್ಥಳೀಯ
ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನಸಮಸ್ಯೆ ಜಲಸಿರಿ ಅಧಿಕಾರಿಗಳ ಸಭೆ ಕರೆದ ಶಾಸಕರು ಸಮಸ್ಯೆಗಳಿಗೆ ಸ್ಪಂದಿಸದಂತೆ ಅಧಿಕಾರಿಗಳ ತಡೆ: ಸಾರ್ವತ್ರಿಕ ಆಕ್ರೋಶ, ನೀತಿ ಸಂಹಿತೆ: ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಲ್ಲಿ ಅಧಿಕಾರಿಗಳ ಅಡ್ಡಿ- ಎರಡು ದಿನದಲ್ಲಿ ಕುಡಿಯುವ ನೀರು ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಕಚೇರಿಯಲ್ಲಿ ಧರಣಿ ಕೂರುವೆ: ಶಾಸಕ ಅಶೋಕ್ ರೈಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಅಂಬಿಕಾ ಕ್ಯಾಂಪಸ್ ತೆರಳುವ ಅಗಲೀಕರಣಗೊಂಡ ರಸ್ತೆ ಉದ್ಘಾಟನೆ ನಗರ ಬೆಳೆಯಬೇಕಾದರೆ ರಸ್ತೆಗಳು ಸಮರ್ಪಕವಾಗಿರಬೇಕು:ಅಶೋಕ್ ಕುಮಾರ್ ರೈಅಭಿಪ್ರಾಯ ಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಂಘ-ಸಂಸ್ಥೆಗಳು ಸಾಮಾನ್ಯ ಸ್ಥಳೀಯ
ಶಾಂತಿಮೊಗರು ಕಿಂಡಿ ಅಣೆಕಟ್ಟಿನಲ್ಲಿ ನೀರು ಸೋರಿಕೆ ತಡೆಯುವಂತೆ ಅಗ್ರಹಿಸಿ ಪ್ರತಿಭಟನೆ: ಒಂದು ವಾರದ ಸಮಯವಕಾಶ ಕೊಡಿ ಎಂದ ತಹಸೀಲ್ದಾರ್Published
12 months agoon
By
Akkare Newsಉಪ್ಪಿನಂಗಡಿ: ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅವಿರತ ಶ್ರಮಿಸುತ್ತಿರುವ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ರವರ ಶ್ರೀರಂಗಪಟ್ಟಣದಲ್ಲಿನ ಹೇಳಿಕೆ ಅವರ ಘನತೆಗೆ ಶೋಭೆ ತರುವುದಿಲ್ಲ. ಸಮಾಜದಲ್ಲಿ ಹಿರಿತನವನ್ನು ಹೊಂದಿರುವ ಅವರು, ಸಮಾಜದ ಮನಸ್ಸುಗಳನ್ನು ಅರಳಿಸಬೇಕೇ ವಿನಹ ಕೆರಳಿಸಬಾರದು. ಮನಸೋ ಇಚ್ಚೆ ಮಾತನಾಡಿ ಮತೀಯ ಸಂಘರ್ಷವನ್ನು ಉಂಟು ಮಾಡುವ ಯಾರೇ ಆಗಲಿ ಅವರ ವಿರುದ್ಧ ಸರಕಾರ ಕಟ್ಟುನಿಟ್ಟಿನ ಕ್ರಮ ಜರಗಿಸಬೇಕೆಂದು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ. ಒತ್ತಾಯಿಸಿದರು.
ಉಪ್ಪಿನಂಗಡಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ನಮ್ಮ ಧರ್ಮ ಸಂಸ್ಕೃತಿ, ಸಂಸ್ಕಾರದ ಆಚರಣೆಗೆ ಮುಕ್ತ ಅವಕಾಶ ಇರುವಂತೆಯೇ, ಅನ್ಯರ ಧಾರ್ಮಿಕ ನಂಬಿಕೆಯನ್ನು ಗೌರವಿಸುವುದು ನಮ್ಮ ಧರ್ಮ. ಮುಸ್ಲಿಂ ಸಮುದಾಯದ ಮಹಿಳೆಯರ ಬಗ್ಗೆ ತೀರಾ ಕೀಳು ಮಟ್ಟದ ಭಾಷೆಯಲ್ಲಿ ಅವಮಾನಿಸಿ ಹೇಳಿಕೆ ನೀಡಿರುವುದು ಅವರ ಗೌರವವನ್ನು ಅವರೇ ಇಳಿಸಿದಂತಾಗಿದೆ. ಮಾತ್ರವಲ್ಲದೆ ಸಭ್ಯರೆನಿಸಿಕೊಂಡ ದ.ಕ ಜಿಲ್ಲೆಯ ಜನತೆಗೆ ಅವಮಾನಿಸಿದಂತಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ನಡೆಯದಂತಾಗಲು ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಮುಂದಾಳು ಡಾ. ರಘು ಮಾತಾನಾಡಿ, ಹಲವಾರು ಶಾಲೆಗಳನ್ನು ನಡೆಸುತ್ತಿರುವ, ಧಾರ್ಮಿಕವಾಗಿ ಸಾಮಾಜಿಕವಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಸ್ವತಹ ಒರ್ವ ವೈದ್ಯರಾಗಿದ್ದೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ, ಕಾಂಗ್ರೆಸ್ ಮುಂದಾಳು ಅರ್ತಿಲ ಕೃಷ್ಣ ರಾವ್ ಉಪಸ್ಥಿತರಿದ್ದರು.