Published
2 hours agoon
By
Akkare News
ಬಂಧಿತನನ್ನು 63 ವರ್ಷದ ಬಂಧು ಸಿಂಗ್ ಎಂದು ಗುರುತಿಸಲಾಗಿದೆ. ಪೊಲೀಸರ ವಿಚಾರಣೆ ವೇಳೆ ಈತನ ‘ಪಂಚ ಪ್ರೇಯಸಿಯರ’ ವಿಚಾರ ಬೆಳಕಿಗೆ ಬಂದಿದ್ದು, ಪ್ರಕರಣ ಕೇಳಿ ಅಧಿಕಾರಿಗಳೇ ಅಚ್ಚರಿಗೊಂಡಿದ್ದಾರೆ.
ಐವರು ಮಹಿಳೆಯರೊಂದಿಗೆ ಸಂಬಂಧ! ಬಂಧು ಸಿಂಗ್ ಐವರು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅವರ ಜೀವನಶೈಲಿ, ಶೋಕಿ ಹಾಗೂ ದುಬಾರಿ ಬೇಡಿಕೆಗಳನ್ನು ಪೂರೈಸಲು ಆತ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ! ಇತ್ತೀಚೆಗೆ ಅಂಗಡಿಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ಅಂಗಡಿ ಮಾಲೀಕ ಹಾಗೂ ಸ್ಥಳೀಯರು ಆತನನ್ನು ಹಿಡಿದಿದ್ದಾರೆ. ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬಂಧು ಸಿಂಗ್ನ ಐವರು ಗೆಳತಿಯರು ಹಾಗೂ ಅವರ ಖರ್ಚುಗಳನ್ನು ನಿಭಾಯಿಸಲು ಆತ ಕಳ್ಳತನ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಬಂಧು ಸಿಂಗ್ನನ್ನು ಬಂಧಿಸಿ, ಈ ಹಿಂದೆ ಆತ ಇನ್ನೆಷ್ಟು ಕಳ್ಳತನಗಳನ್ನು ಮಾಡಿದ್ದಾನೆ? ಯಾರ್ಯಾರ ಜೊತೆ ಸೇರಿಕೊಂಡಿದ್ದಾನೆ? ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ. 63ರ ವಯಸ್ಸಿನಲ್ಲೂ ‘ಲವ್ ಲೈಫ್’ ಮೆಂಟೇನ್ ಮಾಡಲು ಕಳ್ಳತನಕ್ಕೆ ಇಳಿದ ಕಥೆ ಕೇಳಿ ನಿಮಗೆ ಏನನಿಸಿತು?


