ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಬುಳೇರಿಕಟ್ಟೆ -ಸಾಜ- ಕುದ್ದುಪದವು ರಸ್ತೆ ಡಾಮರೀಕರಣಕ್ಕೆ ಶಾಸಕರಿಂದ ಗುದ್ದಲಿಪೂಜೆ ಪುತ್ತೂರು ಕ್ಷೇತ್ರದ ಅಭಿವೃದ್ದಿಯನ್ನು ಕಂಡು ಬಿಜೆಪಿಗರಿಗೆ ತಲೆ ತಿರುಗುತ್ತಿದೆ: ಎಂ ಎಸ್ ಮಹಮ್ಮದ್

Published

on

ಪುತ್ತೂರು: ಶಾಸಕರಾಗಿ ಕಳೆದ ಏಳುತಿಂಗಳಲ್ಲಿ ಅಶೋಕ್ ಕುಮಾರ್ ರೈಯವರು ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಕಂಡು ಬಿಜೆಪಿಗರಿಗೆ ತಲೆತಿರುಗಿದಂತಾಗಿದ್ದು , ಅಭಿವೃದ್ದಿಯನ್ನು ಕಂಡು ಸಹಿಸಲಾಗದ ಬಿಜೆಪಿಯವರು ಶಾಸಕರು ಮಾಡಿರುವ ಕೆಲಸವನ್ನು ನಾವು ಮಾಡಿದ್ದು ಎಂದು ಹೇಳುತ್ತಿದ್ದು ಇದು ನಾಚಿಕೇಡಿನ ಸಂಗತಿಯಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಹೇಳಿದರು.ಅವರು ಬಲ್ನಾಡು ಗ್ರಾಮದ ಬುಳೇರಿಕಟ್ಟೆ-ಸಾಜ ಕುದ್ದುಪದವು ಲೋಕೋಪಯೋಗಿ ರಸ್ತೆಗೆ ರೂ. ೧.೮೦ ಕೋಟಿ ರೂ ವೆಚ್ಚದಲ್ಲಿ ಡಾಮರೀಕರಣಕ್ಕೆ ಶಾಸಕರು ಅನುದಾನ ಬಿಡುಗಡೆ ಮಾಡಿದ್ದು ಇಸರ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.



ಕಳೇದ ವಿಧಾನಸಭಾ ಚುನಾವಣೆಯ ವೇಳೆ ವೋಟಿನ ಆಸೆಯಿಂದ ಸಿಕ್ಕಸಿಕ್ಕಲ್ಲೆಲ್ಲಾ ಮಾಜಿ ಶಾಸಕರು ಅನುದಾನ ಇಲ್ಲದೇ ಇದ್ದರೂ ಗುದ್ದಲಿಪೂಜೆ ಮಾಡಿ ಹೋಗಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪಕ್ಷಾತೀತವಾಗಿ ಕೆಲಸ ಮಾಡುತ್ತಿರುವ ಶಾಸಕರು ಅನುದಾನವನ್ನು ತಂದು ಅದೇ ರಸ್ತೆಯನ್ನು ಅಭಿವೃದ್ದಿ ಮಾಡುತ್ತಿದ್ದು ಈಗ ಬರುತ್ತಿರುವ ಅನುದಾನ ಸಿದ್ದರಾಮಯ್ಯ ಸರಕಾರದ ಅನುದಾನವಾಗಿದೆ ಎಂಬುದನ್ನು ಬಿಜೆಪಿಗರು ಅರಿತುಕೊಳ್ಳಬೇಕು. ಅಶೋಕ್ ರೈಯವರು ಮಾಡಿದ ಸಾಧನೆಯನ್ನು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ, ಶಾಸಕರಾಗಿದ್ದ ವೇಳೆ ಅಭಿವೃದ್ದಿ ಕೆಲಸ ಮಾಡದೆ ಜಾತಿ, ಧರ್ಮದ ಹೆಸರಿನಲ್ಲಿ ದೊಂಬರಾಟ ನಡೆಸಿದ್ದ ಬಿಜೆಪಿಗರಿಗೆ ಅಭಿವೃದ್ದಿ ಏನು ಎಂಬುದನ್ನು ಪುತ್ತೂರಿನ ಶಾಶಕರು ತೋರಿಸಿಕೊಟ್ಟಿದ್ದಾರೆ, ರಾಜಕೀಯ ಬಿಟ್ಟು ಶಸಕರಿಗೆ ಬಿಜೆಪಿ ಬೆಂಬಲ ನೀಡಬೇಕು ಎಂದು ಎಂ ಎಸ್ ಆಗ್ರಹಿಸಿದರು.


