ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಕೂಡುರಸ್ತೆ: ರಸ್ತೆಯಿಂದ ಇನ್ನೂ ತೆರವಾಗದ ಧರೆ ಕುಸಿತದ ಮಣ್ಣು..!- ಸಂಬಂಧಪಟ್ಟವರು ಇತ್ತ ಗಮನಹರಿಸುವರೇ

Published

on

ಪುತ್ತೂರು: ಕೂಡುರಸ್ತೆಯಿಂದ ತಿಂಗಳಾಡಿಗೆ ಹೋಗುವ ರಸ್ತೆ ಬದಿಯಲ್ಲಿ ಧರೆ ಕುಸಿತದ ಮಣ್ಣು ತೆರವುಗೊಳಿಸದ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ತೊಂದರೆಯುಂಟಾಗಿದ್ದು, ಅಪಘಾತ ಸಂಭವಿಸುವ ಸಾಧ್ಯತೆಯೂ ಹೆಚ್ಚಾಗಿದೆ.


ತಿಂಗಳ ಹಿಂದೆ ಭಾರೀ ಮಳೆಯ ಸಂದರ್ಭ ಕೂಡುರಸ್ತೆ- ತಿಂಗಳಾಡಿ ಮಧ್ಯೆ ತಿರುವಿನಲ್ಲಿ ಧರೆ ಕುಸಿತಗೊಂಡಿದ್ದು, ಅಲ್ಪ ಮಣ್ಣು ರಸ್ತೆಗೆ ಕೂಡಾ ಬಿದ್ದಿತ್ತು. ಇದೀಗ ತಿಂಗಳು ಕಳೆದರೂ ಧರೆ ಕುಸಿತದ ಮಣ್ಣು ಅಲ್ಲೇ ಬಾಕಿಯಾಗಿದ್ದು ರಸ್ತೆಯ ಒಂದು ಬದಿಯಲ್ಲೂ ಮಣ್ಣು ಹಾಗೆಯೇ ಇದೆ. ಸಂಬಂಧಪಟ್ಟವರಿಗೆ ಈ ವಿಚಾರ ತಿಳಿದಿಲ್ಲವೋ? ಅಥವಾ ಗೊತ್ತಿದ್ದೂ ಮಣ್ಣು ತೆರವುಗೊಳಿಸದೇ ಸುಮ್ಮನಾಗಿದ್ದಾರೋ ಗೊತ್ತಿಲ್ಲ.

 


ಅಪಾಯ ಸಂಭವಿಸುವ ಮುನ್ನ ಮಣ್ಣನ್ನು ತೆರವು ಮಾಡಬೇಕೆನ್ನುವ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುತ್ತಾರೋ ಕಾದು ನೋಡಬೇಕಿದೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement