Published
5 days agoon
By
Akkare News
ಪುತ್ತೂರು, ಏ.18: ಪಡೀಲ್ ಯಾಸೀನ್ ಚಿಕನ್ ಸೆಂಟರ್ ಎದುರು ಶನಿವಾರ ಮಧ್ಯಾಹ್ನ ಎರಡು ಬೈಕ್ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ಓರ್ವ ಸವಾರ ರಾಂಗ್ ಸೈಡ್ನಲ್ಲಿ ಚಲಾಯಿಸಿದ್ದರಿಂದ ಮತ್ತೊಂದು ಬೈಕ್ ಸವಾರನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ತೀವ್ರತೆಗೆ ಓರ್ವ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಂದು ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ಸ್ಥಳೀಯರಾದ ತಾಜುದ್ದೀನ್ ಸಾಲ್ಮರ ಮತ್ತು ಲತೀಫ್ ಸಾಲ್ಮರ ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ.