ಎಚ್ಚರವಹಿಸಿ ಶಾಸಕರ ಸೂಚನೆ
ಮಾಜಿಗಳು ಹಲವುಕಡೆ ತೆಂಗಿನ ಕಾಯಿ ಒಡೆದು ಹೋಗಿದ್ದಾರೆ, ತೆಂಗಿನ ಕಾಯಿ ಒಡೆದದ್ದು ಮಾತ್ರ ಅನುದಾನದ ಪ್ರಸ್ತಾವನೆಯೇ ಹೋಗಿರಲಿಲ್ಲ, ರಸ್ತೆಗೆ ಅನುದಾನ ನೀಡಿದ್ದು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರವಾಗಿದೆ. ನಾವು ತೆಂಗಿನ ಕಾಯಿ ಒಡೆದದ್ದು ಎಂದು ಹೇಳಿ ಕದ್ದುಮುಚ್ಚಿ ಬಿಜೆಪಿಯ ಮಾಜಿ ಶಾಸಕರು ರಸ್ತೆಗಳನ್ನು ಉದ್ಘಾಟನೆಯನ್ನೂ ಮಾಡಿಯರು ಈ ಬಗ್ಗೆ ಸಾರ್ವಜನಿಕರು ಎಚ್ಚರವಾಗಿರಬೇಕು ಎಂದು ಸಾಸಕ ಅಶೋಕ್ ರೈ ಹೇಳಿದರು. ಈ ರಸ್ತೆಯನ್ನು ಅಭಿವೃದ್ದಿ ಮಾಡಬೇಕು ಎಂಬ ಉದ್ದೇಶ ಅವರಿಗೆ ಇರುತ್ತಿದ್ದರೆ ೫ ವರ್ಷ ಶಾಸಕರಾಗಿದ್ದಾಗ ಯಾಕೆ ಮಾಡಲಿಲ್ಲ? ಅನುದಾನ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿರುವ ಶಾಸಕರು ವೋಟಿನ ಆಸೆಗಗಿ ತೆಂಗಿನ ಕಾಯಿ ಒಡೆದು ನಿಮೂರ್ತಿ ಮಾಡಿ ಹೋಗಿದ್ದು ಮಾತ್ರ ಅನುದಾನ ಕೊಟ್ಟದ್ದು ಸಿದ್ದರಾಮಯ್ಯ ಸರಕಾರವಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಭರಪೂರ ಅಭಿವೃದ್ದಿ ಕೆಲಸಗಳು ನಡೆಯಲಿದ್ದು ಹಲವರಿಗೆ ತಲೆ ತಿರುಗಬಹುದು ಎಂದು ಲೇವಡಿ ಮಾಡಿದರು. ಇದೇ ಸಂದರ್ಭದಲ್ಲಿ ಸಾರ್ಯ ಕೋಡಿಯಡ್ಕ ಪ ಜಾತಿ ಕಾಲನಿ ರಸ್ತೆಗೆ ೧೦ ಲಕ್ಷ ಅನುದಾನ ಬಿಡುಗಡೆಯಾಗಿದ್ದು ಅದರ ಗುದ್ದಲಿಪೂಜೆಯನ್ನು ಶಾಸಕರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಬಲ್ನಾಡು ಕಾಂಗ್ರೆಸ್ ವಲಯಾಧ್ಯಕ್ಷ ಚಂದಪ್ಪ ಪೂಜಾರಿ, ಬಲ್ನಾಡು ಬೂತ್ ಅಧ್ಯಕ್ಷ ನವೀನ್ ಕರ್ಕೆರ,ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಡಿಸಿಸಿ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಬುಳೇರಿಕಟ್ಟೆ ಪಪೂ ಕಾರ್ಯಾಧ್ಯಕ್ಷ ಪ್ರಕಾಶ್ ಚಂದ್ರ ಆಳ್ವ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾರ್ಯದರ್ಶಿ ಮಹಮ್ಮದ್ ಶರೀಫ್ ರೋಯಲ್,ಬೂತದ ಅಧ್ಯಕ್ಷ ಕೆ ಬಿ ಆಶ್ರಫ್, ಗ್ರಾಪಂ ಮಾಜಿ ಸದಸ್ಯ ಇದ್ದಿಕುಂಞಿ, ಜಗನ್ನಾಥ ರೈ, ಅಶೋಕ್ ಪಣೆತ್ತಡ್ಕ, ಇಲ್ಯಾಸ್ ಮಲ್ತಿಕಲ್ಲು, ಸಂಜೀವ ಪೂಜಾರಿ,ಜತ್ತಪ್ಪ ಪೂಜಾರಿ, ಕುಂಞಿ ಸಾರ್ಯ, ಉಮೇಶ್ ಪಣೆತ್ತಡ್ಕ, ಚನಿಯಪ್ಪ ಕೂಟೇಲು, ಹಮೀದ್ ಸಾಜ, ಅಬ್ದುಲ್ ರಹಿಮಾನ್ ಸಾರ್ಯ, ಸಂಜೀವ ಸಾರ್ಯ ಮೊದಲಾದವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version