ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ಕಾಂಗ್ರೆಸ್ ಮುಖಂಡ, ಮಾಜಿ ತಾ.ಪಂ ಸದಸ್ಯ ಅಶೋಕ್ ನೆಕ್ರಾಜೆಗೆ ಸ್ಥಾನ ಲಭ್ಯ ಸಾಧ್ಯ!?

Published

on

ಭಾರತದ ನಾಗಕ್ಷೇತ್ರವೆನಿಸಿರುವ ಪವಿತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹಾಲಿ ವ್ಯವಸ್ಥಾಪನಾ ಸಮಿತಿಯ ಅವಧಿ ಕೆಲ ತಿಂಗಳಲ್ಲೇ ಮುಗಿಯಲಿದ್ದು, ನೂತನ ಸಮಿತಿಯಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ತಾ.ಪಂ ಸದಸ್ಯ ಅಶೋಕ್ ನೆಕ್ರಾಜೆಗೆ ಸ್ಥಾನ ಲಭ್ಯವಾಗುವ ಸಾಧ್ಯತೆ ಇದೆ. ಯುವ ನಾಯಕ ಅಶೋಕ್ ನೆಕ್ರಾಜಿಯವರ ಹೆಸರು ಪ್ರಮುಖವಾಗಿ ಮುನ್ನಲೆಗೆ ಬಂದಿದ್ದು, ಕುಕ್ಕೆ ಸುಬ್ರಹ್ಮಣ್ಯನ ಆಡಳಿತ ಚುಕ್ಕಾಣಿ ಹಿಡಿಯುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.ಸುಬ್ರಹ್ಮಣ್ಯನ ಪರಮಭಕ್ತನಾಗಿರುವ ನೆಕ್ರಾಜೆ ಕಾಂಗ್ರೆಸ್ ಹೈಕಮಾಂಡ್, ಒಕ್ಕಲಿಗ ಗೌಡರ ನಾಯಕ ಡಿಕೆ ಶಿವಕುಮಾರ್ ರ ಪರಮಾಪ್ತರು ಕೂಡಾ ಹೌದು. ಇದು ಅಶೋಕ್ ರಿಗೆ ಲಾಭವಾಗಿ ಪರಿಣಮಿಸಿದರೆ ನೂತನ ಆಡಳಿತ ಸಮಿತಿಯಲ್ಲಿ ಇವರು ಅಧ್ಯಕ್ಷರಾಗುವುದು ಬಹುತೇಕ ನಿಶ್ಚಿತ.

ಕಾಂಗ್ರೆಸ್ ನ ಯುವ ನಾಯಕನಾಗಿರುವ ಅಶೋಕ್ ಹಿಂದೆ ಸುಳ್ಯ ತಾ.ಪಂ.ಸದಸ್ಯರಾಗಿದ್ದಾಗ ವಿಪಕ್ಷ ನಾಯಕರಾಗಿ ಅತ್ಯುತ್ತಮ ವಾಕ್ ಪಟುತ್ವದಿಂದ ಆಡಳಿತ ಪಕ್ಷದ ಹಿರಿಯ ನಾಯಕರನ್ನು ಸಭೆಯಲ್ಲಿ ಎದುರಿಸುವ ಮುಖಾಂತರ ಗಮನಸೆಳೆಯುತ್ತಿದ್ದವರು. ಜನಸಾಮಾನ್ಯರ ಸಮಸ್ಯೆಗಳನ್ನು, ವಿವಿಧ ಇಲಾಖೆಯ ಕಾರ್ಯವೈಫಲ್ಯವನ್ನು ಸಭೆಯಲ್ಲಿ ಬೊಟ್ಟು ಮಾಡಿ ಪ್ರಭಾವಿ ಜನಪ್ರತಿನಿಧಿಯಾಗಿ, ಯುವ ನಾಯಕನಾಗಿ ಬೆಳೆದವರು.

ಎಲ್ಲಕ್ಕಿಂತ ಮುಖ್ಯವಾಗಿ ಸಂಸದರ ಆದರ್ಶ ಗ್ರಾಮ ಬಳ್ಳ ತನ್ನ ತಾ.ಪಂ ಸ್ವಕ್ಷೇತ್ರವಾಗಿದ್ದು ಸ್ವತಃ ಸಂಸದರ ಗ್ರಾಮಕ್ಕೆ ತರಿಸಿದ ಅನುದಾನಕ್ಕಿಂತ ಹೆಚ್ಚು ಸ್ವಪ್ರಯತ್ನ ಮೂಲಕ ವಿವಿಧ ಮೂಲಗಳಿಂದ ತರಿಸಿ ಗ್ರಾಮದ ರಸ್ತೆ ಸಹಿತ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ ಪಕ್ಷಾತೀತವಾಗಿ ಗೌರವಕ್ಕೆ ಪಾತ್ರರಾಗಿರುವುದು ಗಮನಾರ್ಹ.





ಗ್ರಾಮದ ಕಾಂಕ್ರೀಟ್ ಕರಣಗೊಂಡ ರಸ್ತೆ ಗೆ ಸಂಬಂಧಿಸಿದ ಕಾಂಟ್ರಾಕ್ಟ್ ದಾರರು ಕ್ಯೂರಿಂಗ್ ಗೊಳ್ಳಲು ನೀರು ಹಾಯಿಸದಿದ್ದಾಗ ರಸ್ತೆ ಗುಣಮಟ್ಟ ಕಾಪಾಡಲು ತಾನೇ ಸ್ವತಃ ಸದ್ದಿಲ್ಲದೇ ಓರ್ವ ಜನಸಾಮಾನ್ಯನಂತೆ ನೀರು ಹಾಯಿಸಿದ ಕಾರ್ಯಕ್ಕೆ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು.

ಕಡಬ ತಾಲೂಕು ರಚನೆಯಾದ ಬಳಿಕ ಸುಳ್ಯದಿಂದ ಬೇರ್ಪಟ್ಟು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಮತ್ತು ಅಶೋಕ್ ಅವರ ಏನೆಕಲ್ಲು ಗ್ರಾಮ ಎರಡೂ ಕಡಬ ತಾಲೂಕಿಗೊಳಪಟ್ಟಿದೆ.ಒಕ್ಕಲಿಗ ಗೌಡ ಸಮುದಾಯದ ಹಿನ್ನೆಲೆ, ಸ್ಥಳೀಯ ನಾಯಕತ್ವ ಮತ್ತು ಹೈಕಮಾಂಡ್ ಒಲವು, ಒಂದೇ ತಾಲ್ಲೂಕು ಮಾತ್ರವಲ್ಲದೆ ಕ್ಷೇತ್ರದ ಪರಿಸರದವರಾಗಿದ್ದು ಎಲ್ಲ ಚಿರಪರಿಚಿತ. ಜೊತೆಗೆ ಯುವ ಮನಸ್ಸುಗಳ ಬೆಸೆಯುವ ಅಶೋಕ್ ನೆಕ್ರಾಜೆಗೆ ಅವಕಾಶ ನೀಡಿದಲ್ಲಿ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಸಾಧಿಸಬಹುದು ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version