ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಜ.20-21: ಪುತ್ತೂರಿನಲ್ಲಿ ರಾಷ್ಟ್ರ ಮಟ್ಟದ ಸಿಝ್ಲರ್ ಟ್ರೋಫಿ- 2024

Published

on

ಪುತ್ತೂರು: ಸಾಮೆತ್ತಡ್ಕ ಯುವಕ ಮಂಡಲದ ಆಶ್ರಯದಲ್ಲಿ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಸಾಮೆತ್ತಡ್ಕ ಇವರ ಸಹಯೋಗದೊಂದಿಗೆ ಯುವಕಮಂಡಲದ ಮಾಜಿ ಅಧ್ಯಕ್ಷ ದಿ. ಶ್ರೀನಾಥ್ ಆಚಾರ್ಯ ಸ್ಮರಣಾರ್ಥ ಹೊನಲು ಬೆಳಕಿನ ರಾಷ್ಟ್ರಮಟ್ಟದ ಆಹ್ವಾನಿತ ತಂಡಗಳ ನಿಗದಿತ ಓವರ್‌ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸಿಝ್ಲರ್ ಟ್ರೋಫಿ- ೨೦೨೪ನ್ನು ಸಂತ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಜ.೨೦ ಹಾಗೂ ೨೧ ರಂದು ಆಯೋಜಿಸಲಾಗಿದೆ ಎಂದು ಸಾಮೆತ್ತಡ್ಕ ಯುವಕ ಮಂಡಲದ ಕೋಶಾಧಿಕಾರಿ ಕವನ್ ನಾಯ್ಕ್ ದರ್ಬೆ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೭೬ ರಲ್ಲಿ ಆರಂಭಗೊAಡ ಸಾಮೆತ್ತಡ್ಕ ಯುವಕ ಮಂಡಲ ಅನೇಕ ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದು, ಸುವರ್ಣ ಮಹೋತ್ಸವದ ಸನಿಹದಲ್ಲಿಸುಮಾರು ೧೫೦ ಮಂದಿ ಸದಸ್ಯರನ್ನು ಹೊಂದಿದೆ. ಪ್ರತಿ ವರ್ಷ ಕ್ರಿಕೆಟ್ ಪಂದ್ಯಾಟ ನಡೆಸಿಕೊಂಡು ಬಂದಿದ್ದು, ಅದರಲ್ಲೂ ಹೊನಲು ಬೆಳಕಿನ ಪಂದ್ಯಾಟವನ್ನು ೧೯೯೯ರಿಂದ ಆರಂಭಿಸಿ ಅದನ್ನು ೩ ವರ್ಷಕ್ಕೊಮ್ಮೆ ಮಾಡಿಕೊಂಡು ಬರುತ್ತಿದ್ದು ಇದೀಗ ೬ನೇ ಭಾರಿ ಈ ಪಂದ್ಯಾಟ ನಡೆಯಲಿದೆ ಎಂದರು.

ಉದ್ಘಾಟನೆ ಪAದ್ಯಾಟವನ್ನು ಜ.೨೦ ರಂದು ಸಂಜೆ ಪುತ್ತೂರು ಸಹಾಯಕ ಕಮೀಷನರ್ ಜುಬಿನ್ ಮಹಾಪಾತ್ರ ಉದ್ಘಾಟಿಸಲಿದ್ದಾರೆ. ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ರೆ. ಫಾ. ಲಾರೆನ್ಸ್ ಮಸ್ಕರೇನ್ಹಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಜ.೨೧ ರಂದು ರಾತ್ರಿ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದು, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಸಭೆ ಸಭಾಪತಿ ಯು.ಟಿ. ಖಾದರ್, ಮಾಜಿ ಸಚಿವ ಬಿ. ರಮನಾಥ ರೈ, ಶಾಸಕರಾದ ಮಂತರ್ ಗೌಡ, ಭಾಗೀರಥಿ ಮುರುಳ್ಯ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಟಿ. ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಆಲಿ, ಮಿಥುನ್ ರೈ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.




ಈ ಬಾರಿ ಮುಂಬಯಿ, ಮಧ್ಯಪ್ರದೇಶ, ಚೆನ್ನೆöÊ, ಕುಂದಾಪುರ, ಬೆಂಗಳೂರು, ಪುತ್ತೂರು ಹೀಗೆ ವಿವಿಧೆಡೆಯ ಎಂಟು ಬಲಿಷ್ಟ ತಂಡಗಳು ಆರನೇ ಬಾರಿಯ ಸಿಝ್ಲರ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿವೆ. ಸ್ಟಾರ್ ಆಟಗಾರರಾದ ಸಾಗರ್ ಭಂಡಾರಿ, ರಾಜಾ ಸಾಲಿಗ್ರಾಮ, ಲೋಕಿ ಪುತ್ತೂರು ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಪಂದ್ಯಾಟದಲ್ಲಿ ವಿಜೇತರಿಗೆ ಪ್ರಥಮ ಬಹುಮಾನ ರೂ. ೨ ಲಕ್ಷ, ದ್ವಿತೀಯ ೧ ಲಕ್ಷ ಹಾಗೂ ಟ್ರೋಫಿ, ಮ್ಯಾನ್ ಆಫ್ ದಿ ಸೀರೀಸ್‌ಗೆ ಬೈಕ್ ಹಾಗೂ ಇತರ ಸರ್ವಾಂಗೀಣ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ. ಸುಮಾರು ೨೫ ಸಾವಿರ ಮಂದಿ ಪಂದ್ಯಾಟವಚನ್ನು ವೀಕ್ಷಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಾಮೆತಡ್ಕ ಮಂಡಲದ ಅಧ್ಯಕ್ಷ ರೋಶನ್ ರೆಬೆಲ್ಲೋ, ಉಪಾಧ್ಯಕ್ಷ ಪ್ರಸಾದ್ ಪಿ., ಜತೆ ಕಾರ್ಯದರ್ಶಿ ಇಂದಿವರ್ ಭಟ್, ಹಿರಿಯ ಸದಸ್ಯ ಮಹಮದ್ ತ್ವಹಾ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version