ಬೆಂಗಳೂರು ಜನವರಿ 28: ಧನುರ್ಮಾಸದ ಕೊನೆಯ ಪೂಜೆಗೆಂದು ಹೋಗಿದ್ದ ಬಾಲಕ ಸುಮಂತ್ ಅನುಮಾನಾಸ್ಪದವಾಗಿ ಸಾವಿನ ಪ್ರಕರಣದ ಕೂಲಂಕುಷವಾಗಿ ತನಿಖೆಗೆ ಶಾಸಕ ಹರೀಶ್ ಪೂಂಜಾ ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ ಜನವರಿ...
ಮುಖ್ಯಮಂತ್ರಿಗಳ ಜೊತೆ ಸಭೆ ಕರೆದು ಶೀಘ್ರ ನಿರ್ಧಾರ; ಸಚಿವ ತಂಗಡಗಿ ಭರವಸೆ ಪುತ್ತೂರು: ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸಬೇಕು ಎಂದು ನಾನು ಶಾಸಕನಾಗಿ ಮೊದಲ ಅಧಿವೇಶನದಲ್ಲೇ ಸರಕಾರದ ಮುಂದೆ ಮನವಿ ಮಾಡಿದ್ದೆ, ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ನಡೆದಿದೆ, ಹೊರ ರಾಜ್ಯಗಳಿಗೆ ಅಧ್ಯಯನ ಸಮಿತಿಯನ್ನು ಕಳುಹಿಸಲಾಗಿದೆ, ಘೋಷಣೆ ಮಾಡುವುದರಿಂದ ಸರಕಾರಕ್ಕೇನು ಆರ್ಥಿಕ ಹೊರೆಯಿಲ್ಲ . ಯಾಕೆ ಘೋಷಣೆಗೆ ಇಷ್ಟೊಂದು ತಡವಾಗುತ್ತಿದೆ? ಯಾವಾಗ ಘೋಷಣೆ ಮಾಡುವುದು ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ವಿಧಾನಸಭಾ ವಿಶೇಷ ಅಧಿವೇಶನದಲ್ಲಿ ನೇರ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಈ ವಿಚಾರದಲ್ಲಿ ನಾವು ವಿಶೇಷ ಕಾಳಜಿವಹಿಸಿದ್ದು ಮುಂದೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಶೂನ್ಯ ವೇಳೆ ವಿಷಯ ಪ್ರಸ್ತಾಪಿಸಿದ ಶಾಸಕ ಅಶೋಕ್ ರೈ ಅವರು ತುಳುವಿಗೆ ೩ ಸಾವಿರ ವರ್ಷಗಳ ಇತಿಹಾಸವಿದೆ, ಲಿಪಿ ಇದೆ, ಗೂಗಲ್ನಲ್ಲಿ ಕೂಡಾ ತುಳು ಭಾಷೆಯನ್ನು ಭಾಷಾಂತರ ಮಾಡಲು ಅವಕಾಶವಿದೆ,ಜರ್ಮನಿ ಮತ್ತು ಪ್ರಾನ್ಸ್ನಲ್ಲಿ ತುಳು ಅಧ್ಯಯನಕ್ಕೆ ಅವಕಾಶ ನೀಡಲಾಗಿದೆ, ವಿಶ್ವ ವಿದ್ಯಾನಿಲಯಗಳಲ್ಲಿಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ಬೇರೆ ರಾಜ್ಯಗಳನ್ನು ಹೋಲಿಕೆ ಮಾಡಿದರೆ ಎರಡು ಭಾಷೆಗಳನ್ನು ಹೆಚ್ಚುವರಿ ಭಾಷೆಯನ್ನಾಗಿ ಘೋಷಣೆ ಮಾಡಿದ್ದಾರೆ. ನಾನು ಶಾಸಕನಾಗಿ ಸದನಕ್ಕೆ ಬಂದಾಗ ಮೊದಲ ಪ್ರಶ್ನೆಯೇ ತುಳುವಿನ ಬಗ್ಗೆಯಾಗಿತ್ತು, ಆ ಬಳಿಕ ಎಲ್ಲಾ ಅಧಿವೇಶನದಲ್ಲಿ ಈ ಪ್ರಶ್ನೆಯನ್ನು ಕೇಳುತ್ತಲೇ ಬಂದಿದ್ದೇನೆ. ಸಚಿವ ಶಿವರಾಜ್ ತಂಗಡಗಡಿಯವರು ಈ ವಿಚಾರದಲ್ಲಿ ಸ್ವಲ್ಪ ಮುತುವರ್ಜಿ ವಹಿಸಿದ್ದಾರೆ. ಆಂದ್ರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಯಾವ ರೀತಿ ಅಲ್ಲಿನ ಸ್ಥಳೀಯ ಭಾಷೆಯನ್ನು ಹೆಚ್ಚುವರಿಯಾಗಿ ಘೋಷಣೆ ಮಾಡಿದ್ದಾರೆ ಎಂಬುದನ್ನೂ ಸಚಿವರು ಅಧ್ಯಯನ ತಂಡ ಕಳಿಸಿ ಅಧ್ಯಯನ ನಡೆಸಿದ್ದಾರೆ. ಇಷ್ಟೆಲ್ಲಾ ಆದರೂ ಯಾಕೆ ಅದನ್ನು ಘೋಷಣೆ ಮಾಡುತ್ತಿಲ್ಲ ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದು ಶಾಸಕರು ಪ್ರಶ್ನಿಸಿದರು. ಅಶೋಕ್ ರಐ, ಯು ಟಿ ಖಾದರ್ರವರಿಗೆ ವಿಶೇಷ ಕಾಳಜಿ ಇದೆ: ಸಚಿವ ತಂಗಡಗಿ ತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿಸಬೇಕು ಎಂಬ ವಿಚಾರದಲ್ಲಿ ಪುತ್ತೂರು ಶಾಸಕ ಅಶೋಕ್ ರಐ ಹಾಗೂ ಸಭಾಧ್ಯಕ್ಷ ಯು ಟಿ ಖಾದರ್ ರವರು ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಅಧ್ಯಯನ ತಂಡವನ್ನು ಕಳುಹಿಸುವಲ್ಲಿ ಅಶೋಕ್ ರೈ ಪ್ರಮುಖ ಪಾತ್ರ ವಹಿಸಿದ್ದಾರೆ. ಆಂದ್ರದಲ್ಲಿ ಉರ್ದುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಿದ್ದಾರೆ ಇದನ್ನು ಅಧ್ಯಯನ ಮಾಡಲು ತಂಢವನ್ನು ಕಳುಹಿಸಲಾಗಿದೆ. ತಂಡದ ವರದಿ ಸಿದ್ದಗೊಂಡ ಮೇಲೆ ಮುಖ್ಯಮಂತ್ರಿಗಳು, ವಿಧಾನಸಭಾ ಅಧ್ಯಕ್ಷರನ್ನೊಳಗೊಂಡ ಸಮಿತಿಯಲ್ಲಿ ಚರ್ಚೆ ಮಾಡಿ ಆ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು. ಮೋಹನ ಆಳ್ವರ ವರದಿಯಲ್ಲಿ ಎಲ್ಲವೂ ಇದೆ; ವೇದವ್ಯಾಸ ಕಾಮತ್ ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ಬಗ್ಗೆ ಪುತ್ತೂರು ಶಾಸಕರು ವಿವರವಾಗಿ ಸಭೆಗೆ ತಿಳಿಸಿದ್ದಾರೆ. ಈಗಾಗಲೇ ಅಧ್ಯಯನ್ನಾಗಿ ಬೇರೆ ರಾಜ್ಯಗಳಿಗೆ ತಂಡವನ್ನು ಕಳುಹಿಸಲಾಗಿದೆ. ತಂಡ ವರದಿ ಮಾಡಲಿ ಆದರೆ ತುಳುವಿನ ಬಗ್ಗೆ ಡಾ. ಮೋಹನ್ ಆಳ್ವ ರವರು ಈಗಾಗಲೇ ಎಲ್ಲಾ ವಿಚಾರವನ್ನೊಳಗೊಂಡ ಅಧ್ಯಯನ ವರದಿಯನ್ನು ಸರಕಾರದ ಮುಂದೆ ಇಟ್ಟಿದ್ದಾರೆ ಅದನ್ನು ಕ್ಯಾಬಿನೆಟ್ನಲ್ಲಿ ಇಟ್ಟು ಮಂಜೂರು ಮಾಡಿದರೆ ಆಯಿತು ಅದನ್ನು ಸರಕಾರ ಮಾಡಬೇಕು ಎಂದು ಸಭೆಗೆ ತಿಳಿಸಿದರು. ತುಳು ನಾಡಿನವರೇ ಸಚಿವರಾಗಿದ್ದಾಗ ಯಾಕೆ ಮಾಡಿಲ್ಲ: ಸಚಿವ ತಂಗಡಗಿ ವೇದವ್ಯಾಸ ಕಾಮತ್ರವರು ಈ ಹಿಂದೆ ಶಾಸಕರಾಗಿದ್ದಾಗ ತುಳು ನಾಡಿನವರೇ ಆದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರು ಆವಾಗ ಇದೇ ವೇದವ್ಯಾಸ ಕಾಮತ್ ಸಭೆಗೆ ಅಥವಾ ಸರಕಾರಕ್ಕೆ ಒತ್ತಾಯ ಮಾಡಬಹುದಿತ್ತು ಆಗ ಅವರು ಮಾತನಾಡಲೇ ಇಲ್ಲ. ಆದರೂ ನಾನು ಈ ವಿಚಾರದ ಬಗ್ಗೆ ಹೆಚ್ಚು ಮುತುವರ್ಜಿವಹಿಸಿ ಕ್ರಮಕೈಗೊಳ್ಳುವೆ ಎಂದು ಸಚಿವರು ಹೇಳಿದರು. ತುಳು ಅಪ್ಪೆ ಭಾಷೆ ಸಭಾಧ್ಯಕ್ಷರೆ.. ತುಳು ನಮ್ಮ ನಾಡಿನ ಅಪ್ಪೆ ಭಾಷೆಯಾಗಿದೆ. ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಮಾಡಲೇಬೇಕು ಎಂಬ ಹೋರಾಟ ನಿಲ್ಲುವುದಿಲ್ಲ. ಜಿಲ್ಲೆಯ ೧೩ ಶಾಸಕರು ಒಟ್ಟಾಗಿ ಹೋರಾಟ ಮಾಡಿದರೆ ಇದೇನು ಕಷ್ಟದ ವಿಚಾರವಲ್ಲ. ಮುಂದಿನ ದಿನ ಮಂಗಳೂರಿನಲ್ಲಿ ಕ್ಯಾಬಿನೆಟ್ ಸಭೆ ನಡೆಯಲಿದ್ದು ಅಲ್ಲಿ ಇದನ್ನು ಘೋಷಣೆ ಮಾಡಬೇಕು ಎಂದು ಶಾಸಕ ಅಶೋಕ್ ರೈ ಮತ್ತೆ ಮನವಿ ಮಾಡಿದರು.
ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. -ಆಚಾರ್ಯ ಜ್ಯುವೆಲ್ಸರ್ಸ್ ಸಂಸ್ಥೆಯು ಪುತ್ತೂರು, ಮೂಡಬಿದ್ರೆ, ಸುಳ್ಯ, ಹಾಸನ ಮತ್ತು ಕುಶಾಲನಗರದಲ್ಲಿರುವ ತನ್ನ ಶಾಖೆಗಳಲ್ಲಿ ಗಣರಾಜ್ಯೋತ್ಸವ ಹಬ್ಬದ ಪ್ರಯುಕ್ತ ರಿಪಬ್ಲಿಕ್ ಸೇಲ್ ಜನವರಿ 225 ನಡೆದಿದ್ದು ಗ್ರಾಹಕರಿಂದ...
ಮುಂಬೈ: ಎನ್ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರು ಇಂದು ಬೆಳಿಗ್ಗೆ ಮುಂಬೈನಿಂದ ಬಾರಾಮತಿಗೆ ಹೊರಟಿದ್ದ ವಿಮಾನ ಪತನಗೊಂಡು ಮೃತಪಟ್ಟಿದ್ದಾರೆ. ಪೈಲಟ್ಗಳು ಮತ್ತು ಪವಾರ್ ಅವರ ಭದ್ರತಾ ಸಿಬ್ಬಂದಿ ಸೇರಿದಂತೆ...
