Published
3 hours agoon
By
Akkare News
ಪೈನ್ ಕ್ಯೂಲ್ಲರ್ ತ್ಯಜಿಸಿ -ಕಿಡ್ನಿ ರಕ್ಷಿಸಿ-ಜೀವ ಉಳಿಸಿ’ ಎಂಬ ದ್ಯೆಯ ದೊಂದಿಗೆ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಜಾಥಾ ಮೂಲಕ ದರ್ಬೆ ಸರ್ಕಲ್ ಬಳಿಯಿಂದ ಬೊಳ್ವಾರ್ ವರೆಗೆ ನೇತೃತ್ವದಲ್ಲಿ “ಪೈನ್ ಕಿಲ್ಲರ್ ತ್ಯಜಿಸಿ-ಕಿಡ್ನಿ ರಕ್ಷಿಸಿ-ಜೀವ ಉಳಿಸಿ” ಎಂಬ ಜನಜಾಗೃತಿ ಕಾರ್ಯಕ್ರಮವನ್ನು ಬೋಳ್ವರಿನ ಪ್ರಗತಿ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ, ಜಯಪ್ರಕಾಶ್ ಬದಿನಾರ್ ರವರ ಜವಾಬ್ದಾರಿಯಲ್ಲಿ ಜಾಥಾ ನಡೆಸಿದರು,
ರಾಜ್ಯದಲ್ಲಿ, ಅದರಲ್ಲೂ ಪುತ್ತೂರಿನಲ್ಲಿ ಕಿಡ್ನಿರೋಗಿಗಳ ಸಂಖ್ಯೆ ಹೆಚ್ಚುತಿರುವುದಕ್ಕೆ ಶಾಸಕ ಅಶೋಕ್ ರೈ ಅವರು ಕಾರಣ ಹುಡುಕಿದಾಗ ಪೈನ್ ಕಿಲ್ಲರ್ ಔಷಧಿಗಳು ಎಂಬುದು ಮನವರಿಕೆಯಾಗಿದೆ. ಹಾಗಾಗಿ ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ಸೇವಿಸುವುದು ದೇಹಕ್ಕೆ ಹಾನಿಕಾರ ಎಂಬ ವಿಷಯದ ಬಗ್ಗೆ ಜನರಿಗೆ ತಿಳಿಸಲು ಮತ್ತು ವೈದ್ಯರ ಚೀಟು ಇಲ್ಲದೆ ಔಷಧಿಗಳನ್ನು ಕೊಡುವುದನ್ನು ನಿಷೇಧಿಸಬೇಕೆಂದು ಮೆಡಿಕಲ್ ನವರಿಗೆ ಮನವಿ ಮಾಡುವ ಮೂಲಕ ಜನಸಾಮಾನ್ಯರ ಜೀವ ರಕ್ಷಣೆಯ ಮಾಹಿತಿ ಮುಟ್ಟಿಸುವ ಸಲುವಾಗಿ ಕಾರ್ಯಕ್ರಮವನ್ನು ಶಾಸಕರು ರೂಪಿಸಿದ್ದರು, ಈಗ ರಾಜ್ಯ ಸರ್ಕಾರವು ಇದಕ್ಕೆ ವಿಶೇಷ ನೀತಿ ತಂದಿರುವುದು ಶಾಸಕ ಅಶೋಕ್ ಕುಮಾರ್ ರೈ ಅವರು ಈ ವಿಷಯವನ್ನು ವಿಧಾನಸಭಾ. ಕಲಾಪ ದಲ್ಲಿ ಕೂಡ ಪ್ರಸ್ತಾಪಿಸಿದ್ದರು, ಇದೀಗ ರೈ ಯವರ ಹೋರಾಟಕ್ಕೆ ಜಯ ತಂದಾಗೆ ಆಗಿದೆ. ರಾಜ್ಯ ಸರ್ಕಾರದ ಅಶೋಕ್ ಕುಮಾರ್ ರೈ ಯವರ ಮಾತಿಗೆ ಮನ್ನಣೆ ನೀಡಿದ್ದಾರೆ.. 
