Published
11 hours agoon
By
Akkare News

ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ಮಾತುಗಳೊಂದಿಗೆ ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ ದೀಕ್ಷೆ ನೀಡಿದರು. ನಂತರ ಆರತಿ ಬೆಳಗಿ ತಿಲಕವಿಡುವ ಮೂಲಕ ಹೊಸ ವಿದ್ಯಾರ್ಥಿಗಳನ್ನು ಸ್ವಾಗತ ಮಾಡಲಾಯಿತು. ಮುಖ್ಯ ಅತಿಥಿಗಳಾದ ಡಾ ಶಿವಾನಂದ ರವರು ಮಾತನಾಡಿ ಶಾಲೆಯಲ್ಲಿ ಏನೇ ವ್ಯತ್ಯಾಸಗಳು ಕಂಡು ಬಂದಲ್ಲಿ ತಿಳಿಸುವುದು ಹಾಗೂ ಶಾಲಾ ಅಭಿವೃದ್ಧಿ ಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಎಂದು ಪೋಷಕರ ಲ್ಲಿ ವಿನಂತಿಸಿದರು. ಹಾಗೂ ವಿದ್ಯಾರ್ಥಿಗಳು ಪ್ರತಿ ವರ್ಷ ಹೊಸತನ್ನು ಕಲಿಯುವುದು, ಎಲ್ಲಾ ದಿನವೂ ಚಟುವಟಿಕೆಯಿಂದ ತೊಡಗಿಕೊಳ್ಳುವುದು. ಎಂದು 25ನೇ ವರ್ಷಕ್ಕೆ ಶುಭ ಹಾರೈಸಿದರು.
ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯರು ಮಾತನಾಡಿ ಶಾಲಾ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡು ಮೊಬೈಲ್ ಫೋನನ್ನು ಬಳಸದೆ ಸಮಯವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ತಮಗೆ ಆಸಕ್ತಿ ಇರುವ ಚಟುವಟಿಕೆಗಳಲ್ಲಿ ಮುಂದೆ ಬಂದು ಕೀರ್ತಿವಂತರಾಗಿ ಬಾಳಿ ದೇವರ ಅನುಗ್ರಹ ನಿಮಗಿರಲಿ ಎಂದರು. ಉಪಾಧ್ಯಕ್ಷರಾದ ಶ್ರೀ ಪ್ರಸನ್ನ ಭಟ್ ರವರು ಮಾತನಾಡಿ ಈ ಸಂಸ್ಥೆಯು ಸಂಸ್ಕಾರಯುತ ಶಿಕ್ಷಣವನ್ನು ಕೊಡಲು ಪ್ರಯತ್ನಿಸುತ್ತಿದ್ದು ಅನೇಕ ಮಹಾಪುರುಷರ ಬದುಕನ್ನು ಮಾದರಿಯಾಗಿ ಇಟ್ಟುಕೊಂಡು ಬದುಕಬೇಕು. ಕಠಿಣ ಪ್ರಯತ್ನದಿಂದ ಸಾಧನೆ ಸಾಧ್ಯ ಎಂದರು. ಜೊತೆಕಾರ್ಯದರ್ಶಿ ಶ್ರೀ ಸುಬ್ರಾಯ ಬಿ ಎಸ್ ರವರು ಮಾತನಾಡಿ ಈ ಶೈಕ್ಷಣಿಕ ವರ್ಷದಲ್ಲಿ ಉತ್ತಮ ವಿದ್ಯಾಭ್ಯಾಸ ದೊರಕುವಂತಾಗಲಿ ಎಂದು ಶುಭ ಹಾರೈಸಿದರು. 


