Published
2 hours agoon
By
Akkare News
ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳಿಗೆ ಚುನಾವಣಾ ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಚುನಾವಣೆಯ ಮೂಲಕ ಶಾಲಾ ವಿದ್ಯಾರ್ಥಿ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಚುನಾವಣೆಯಲ್ಲಿ ಶಾಲಾ ನಾಯಕನಾಗಿ 10 ನೇ ತರಗತಿಯ ವಿದ್ಯಾರ್ಥಿಯಾದ ಪ್ರತೀಕ್ .ಟಿ (ಶ್ರೀ ತನಿಯಪ್ಪ ನಾಯ್ಕ್ ಶ್ರೀಮತಿ ವಿಶಾಲಾಕ್ಷಿ ಕಟ್ಟತ್ತಾರು ಇವರ ಪುತ್ರ )
ಉಪನಾಯಕನಾಗಿ 9ನೇ ತರಗತಿ ವಿದ್ಯಾರ್ಥಿಯಾದ ವಿಧಾತ್ ರೈ ( ಶ್ರೀ ಜಿ. ವಿಠ್ಠಲ ರೈ ಮತ್ತು ಶ್ರೀಮತಿ ಮಲ್ಲಿಕಾ .ಕೆ ತಿಂಗಳಾಡಿ ಇವರ ಪುತ್ರ )ಆಯ್ಕೆ ಗೊಂಡಿರುತ್ತಾರೆ. 






