Published
9 months agoon
By
Akkare News
ಪುತ್ತೂರು: ಪುತ್ತೂರು ಬೈಪಾಸ್ ರಸ್ತೆ ತೆಂಕಿಲ ಬಳಿ ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದ ಘಟನೆ ಜೂ.24 ರಂದು ನಡೆದಿದ್ದು ಅಪಘಾತದಿಂದ ಬೈಕ್ ಸವಾರ ಗಾಯಗೊಂಡಿದ್ದಾರೆ.


ಬೈಕ್ ಸವಾರ ತೆಂಕಿಲ ಕೋಡಿಜಾಲು ನಿವಾಸಿ ಆಕಾಶ್ ಗಾಯಗೊಂಡವರು. ಅವರು ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಮಡಿಕಡೆ ತೆರಳುತ್ತಿದ್ದ ಕಾರು ಬೈಕ್ ಗೆ ಡಿಕ್ಕಿಯಾಗಿದೆ. ಅಪಘಾತದ ದೃಶ್ಯ ಸ್ಥಳೀಯ ಪೆಟ್ರೋಲ್ ಪಂಪ್ ನ ಸಿ ಸಿ ಕ್ಯಾಮರದಲ್ಲಿ ದಾಖಲಾಗಿದೆ.