ಔಷಧಗಳಿಗೆ ಹೊಂದಿಕೊಂಡಿವೆ ರೋಗಾಣುಗಳು: ಕೆಲವು ಅನಾರೋಗ್ಯಕ್ಕೆ ಬಳಸುತ್ತಿದ್ದ ಆ್ಯಂಟಿಬಯೋಟಿಕ್ಸ್ ಇದೀಗ ರೋಗಾಣುಗಳಿಗೆ ಹೊಂದಿಕೊಂಡು, ಯಾವುದೇ ಪರಿಣಾಮವನ್ನೂ ಬೀರತ್ತಿಲ್ಲ. ಔಷಧಗಳು ರೋಗ ತರುವ ಬ್ಯಾಕ್ಟಿರೀಯಾಗಳು, ವೈರಸ್ ಹಾಗೂ ಶಿಲೀಂಧ್ರಗಳನ್ನು ಕೊಲ್ಲಬೇಕು. ಆದರೆ, ಈ ರೋಗಕಾರಗಳು ಯಾವುದೇ ಔಷಧಿಗಳಿಗೆ ಬಗ್ಗದಂತೆ ತಮ್ಮ ರೂಪವನ್ನು ಬದಲಿಸಿಕೊಂಡಿದ್ದು, ಸಣ್ಣ ಪುಟ್ಟ ಸೋಂಕೂ ಸಹ ದೊಡ್ಡದಾಗುತ್ತಿದೆ. ಉಗುರಿನಲ್ಲಿ ತೆಗೆಯಬಹುದಾದ ಸಮಸ್ಯೆಗೆ ಇದೀಗ ಕೊಡಲಿ ಏಟು ಬೇಕಾಗಿದ್ದು, ರೋಗ ಉಲ್ಬಣಿಸಿ, ದೊಡ್ಡದಾಗುತ್ತಿದೆ. ಇವೆಲ್ಲವನ್ನೂ ಗಮದಲ್ಲಿಟ್ಟುಕೊಂಡು ಕರ್ನಾಟಕ ಆರೋಗ್ಯ ಇಲಾಖೆ, ಆ್ಯಂಟಿಬಯೋಟಿಕ್ ಅಸಮರ್ಪಕ ಬಳಕೆ ಹಾಗೂ ಅದರ ದುಷ್ಪರಿಣಾಮಗಳನ್ನು ತಡೆಯಲು ಕ್ರಮ ಕೈಗೊಳ್ಳುತ್ತಿದೆ. ಈ ಸಂಬಂಧ ಈಗಾಗಲೇ ತಜ್ಞರ ಸಮಿತಿಯೊಂದನ್ನು ರಚಿಸಿದ್ದು, ಆ್ಯಂಟಿಬಯೋಟಿಕ್ಸ್ ಸಮರ್ಪಕ ಬಳಕೆ ಹಾಗೂ ಬಳಕೆಯಾಗದ ಅಥವಾ ಎಕ್ಸ್ಪೈರಿ ಆಗಿರುವ ಔಷಧಗಳ ಸೂಕ್ತ ವಿಲೇವಾರಿಗೂ ಕ್ರಮ ಕೈಗೊಳ್ಳಲು ಚಿಂತಿಸಲಾಗುತ್ತಿದೆ. ಅಕಸ್ಮಾತ್ ಇಂಥ ಅವಧಿ ಮುಗಿದ ಅಥವಾ ಬಳಕೆಯಾಗದ ಔಷಧಿಗಳನ್ನು ಎಲ್ಲೆಂದರಲ್ಲಿ ಎಸೆದರೆ, ಮಣ್ಣು ಅಥವಾ ನೀರಲ್ಲಿ ಸೇರಿ ಪರಿಸರವೂ ಕಲುಷಿತಗೊಳ್ಳಲಿದೆ. ಅಲ್ಲದೇ ಬ್ಯಾಕ್ಟಿರೀಯಾಗಳು ಇಂಥ ಔಷಧಿಗಳಿಗೆ ಮುಂಚಿತವಾಗಿಯೇ ಮತ್ತಷ್ಟು ಶಕ್ತಿಶಾಲಿಯಾಗುತ್ತಿದೆ. ಔಷಧಿ ಬೆರೆತ ನೀರು ಹಾಗೂ ಮಣ್ಣಿನಲ್ಲಿ ಬೆಳೆದ ತರಕಾರಿ ಬಳಸುವ ಮನುಷ್ಯನ ದೇಹದ ಮೇಲೂ ದುಷ್ಪರಿಣಾಮ ಬೀರುವುದು ಖಂಡಿತ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಮಿತಿ ವರದಿ ನೀಡಿದ್ದು, ಅದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. 

ಸ್ವಯಂ ವೈದ್ಯರಾಗೋದನ್ನು ತಡೆಯಲು ಕ್ರಮ:
ಸ್ವಯಂ ವೈದ್ಯರಾಗುವ ರೋಗಿಗಳು ಸಣ್ಣ ಪುಟ್ಟ ರೋಗಗಳಿಗೆ ಹೈ ಡೋಸ್ ಆ್ಯಂಟಿಬಯೋಟಿಕ್ ಬಳಸುತ್ತಿದ್ದಾರೆ. ಇದರಿಂದ ಹೊಸ ಹೊಸ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ. ಅಷ್ಟೇ ಅಲ್ಲ ಪಶು, ಪಕ್ಷಿಗಳಿಗೂ ಇಂಥ ಔಷಧಗಳನ್ನು ನೀಡಿ, ಅವುಗಳ ಮಾಂಸ ಸೇವಿಸುವ ಮನುಷ್ಯನಿಗೆ ಮತ್ತೊಂದಿಷ್ಟು ಹೊಸ ಹೊಸ ರೋಗಗಳು ಕಾಡುವ ಭೀತಿಯೂ ಇದ್ದು, ಇವೆಲ್ಲವಕ್ಕೂ ಪರಿಹಾರ ಎಂಬಂತೆ ಆರೋಗ್ಯ ಇಲಾಖೆ ಹೊಸ ನೀತಿ ರೂಪಿಸಲು ಮುಂದಾಗಿರುವುದು ಸ್ವಾಗತಾರ್ಹ. 


