ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಭಾರತ್ ಬ್ಯಾಂಕ್ ಗೆ “ಅತ್ಯುತ್ತಮ ಐಟಿ ರಿಸ್ಕ್ ಮ್ಯಾನೇಜ್ಮೆಂಟ್ ಪ್ರಶಸ್ತಿ”ಯ ಗರಿ

Published

on

ಫೆಬ್ರವರಿ 9, 2024 ರಂದು ಮುಂಬೈನಲ್ಲಿ ನಡೆದ 19 ನೆಯ ಬ್ಯಾಂಕಿಂಗ್ ತಂತ್ರಜ್ಞಾನ ಸಮ್ಮೇಳನದಲ್ಲಿ *ಪ್ರತಿಷ್ಠಿತ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ನಿಂದ ಭಾರತ್ ಕೋ-ಅಪರೇಟಿವ್ ಬ್ಯಾಂಕ್ “ಅತ್ಯುತ್ತಮ ಐಟಿ ರಿಸ್ಕ್ ಮ್ಯಾನೇಜ್ಮೆಂಟ್ ಪ್ರಶಸ್ತಿ” ಯನ್ನು ಪಡೆದುಕೊಂಡಿದೆ. ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರ ಪರವಾಗಿ *ಶ್ರೀ ಭಾಸ್ಕರ್ ರಾವ್ ( CISO) ಅವರು RBI ನ ಗವರ್ನರ್ ಶ್ರೀ ಟಿ.ರಬಿ ಶಂಕರ್ ಮತ್ತು ಶ್ರೀ ಎ.ಕೆ. ಗೋಯೆಲ್,(ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಅಧ್ಯಕ್ಷ IBA ಮತ್ತು MD CEO) ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.





ಜಯ ಸಿ. ಸುವರ್ಣ ಪ್ಯಾನೆಲ್*ನ ಹೊಸ ನಿರ್ದೇಶಕ ಮಂಡಳಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ನಾಲ್ಕೇ ತಿಂಗಳಲ್ಲಿ ಭಾರತ್ ಬ್ಯಾಂಕ್ 4 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. *ಭಾರತ್ ಬ್ಯಾಂಕ್ ನ ಸಿಬ್ಬಂದಿ ವರ್ಗ,ಮತ್ತು ವ್ಯವಸ್ಥಾಪಕ ಮಂಡಳಿಯ ಅವಿರತ ಪರಿಶ್ರಮಕ್ಕೆ ಸಂದ ಗೌರವ ಇದಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version