Published
1 week agoon
By
Akkare News
ಪುತ್ತೂರು :ಇಲ್ಲಿನ ಬನ್ನೂರು ಕೃಷ್ಣನಗರ ಅಲಂಬುಡದ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಪ್ರಿಲ್ 16 ಗುರುವಾರದಂದು ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಗಾನಸಿರಿ ಕಲಾಕೇಂದ್ರ ಪುತ್ತೂರಿನ ಡಾ! ಕಿರಣ್ ಕುಮಾರ್ ಗಾನ ಸೀರಿ ಅವರು ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡುತ್ತಾ ತಂದೆ ತಾಯಿಯನ್ನು ಗೌರವಿಸಿ,ಪ್ರೀತಿಸಿ ಅವರ ಆಶೀರ್ವಾದವು ನಮ್ಮನ್ನು ಸಾಧನೆ ಹಾಗೂ ಬೇಸಿಗೆ ಶಿಬಿರವು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುತ್ತದೆ ಹಾಗೂ ಹಾಡಿನ ಮೂಲಕ ಮಕ್ಕಳನ್ನು ಮನರಂಜಿಸಿದರು. ಪುತ್ತೂರಿನ ಖ್ಯಾತ ಸ್ಯಾಕ್ಸೋಫೋನ್ ವಾದಕರಾದ ಶ್ರೀ ವೇಣುಗೋಪಾಲ ಪುತ್ತೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಅವರಿಗೆ ಎ ವಿ ಜಿ ಕಲಾ ರತ್ನ ಪ್ರಶಸ್ತಿಯನ್ನು ನೀಡಿ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮೇಶ್ ಉಳಾಯ ಹಾಗೂ ಶ್ರೀ ತಾರಾನಾಥ ಸವಣೂರು, ಚರಣ್ ಕುಮಾರ್ ಪುದು ಮಾತನಾಡಿ ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿ ಅಧ್ಯಕ್ಷರಾಗಿರುವ ಶ್ರೀ ವೆಂಕಟರಮಣಗೌಡ ಕಳುವಾಜೆರವರು ಶಿಬಿರಕ್ಕೆ ಸಹಕರಿಸಿದ ಎಲ್ಲರನ್ನು ಸ್ಮರಿಸುತ್ತಾ ಇನ್ನು ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸಲು ಸಹಕಾರವನ್ನು ಕೋರಿದರು. ಶಾಲಾ ಸಂಚಾಲಕರಾದ ಎ ವಿ ನಾರಾಯಣ ರವರು ಮಾತನಾಡಿ ಬೇಸಿಗೆ ಶಿಬಿರವು ಪಠ್ಯದ ಹೊರತಾದ ಇತರ ಸೃಜನಶೀಲ ಕಲೆಗಳನ್ನು ಕಲಿಯಲು ಸಹಾಯಕವಾಗುತ್ತದೆ ಎಂದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಅಮರನಾಥ ಬಿ ಪಿ ರವರು ಆರು ದಿನಗಳ ಶಿಬಿರದ ಬಗ್ಗೆ ಪ್ರಾಸ್ತಾವಿಕ ಭಾಷಣಗೈದರು. ಶಿಬಿರ ನಿರ್ದೇಶಕರಾದ ಶ್ರೀಮತಿ ರಾಧ ರವರು ಸಮಾರೋಪ ಭಾಷಣ ಗೈದರು.ವೇದಿಕೆಯಲ್ಲಿ ಶಾಲಾ ಆಡಳಿತ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಉಮೇಶ್ ಮಳುವೇಲು, ಶಾಲಾ ಆಡಳಿತ ಅಧಿಕಾರಿ ಶ್ರಿ ಗುಡ್ಡಪ್ಪ ಗೌಡ ಬಲ್ಯರವರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಕುಮಾರಿ ಅನಿಕ ,ಜ್ಞಾನ ,ಶ್ರಿವಿಕ ,ಚೇತನಕೀರ್ತಿರವರು ಪ್ರಾರ್ಥನೆಗೈದು ಶಿಕ್ಷಕಿ ರೀಮಾ ಲೋಭೋ ಸ್ವಾಗತಿಸಿ , ಮಾಸ್ಟರ್ ವಿಕ್ಯಾತ್ ಸಂವಿಧಾನದ ಪೀಠಿಕೆಯನ್ನು ವಾಚಿಸಿ ,ಶಿಕ್ಷಕಿ ಹರ್ಷಿತ ವಂದನಾರ್ಪಣೆಗೈದು , ಶಿಕ್ಷಕಿ ಶ್ರೀಮತಿ ಶ್ವೇತ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಚಂದ್ರಿಕಾರವರು ಸನ್ಮಾನ ಪತ್ರವನ್ನು ವಾಚಿಸಿದರು. ಸಭಾ ಕಾರ್ಯಕ್ರಮದ ಮೊದಲಿಗೆ ಮಕ್ಕಳ ಕಿರು ನಾಟಕ ‘ಅಕ್ಷಯಪಾತ್ರೆ’ ಪ್ರದರ್ಶಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ನಿರ್ದೇಶಕರಾದ ಶ್ರೀಮತಿ ಪುಷ್ಪಾವತಿ ಕಳುವಾಜೆ , ಶ್ರೀ ಸೀತಾರಾಮ ಕೇವಳ, ಶ್ರೀಮತಿ ಪ್ರತಿಭಾ ದೇವಿ, ಶ್ರೀಮತಿ ದೀಕ್ಷ ವಾಮನ ಗೌಡ ,ಶಿಕ್ಷಕ ವೃಂದ ಶಿಕ್ಷಕೇತರವರಿಂದ ವಿದ್ಯಾರ್ಥಿ ವೃಂದ ಪೋಷಕ ವೃಂದದವರು ಪಾಲ್ಗೊಂಡಿದ್ದರು.





