ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ಸೋಲಿನಿಂದ ಭಯಗೊಂಡ ಬಿಜೆಪಿ ಅಭ್ಯರ್ಥಿ, ಸೋಲು ತಪ್ಪಿಸಲು ಮೋದಿಯ ಮೊರೆ ಹೋದ ಜಿಲ್ಲಾ ಬಿಜೆಪಿ ಹಿಂದುತ್ವದ ಭದ್ರಕೋಟೆಯಲ್ಲಿ ಸೋಲಿನ ಭಯದಲ್ಲಿ ಬಿಜೆಪಿ : ಪ್ರದೀಪ್ ಬೇಲಾಡಿ

Published

on

ಸಾರ್ವಜನಿಕರನ್ನು ಹಾಗೂ ಮಾದ್ಯಮಗಳನ್ನು ಎದುರಿಸಿ ಅನುಭವ ಇಲ್ಲದ, ಸಂಘಪರಿವಾರದಲ್ಲಿಯೂ ಯಾವುದೇ ಕೆಲಸ ಮಾಡಿದ ಅನುಭವ ಹೊಂದಿರದ ಮಂಗಳೂರು ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರು ಅವರ ಅಪ್ರಬುದ್ದ ಮಾತುಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಟ್ರೋಲ್ ಆಗುತ್ತಿರುವುದು ಮಂಗಳೂರಿನ ಬಿಜೆಪಿ ಹಾಗೂ ಬಿಜೆಪಿ ಪರವಾಗಿರುವ ಸಂಘಟನೆಯ ಹಿರಿ ತಲೆಗಳಿಗೆ ವಿಪರೀತ ತಲೆ ಬಿಸಿಯನ್ನುಂಟು ಮಾಡಿದೆ.

ಹೀಗೆ ಬಿಟ್ಟರೆ ಸೋಲು ಖಚಿತ ಎನ್ನುವ ಗುಪ್ತ ಮಾಹಿತಿಯಿಂದ ಕಂಗೆಟ್ಟ ಬಿಜೆಪಿ ಪರಿವಾರಿಗಳ ಬಿಳಿತಲೆಗಳು ಹೇಗಾದರೂ ಮಾಡಿ ಚೌಟರನ್ನು ಗೆಲ್ಲಿಸಲು ಮಂಗಳೂರಿಗೆ ಮೋದಿಯನ್ನು ಕರೆಸುತ್ತಿದ್ದಾರೆ.ಅಲ್ಲಿಗೆ ಅಬ್ಕಿ ಬಾರ್ ಚಾರ್ಸೌ ಪಾರ್ ಎನ್ನುತ್ತಿದವರಿಗೆ ಸೋಲಿನ ಭಯ ಎಷ್ಟು ಕಾಡುತ್ತಿದೆ ಅನ್ನುವುದು ಬಹಿರಂಗವಾಯಿತು.

ಮಂಗಳೂರು ಸಂಘಪರಿವಾರದ ಪ್ರಯೋಗಶಾಲೆ, ಮಂಗಳೂರು ಬಿಜೆಪಿಯ ಭದ್ರ ಕೋಟೆ, ದೇಶದಲ್ಲೇ ಮಂಗಳೂರು ವಿಭಾಗದಲ್ಲಿ ಮಾತ್ರಾ RSS ಗಟ್ಟಿಯಾಗಿರುವುದು ಎನ್ನುವ ಬಿಜೆಪಿಗರಿಗೆ ಚುನಾವಣೆ ಗೆಲ್ಲಲು ಮೋದಿಗೆ ಯಾಕೆ ಮೊರೆ ಹೋಗಬೇಕಿತ್ತು..?





ಮಂಗಳೂರು ಸಂಘಪರಿವಾರಕ್ಕೆ ಇದು ನಮ್ಮ ಪ್ರಯೋಗಶಾಲೆ ಇಲ್ಲಿ ಬಿಜೆಪಿ ಅಭ್ಯರ್ಥಿಯನ್ನು ನಾವೇ ಗೆಲ್ಲಿಸುತ್ತೇವೆ ಎಂದು ಗಟ್ಟಿಯಾಗಿ ಹೇಳುವ ದೈರ್ಯವಿಲ್ಲ ಯಾಕೆ..? ಮಂಗಳೂರು ಬಿಜೆಪಿಯ ಎಲ್ಲಾ ಆಂತರಿಕ ವಿಚಾರದಲ್ಲೂ ಮೂಗು ತೂರಿಸುವ ಮಂಗಳೂರು RSS ನಾಯಕರಿಗೆ ಚೌಟರನ್ನು ಗೆಲ್ಲಿಸುವ ಶಕ್ತಿ ಸಾಮರ್ಥ್ಯ ಇಲ್ಲವೇ ಎಂದು ಈಗ ಬಿಜೆಪಿಗರು ಪ್ರಶ್ನೆ ಮಾಡಬೇಕು.

ಮಂಗಳೂರಿನಂತಾ RSS ಹಿಡಿತ ಇರುವ ಲೋಕಸಭಾ ಕ್ಷೇತ್ರವನ್ನೇ ಇವರಿಗೆ ಮೋದಿ ಹೆಸರು ಹೇಳದೇ ಚುನಾವಣೆ ಎದುರಿಸುವ ದೈರ್ಯ ಇಲ್ಲ, ಇನ್ನು ಅಬ್ಕಿ ಬಾರ್ ಚಾರ್ಸೌ ಪಾರ್ ಅಂತ ಜನರನ್ನು ಮೂರ್ಖರನ್ನಾಗಿಸಲು ಹೊರಟ್ಟಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version