ಅಂಬಾನಿ ಮಗನ ಮದುವೆ ಪ್ರಯುಕ್ತ 50 ಬಡ ಜೋಡಿಗೆ ಮದುವೆ – ಅಬ್ಬಬ್ಬಾ.. ಅವರಿಗೆ ಕೊಟ್ಟ ಉಡುಗೊರೆಯಾದ್ರು ಏನು ?ಬೆಳ್ಳಿ, ಬಂಗಾರ, ಹಣದ ಬಗ್ಗೆ ಕೇಳಿದ್ರೆ ದಂಗಾಗ್ತೀರಾ !! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
Ambani Family: ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ, ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ (Nita Ambani) ದಂಪತಿ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹಕ್ಕೆ ದಿನ ಗಣನೆ ಆರಂಭವಾಗಿದೆ. ವಿವಾಹದ ತಯಾರಿಯಂತೂ ಭರ್ಜರಿಯಾಗೇ ನಡೆಯುತ್ತಿದೆ. ಈ ನಡುವೆ ಅಂಬಾನಿ ಕುಟುಂಬ ಮಹತ್ತರವಾದ ಕಾರ್ಯವೊಂದನ್ನು ಮಾಡಿದೆ.
ಹೌದು, ಜುಲೈ 12ರಂದು ಮುಂಬೈಯಲ್ಲಿ ಅನಂತ್ ಅಂಬಾನಿ ಮದುವೆ ನಡೆಯಲಿದ್ದು ಅದ್ಧೂರಿ ಸಮಾರಂಭ ಆಯೋಜಿಸಲಾಗಿದೆ. ಅದಕ್ಕೆ ಮುನ್ನುಡಿಯಾಗಿ ಜುಲೈ 2ರಂದು ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಸುಮಾರು 50 ಬಡ ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಿ ಮಾದರಿಯಾಗಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಪ್ರದೇಶದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚು ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಈ ಸಾಮೂಹಿಕ ವಿವಾಹವಾದ ಬಳಿಕ ನವ ವಧು-ವರರಿಗೆ ಅಂಬಾನಿ ಕುಟುಂಬ ಏನೆಲ್ಲಾ ಉಡುಗೊರೆ ನೀಡಿತು, ಕೊಟ್ಟ ಚಿನ್ನ-ಬೆಳ್ಳಿ ಎಷ್ಟು, ಹಣವೆಷ್ಟು ಎಂದು ಕೇಳಿದರೆ ನೀವೇ ಶಾಕ್ ಆಗುತ್ತೀರಾ!! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ಈ ಸಾಮೂಹಿಕ ವಿವಾಹದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪ್ರತಿ ಜೋಡಿಗೂ ಮಂಗಳ ಸೂತ್ರ, ಮದುವೆಯ ಉಂಗುರಗಳು, ಮೂಗುತಿ ಸೇರಿದಂತೆ ಚಿನ್ನಾಭರಣಗಳನ್ನು ನೀಡಲಾಯಿತು. ಜೊತೆಗೆ ಕಾಲುಂಗುರ, ಕಾಲ್ಗೆಜ್ಜೆಯಂಥ ಬೆಳ್ಳಿ ಆಭರಣಗಳನ್ನು ಸಹ ನೀಡಲಾಯಿತು. ಇದರ ಜತೆಗೆ ಪ್ರತಿ ವಧುವಿಗೆ 1.01 ಲಕ್ಷ ರೂ. ಅನ್ನು ತವರು ಮನೆಯಿಂದ ನೀಡುವಂಥ ಸ್ತ್ರೀಧನದ ರೂಪದಲ್ಲಿ ಕೊಡಲಾಯಿತು.
ಜುಲೈ 12ರಂದು ಮದುವೆ
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12ರಂದು ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಇದರ ವಿವರವನ್ನು ಬಹಿರಂಗಪಡಿಸುವ ಆಹ್ವಾನ ಪತ್ರಿಕೆ ರಿಲೀಸ್ ಆಗಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜುಲೈ 14ರವರೆಗೆ ಶುಭ ವಿವಾಹ, ಶುಭ ಆಶೀರ್ವಾದ ಮತ್ತು ಮಂಗಳ ಉತ್ಸವ ಎನ್ನುವ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ.