Published
11 months agoon
By
Akkare News
ಬೆಂಗಳೂರು:ಕುಡುಕನೊಬ್ಬ ನಶೆಯಲ್ಲಿ ವಿದ್ಯುತ್ ಕಂಬ ಏರಿ ಪ್ರಾಣ ಬಿಟ್ಟಿರುವ ದುರ್ಘಟನೆ ನೆಲಮಂಗಲ ನಗರದ ಬಿನ್ನಮಂಗಲದ ಬಳಿ ನಡೆದಿದೆ.
ಹೌದು, ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ವಿದ್ಯುತ್ ಕಂಬ ಏರಿ ಚೆಲ್ಲಟವಾಡಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಎಣ್ಣೆ ನಶೆಯಲ್ಲಿ ತೇಲಾಡುತ್ತಿದ್ದ ವೆಂಕಟೇಶ್ ಎಂಬಾತ ವಿದ್ಯುತ್ ಕಂಬ ಏರಿ ಕರೆಂಟ್ ಹೊಡೆತಕ್ಕೆ ಉಸಿರು ಚೆಲ್ಲಿದ್ದಾನೆ.


ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ಬಿನ್ನಮಂಗಲ ಬಳಿ ಈ ದುರ್ಘಟನೆ ನಡೆದಿದ್ದು, ಮೃತನನ್ನು ಚಿಕ್ಕಬಳ್ಳಾಪುರ ಮೂಲದ 32 ವರ್ಷ ವಯಸ್ಸಿನ ವೆಂಕಟೇಶ್ ಎಂದು ಗುರುತಿಸಲಾಗಿದೆ.


ಉಡುಪಿಗೆಂದು ಹೇಳಿ ಹೊರಟಿದ್ದ ವ್ಯಕ್ತಿ:
ಲಭ್ಯವಿರುವ ಮಾಹಿತಿಗಳ ಪ್ರಕಾರ, ಉಡುಪಿಗೆಂದು ಹೇಳಿ ಹೋಗಿದ್ದವನು ನೆಲಮಂಗಲದ ಬಳಿ ಬಸ್ ಇಳಿದು ಹೋಗುತ್ತಿದ್ದ, ಬಳಿಕ ಇದ್ದಕ್ಕಿದ್ದಂತೆ ಟ್ರಾನ್ಸ್ ಫಾರ್ಮರ್ ಕಂಬ ಹತ್ತಿದ್ದಾನೆ. ಕಂಬ ಹತ್ತುತ್ತಿದ್ದಂತೆ ವಿದ್ಯುತ್ ಪ್ರಹರಿಸಿ ಮೇಲಿಂದ ನೆಲಕ್ಕೆ ಬಿದ್ದಿದ್ದಾನೆ. ಈ ಘಟನೆಯ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











