ಅಂತರರಾಷ್ಟ್ರೀಯ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಕ್ರೀಡೆ ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಧಾರ್ಮಿಕ ಪ್ರಕಟಣೆ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಉಪ್ಪಿನಂಗಡಿ ; 30 31 ರಂದು ಶಾಸಕ ಅಶೋಕ್ ಕುಮಾರ್ ರೈ ಸಾರಥ್ಯದಲ್ಲಿ ವಿಜಯ - ವಿಕ್ರಮ ಕಂಬಳ ಆಹಾರ ಮೇಳ .ಕೃಷಿ ಮೇಳ.ವಿವಿಧ ಖಾದ್ಯಗಳು. ಸಾಂಸ್ಕೃತಿಕ ಕಾರ್ಯಕ್ರಮಅಂತರರಾಷ್ಟ್ರೀಯ ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಪ್ರತಿಭಾ ಪುರಸ್ಕಾರ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ವಿಶೇಷ ವರದಿ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಬೆಳ್ತಂಗಡಿ: ವಿಶ್ವ ಮಹಿಳಾ ದಿನಾಚರಣೆ ಆಚರಣೆ , ಮಕ್ಕಳಿಗೆ ಜೀವನ ಶಿಕ್ಷಣ ನೀಡಿ - ಸಂಸ್ಕಾರ ಕಲಿಸುವಲ್ಲಿ ಮಹಿಳೆಯ ಪಾತ್ರವೂ ಪುರುಷರಷ್ಟೇ ಪ್ರಧಾನ ; ಪ್ರೊಫೆಸರ್ ಶ್ರೀಮತಿ ತ್ರಿಶಲಾ ಜೈನ್ ಕೆ.ಎಸ್ಅಂತರರಾಷ್ಟ್ರೀಯ ಇತರ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕ್ರೈಮ್ ನ್ಯೂಸ್ ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಬ್ರೇಕಿಂಗ್ ನ್ಯೂಸ್ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಂಘ-ಸಂಸ್ಥೆಗಳು ಸ್ಥಳೀಯ
ವಿಟ್ಲ ಪೊಲೀಸ್ ಠಾಣೆ ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ಕಳವು ಪ್ರಕರಣ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ರಿಂದ ಮೂವರು ಅಂತರಾಜ್ಯ ಕಳ್ಳರ ಬಂಧನPublished
2 years agoon
By
Akkare News
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಚಂದ್ರನ ಮೇಲಿನ ಕಲ್ಲನ್ನು ಭೂಮಿಗೆ ತರುವ ಉದ್ದೇಶ ಹೊಂದಿರುವ ತನ್ನ ಮಹತ್ವಕಾಂಕ್ಷೆ ಯೋಜನೆಗೆ 2 ರಾಕೆಟ್ಗಳನ್ನು ಬಳಸಲಿದೆ. ಒಂದೇ ಯೋಜನೆಗೆ ಎರಡು ರಾಕೆಟ್ ಬಳಕೆ ಇಸ್ರೋ ಇತಿಹಾಸದಲ್ಲೇ ಮೊದಲು ಆಗಿದೆ.
ಚಂದ್ರಯಾನ 4 ಯೋಜನೆಯಲ್ಲಿ ಅತ್ಯಂತ ತೂಕದ ಉಪಗ್ರಹ ಹೊತ್ತೊಯ್ಯಬಲ್ಲ ಎಲ್ವಿಎಂ-3 ಮತ್ತು ಇಸ್ರೋದ ಅತ್ಯಂತ ಯಶಸ್ವಿ ರಾಕೆಟ್ಗಳ ಪೈಕಿ ಒಂದಾದ ಪಿಎಸ್ಎಲ್ವಿ ಅನ್ನು ಎರಡು ಪ್ರತ್ಯೇಕ ದಿನಗಳಂದು ಹಾರಿಬಿಡಲಾಗುವುದು.






ಇಸ್ರೋದ ಈ ಯೋಜನೆ ಯಶಸ್ವಿಯಾದಲ್ಲಿ ಚಂದ್ರನಿಂದ ಮಾದರಿ ಸಂಗ್ರಹಿಸಿ ಭೂಮಿಗೆ ತಂದ 4ನೇ ದೇಶ ಭಾರತವಾಗಲಿದೆ. ಈ ಮೊದಲು ರಷ್ಯಾ, ಅಮೆರಿಕ ಮತ್ತು ಚೀನಾ ಈ ಸಾಹಸದಲ್ಲಿ ಯಶಸ್ವಿಯಾಗಿವೆ.
ಈ ಹಿಂದಿನ ಮೂರು ಚಂದ್ರಯಾನ ಯೋಜನೆಗಳಲ್ಲಿ 2-3 ಮಾಡ್ಯೂಲ್ಗಳು ಇರುತ್ತಿದ್ದವು. ಆದರೆ ಚಂದ್ರಯಾನ 4 ಒಟ್ಟು 5 ಬಾಹ್ಯಾಕಾಶ ಮಾಡ್ಯೂಲ್ (ಉಪಕರಣ) ಹೊಂದಿರಲಿದೆ.
ಅವುಗಳೆಂದರೆ ಪ್ರೊಪಲ್ಷನ್ ಮಾಡ್ಯೂಲ್, ಡಿಸೆಂಡರ್ ಮಾಡ್ಯೂಲ್, ಅಸೆಂಡರ್ ಮಾಡ್ಯೂಲ್, ಟ್ರಾನ್ಸ್ಫರ್ ಮಾಡ್ಯೂಲ್ ಮತ್ತು ರೀ ಎಂಟ್ರಿ ಮಾಡ್ಯೂಲ್. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಈ ಮಾಹಿತಿ ಹಂಚಿಕೊಂಡಿದ್ದಾರೆ.