Published
52 minutes agoon
By
Akkare News
ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಸರಕಾರಿ ಪ್ರೌಢಶಾಲೆ ಮಂಜುನಾಥ ನಗರ ಇಲ್ಲಿ 27ರಂದು ಜರುಗಿದ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ನರಿಮೊಗರಿನ ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಲ್ಲಿ ಪ್ರಾಥಮಿಕ ಶಾಲಾ ಹುಡುಗರ ವಿಭಾಗದಲ್ಲಿ 6ನೇ ತರಗತಿಯ ವಿದ್ಯಾರ್ಥಿಗಳಾದ ಪ್ರಣಮ್ -ಪ್ರಥಮ ಸ್ಥಾನ, ನಿರೂಪ್ -ಐದನೇ ಸ್ಥಾನ ಪ್ರೌಢ ಶಾಲಾ ಹುಡುಗಿಯರ ವಿಭಾಗದಲ್ಲಿ 9ನೇ ತರಗತಿಯ ಆರೋಹಿ ಯಶವಂತ್ ಎರಡನೇ ಸ್ಥಾನ, ಲವಿಷ್ಕಾ -ಐದನೇ ಸ್ಥಾನ, 
ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್ ಹಾಗೂ ಜಯಚಂದ್ರ ಹಾಗೂ ಸುದೀಕ್ಷಾ ರವರು ತರಬೇತಿ ನೀಡಿದ್ದಾರೆ. ಇವರಿಗೆ ಶಾಲಾ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಎಸ್ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಅಭಿನಂದನೆಯನ್ನು ತಿಳಿಸಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.