ಬೆಂಗಳೂರು: ಕರ್ನಾಟಕದ 6000 ಗ್ರಾಮಪಂಚಾಯಿತಿಗಳಿಗೆ ಮಹಾತ್ಮಗಾಂಧಿ ಹೆಸರನ್ನು ಇಡಲಾಗುವುದು. ಮುಂದಿನ ಬಜೆಟ್ನಲ್ಲಿಯೇ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ವಿಬಿ ಜಿ ರಾಮ್ ಜಿ ಕಾಯ್ದೆ ವಿರೋಧಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನಡೆದ...
ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎ ಸೇವನೆ ಹಾಗೂ ಮಾರಾಟ ನಡೆಸುತ್ತಿದ್ದ ಜಾಲವೊಂದನ್ನು ಪತ್ತೆಹಚ್ಚಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು...
ಪುತ್ತೂರು: .27 ಪುತ್ತೂರು: ಸಮಗ್ರ ಒಳಚರಂಡಿ ನಿರ್ಮಾಣ ಯೋಜನೆ ಬೇಡಿಕೆಯಿರುವ ಪುತ್ತೂರು ನಗರಕ್ಕೆ ಇದೀಗ ರಾಜ್ಯದ ಪ್ರಥಮ ಪಿಪಿಪಿ ಡ್ರೈನೇಜ್ ಸ್ಕೀಂ ಮಂಜೂರುಗೊಳ್ಳುವ ಹಂತದಲ್ಲಿದೆ.ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಬ್ಲಿಕ್ ಪ್ರೈವೇಟ್ ಪಾರ್ಟಿಸಿಪೇಶನ್-ಪಿಪಿಪಿ) ಸಮಗ್ರ ಒಳಚರಂಡಿ...
ಪುತ್ತೂರು: ಇತಿಹಾಸ ಪ್ರಸಿದ್ದವೂ,ಕಾರಣಿಕ ಕಗಷೇತ್ರವೆಂದೇ ಪ್ರಸಿದ್ದಿಪಡೆದ ಆರ್ಲಪದವು ಕಿನ್ನಿಮಾಣಿ,ಪೂಮಾಣಿ ಪಿಲಿಭೂತ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವದಲ್ಲಿ ಮೊದಲ ಬಾರಿಗೆ ಶಾಸಕ ಅಶೋಕ್ ರೈ ಅನ್ನದಾನ ವ್ಯವಸ್ಥೆಯಲ್ಲಿ ಕಲ್ಪಿಸಿದ್ದಾರೆ, ಕ್ಷೇತ್ರದ ಆಡಳಿತ ಮೊಕ್ತೇಸರರ ಸಲಹೆಯಂತೆ, ಸಾರ್ವಜನಿಕಭಕ್ತಾದಿಗಳ ಸಹಕಾರದಿಂದ ಜಾತ್ರೋತ್ಸವದ...
ಮಂಗಳೂರು ಮಹಾನಗರ ಪಾಲಿಕೆ ಸೇರಿಂದತೆ ದಕ್ಷಿಣ ಕನ್ನಡದಲ್ಲಿ ಉದ್ಯೋಗಾಕವಾಶ ಹೆಚ್ಚಿಸಲು, ಯುವಜನರ ವಲಸೆ ತಪ್ಪಿಸಲು ಹಲವು ಕಾರ್ಯಕ್ರಮ ಆರಂಭ ಅಗಲಿದೆ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮೀನುಗಾರಿಕಾ ಬಂದರಿನ ಆಧುನಿಕ ಯೋಜನೆ ನಡೆಯುತ್ತಿದೆ....
ಬೆಳ್ತಂಗಡಿ: ಗಣರಾಜ್ಯೋತ್ಸವದ ಪ್ರಯುಕ್ತ ಕೊಡ ಮಾಡುವ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕ ಪ್ರಶಸ್ತಿಗೆ ದ.ಕ. ಜಿಲ್ಲಾ ಡಿಸಿಆರ್ಇಯ ವರಿಷ್ಠಾಧಿಕಾರಿ ಸಿ.ಎ.ಸೈಮನ್ ಆಯ್ಕೆಯಾಗಿದ್ದಾರೆ. ಕಡಬ ಮೂಲದವರಾಗಿದ್ದು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ...