Published
2 hours agoon
By
Akkare News

ಆದರೆ, ಸಾರ್ವಜನಿಕ ರಜೆ ಇಲ್ಲದ ಕಾರಣ ಸರ್ಕಾರಿ ನೌಕರರು, ಖಾಸಗಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಕಾರ್ಯಕ್ರಮಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಕ್ಕಳೂ ಹಬ್ಬದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಅನುಭವದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.ಹೀಗಾಗಿ, ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಾರ್ವಜನಿಕ ರಜೆಯಾಗಿ ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ತಮ್ಮ ಮೂಲಕ ಶಿಫಾರಸು ಮಾಡಿ, ಮುಖ್ಯಮಂತ್ರಿ ಹಾಗೂ ಸಂಬಂಧಿತ ಇಲಾಖೆಗೆ ಅಗತ್ಯ ಮನವಿ ಸಲ್ಲಿಸುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಯಾದವ ಸಭಾ ತಾಲೂಕು ಸಮಿತಿ ಕೋರಿದೆ.
ಈ ಸಂದರ್ಭದಲ್ಲಿ ಯಾದವ ಸಭಾ ತಾಲೂಕು ಸಮಿತಿ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಯಾದವ ಯುವ ವೇದಿಕೆ ಅಧ್ಯಕ್ಷ ಸುಶಾಂತ್ ಯಾದವ್, ಕಾರ್ಯದರ್ಶಿ ದಿನೇಶ್ ಯಾದವ್, ಯಾದವ ಸಭಾ ಕೇಂದ್ರಿಯ ಸಮಿತಿ ಸದಸ್ಯ ಶಿವಪ್ರಸಾದ್ ತಲೆಪ್ಪಾಡಿ, ಯಾದವ ಸಭಾ ಪ್ರಾದೇಶಿಕ ಸಮಿತಿ ಆರ್ಲಪದವು ಕೋಶಾಧಿಕಾರಿ ಶಿವರಾಮ ಮಣಿಯಾಣಿ ದೇವಸ್ಯ, ಪುತ್ತೂರು ನಗರ ಪ್ರಾದೇಶಿಕ ಸಮಿತಿ ಅಧ್ಯಕ್ಷ ದಾಮೋದರ ಮಣಿಯಾಣಿ ಸಂಪ್ಯ, ಎ-ಗ್ರೇಡ್ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕರುಣಾಕರ ಮಣಿಯಾಣಿ, ಯಾದವ ಸಭಾ ತಾಲೂಕು ಸಮಿತಿಯ ನಿಕಟಪೂರ್ವ ಕಾರ್ಯದರ್ಶಿ ನವೀನ್ ಮಣಿಯಾಣಿ ಮುಂಡೆಕೊಚ್ಚಿ ಹಾಗೂ ರಾಧಾಕೃಷ್ಣ ಮಣಿಯಾಣಿ ಕಲ್ಲರ್ಪೆ ಉಪಸ್ಥಿತರಿದ್ದರು.




