ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

44 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ – ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆಯಾಗಿ ಮಮತಾ ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸದಾಶಿವ ಉಲ್ಲಾಳ್

Published

on

ಬೆಂಗಳೂರು : ರಾಜ್ಯದ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಗೆ ಅನುಮೋದನೆ ನೀಡಲಾಗಿದೆ. ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಇದರ ಮಧ್ಯೆಯೇ 44 ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದೆ.ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಗೆ ಅಸ್ತು ಅಂದಿದ್ದು ಒಟ್ಟು 44 ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡಿದೆ. ಸರ್ಕಾರ, ಕೆಲ ಜಿಲ್ಲಾಧ್ಯಕ್ಷರು, ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮಂಡಳಿಗಳ ಅಧ್ಯಕ್ಷಗಿರಿಯ ಸ್ಥಾನಮಾನ ನೀಡಿದೆ.

ಈಗಾಗಲೇ ಆಯಾ, ಆಯಾ ಇಲಾಖೆಗಳಿಗೆ ಅಧ್ಯಕ್ಷರ ಪಟ್ಟಿಯನ್ನು ರವಾನೆ ಮಾಡಲಾಗಿದ್ದು, ಪ್ರತಿಯೊಬ್ಬರಿಗೂ ವೈಯುಕ್ತಿಕವಾಗಿ ನೇಮಕವಾಗಿರುವ ಬಗ್ಗೆ ಆದೇಶ ಕೂಡ ಕಳುಹಿಸಿ ಕೊಡಲಾಗಿದೆ. ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸುವಂತೆ ತಿಳಿಸಿದೆ.


ನಿಯಮ ಮಂಡಳಿಯ ಪಟ್ಟಿಯನ್ನು ರಿಲೀಸ್ ಮಾಡಿದ ರಾಜ್ಯ ಸರ್ಕಾರ ಅದರಲ್ಲಿ ಕೌಶಲ್ಯಾಭಿವೃದ್ಧಿ. ಕ್ರೀಡಾ ಪ್ರಾಧಿಕಾರ, ಚಲನಚಿತ್ರ ಮಂಡಳಿ, ನಗರಾಭಿವೃದ್ಧಿ ಹೀಗೆ ನಿಗಮದ ಅಧ್ಯಕ್ಷರನ್ನಾಗಿ ಆಯ್ಕೆಯಾದವರ ಹೆಸರನ್ನು ಬಿಡುಗಡೆ ಮಾಡಿದೆ. ಒಟ್ಟು 44 ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಸಿಕ್ಕಿದೆ.

ಈ ಬಗ್ಗೆ ಮಾಹಿತಿ ಇಲ್ಲಿದೆ.ಯಾರ್ಯಾರಿಗೆ ಯಾವ್ಯಾವ ಸ್ಥಾನ..!?

• ನಾಗಲಕ್ಷ್ಮಿ ಚೌಧರಿ – ಅಧ್ಯಕ್ಷರು, ಮಹಿಳಾ ಆಯೋಗ
• ಮರಿಗೌಡ – ಅಧ್ಯಕ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
. ವಿನೋದ್ ಅಸೂಟಿ – ಉಪಾಧ್ಯಕ್ಷ ಕ್ರೀಡಾ ಪ್ರಾಧಿಕಾರ
• ಸರೋವರ ಶ್ರೀನಿವಾಸ್ ಅಧ್ಯಕ್ಷ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
• ಅಲ್ತಾಫ್ ಅಧ್ಯಕ್ಷ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ
• ಕಾಂತಾ ನಾಯಕ್ – ಅಧ್ಯಕ್ಷೆ ಕೌಶಲ್ಯ ಅಭಿವೃದ್ಧಿ ನಿಗಮ
• ಎಚ್.ಎಂ. ರೇವಣ್ಣ – ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ
• ಆಂಜನೇಯಲು – ಅಧ್ಯಕ್ಷ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ
• ಮಂಜುನಾಥ್ ಗೌಡ – ಮಲೆನಾಡು ಪ್ರಾಧಿಕಾರ
• ಸುಂದರೇಶ್ -ಶಿವಮೊಗ್ಗ ಅಭಿವೃದ್ಧಿ ಪ್ರಾಧಿಕಾರ
• ಮಂಡ್ಯ ಡಾ.ಹೆಚ್ ಕೃಷ್ಣ – ಆಹಾರ ನಿಗಮ
• ಪಲ್ಲವಿ – ಸಾಂಬಾರು ಮಂಡಳಿ
• ಜಯಸಿಂಹ- ಬ್ರಾಹ್ಮಣ ಅಭಿವೃದ್ಧಿ ಮಂಡಳಿ
• ವಿಜಯ್ ಕೆ ಮುಳುಗುಂಡ್- ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ
• ಮರಿಸ್ವಾಮಿ ಚಾಮರಾಜನಗರ- ಅಧ್ಯಕ್ಷರು ಕಾಡಾ, ಮೈಸೂರು
• ಸದಾಶಿವ ಉಲ್ಲಾಳ್ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ
• ರಘನಂದನ್ ರಾಮಣ್ಣ-ಬೆಂಗಳೂರು ಮೈಸೂರು ಇನ್ಸಾಸ್ಟ್ರಕ್ಟರ್ ಕಾರಿಡಾರ್ ಪ್ರದೇಶ ಯೋಜನೆ ಪ್ರಾಧಿಕಾರ
• ಬಸವರಾಜ್ ಜಾಬಶೆಟ್ಟಿ- ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ
• ಸಾಧು ಕೋಕಿಲ ಕರ್ನಾಟಕ ಚಲನಚಿತ್ರ ಅಕಾಡೆಮಿ
• ಮಮತಾ ಗಟ್ಟಿ – ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ
• ಅಯೂಬ್ ಖಾನ್ ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ
* ಬಿ.ಹೆಚ್.ಹರೀಶ್ – ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಅಧ್ಯಕ್ಷ
* ಡಾ.ಅಂಶುಮಂತ್ – ಭದ್ರಾ ಕಾಡಾ ಅಧ್ಯಕ್ಷ
• ಜೆ.ಎಸ್.ಆಂಜನೇಯಲು – ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ
• ಡಾ.ಬಿ.ಯೋಗೇಶ್ ಬಾಬು ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ
• ಮರೀಗೌಡ ಯಾದಗಿರಿ – ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ

• ದೇವೇಂದ್ರಪ್ಪ ವರ್ತೂರು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಅಧ್ಯಕ್ಷ

• ರಾಜಶೇಖರ್ ರಾಮಸ್ವರಂ- ಕರ್ನಾಟಕ ಜೈವಿಕ ಇಂಧನ ಮಂಡಳಿ ಅಧ್ಯಕ್ಷ

* ಕೆ.ಮರೀಗೌಡ – ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

* ಎಸ್.ಮನೋಹರ್ – ಮೈಸೂರು ಎಲೆಕ್ನಿಕಲ್ ಇಂಡಸ್ಟ್ರೀಸ್ ಲಿಮಿಟೆಡ್

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version