Published
4 months agoon
By
Akkare News
ತಿಂಗಳ ಹಿಂದೆ ಭಾರೀ ಮಳೆಯ ಸಂದರ್ಭ ಕೂಡುರಸ್ತೆ- ತಿಂಗಳಾಡಿ ಮಧ್ಯೆ ತಿರುವಿನಲ್ಲಿ ಧರೆ ಕುಸಿತಗೊಂಡಿದ್ದು, ಅಲ್ಪ ಮಣ್ಣು ರಸ್ತೆಗೆ ಕೂಡಾ ಬಿದ್ದಿತ್ತು. ಇದೀಗ ತಿಂಗಳು ಕಳೆದರೂ ಧರೆ ಕುಸಿತದ ಮಣ್ಣು ಅಲ್ಲೇ ಬಾಕಿಯಾಗಿದ್ದು ರಸ್ತೆಯ ಒಂದು ಬದಿಯಲ್ಲೂ ಮಣ್ಣು ಹಾಗೆಯೇ ಇದೆ. ಸಂಬಂಧಪಟ್ಟವರಿಗೆ ಈ ವಿಚಾರ ತಿಳಿದಿಲ್ಲವೋ? ಅಥವಾ ಗೊತ್ತಿದ್ದೂ ಮಣ್ಣು ತೆರವುಗೊಳಿಸದೇ ಸುಮ್ಮನಾಗಿದ್ದಾರೋ ಗೊತ್ತಿಲ್ಲ.
ಅಪಾಯ ಸಂಭವಿಸುವ ಮುನ್ನ ಮಣ್ಣನ್ನು ತೆರವು ಮಾಡಬೇಕೆನ್ನುವ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುತ್ತಾರೋ ಕಾದು ನೋಡಬೇಕಿದೆ.