Connect with us

ಧಾರ್ಮಿಕ

ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಅ.11ರಿಂದ ನವರಾತ್ರಿ ಉತ್ಸವ

Published

on

ಕಾಣಿಯೂರು : ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಅಕ್ಟೋಬರ್ 11ರಿಂದ 20ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಶ್ರೀ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಂ ಉಡುಪಿ, ಶ್ರೀ ಕಾಣಿಯೂರು ರಾಮತೀರ್ಥ ಮಠದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರ ಆದೇಶದಂತೆ ಉತ್ಸವ ಆಯೋಜಿಸಲಾಗಿದೆ. ಪ್ರತಿದಿನ ರಾತ್ರಿ 8 ಗಂಟೆಗೆ ಮಹಾಪೂಜೆ ನಡೆಯಲಿದೆ. ಅಕ್ಟೋಬರ್ 15ರಂದು ಬೆಳಗ್ಗೆ 8 ಗಂಟೆಯಿಂದ ವಿಶೇಷವಾಗಿ ಚಂಡಿಕಾಹೋಮ ಹಾಗೂ 12 ಕಾಯಿ ಗಣಹೋಮ ನಡೆಯಲಿದ್ದು, ಬೆಳಗ್ಗೆ 11 ಗಂಟೆಗೆ ಹೋಮದ ಪೂರ್ಣಾಹುತಿ ಹಾಗೂ ಸಂಕ್ಷಿಪ್ತ ಪ್ರವಚನ, ಮಧ್ಯಾಹ್ನ 12.30ರಿಂದ ಪ್ರಸಾದ ವಿತರಣೆ ನಡೆಯಲಿದೆ.

ಚಂಡಿಕಾಹೋಮ ಸೇವೆ ಮಾಡಿಸುವ ಭಕ್ತರು ರೂ.400 ಪಾವತಿಸಿ ಮಠದಲ್ಲಿ ರಶೀದಿ ಪಡೆಯಬಹುದು. ದೇವರ ಪೂಜೆ ಹಾಗೂ ಅನ್ನಸಂತರ್ಪಣೆಗೆ ಹೂವು, ತುಳಸಿ, ತುಪ್ಪ, ಎಣ್ಣೆ, ಬೆಲ್ಲ, ಬೇಳೆ, ಸಕ್ಕರೆ ಹಾಗೂ ತೆಂಗಿನಕಾಯಿಗಳನ್ನು ಸ್ವೀಕರಿಸಲಾಗುವುದು. ಭಕ್ತಾದಿಗಳು ಸಕುಟುಂಬ ಸಮೇತರಾಗಿ ಆಗಮಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಉತ್ಸವ ಸಮಿತಿ ಹಾಗೂ ಶ್ರೀ ಕಾಣಿಯೂರು ಮಠದ ವತಿಯಿಂದ ವಿನಂತಿಸಲಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement