Published
58 minutes agoon
By
Akkare Newsಮಂಗಳೂರು: ಕರಾವಳಿ ಭಾಗದಲ್ಲಿ ಪ್ರಪ್ರಥಮ ಬಾರಿಗೆ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಗೆ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ 18ರ ಮಹತ್ವದ ಸಭೆಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಂದು ದಿನ ಮುಂಚಿತವಾಗಿಯೇ, ಅಂದರೆ ಸೆಪ್ಟೆಂಬರ್ 17ರ ಸಂಜೆಯೇ ಕರಾವಳಿ ನಗರಿಗೆ ಬರಲಿದ್ದಾರೆ. 
ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಆಯೋಜನೆಯಾಗುತ್ತಿರುವುದರಿಂದ ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಪ್ರಮುಖ ಯೋಜನೆಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಪ್ರಮುಖ ಘೋಷಣೆಗಳು ಹೊರಬೀಳುವ ಸಾಧ್ಯತೆಗಳಿವೆ. ಇದು ಈ ಭಾಗದ ಜನರಲ್ಲಿ ನಿರೀಕ್ಷೆ ಗರಿಗೆದರುವಂತೆ ಮಾಡಿದೆ. ಸಭೆಯ ಮುಂದಾಳು ಆಗಿರುವ ಮುಖ್ಯಮಂತ್ರಿಗಳ ಅಧಿಕೃತ ಪ್ರವಾಸ ವೇಳಾ ಪಟ್ಟಿ ಹೀಗಿದೆ.

ಸಿಎಂ ಡಿ.ಕೆ. ಶಿವಕುಮಾರ್ ಅವರ ಮೂರು ದಿನಗಳ ಕರಾವಳಿ ಪ್ರವಾಸದ ವಿವರ
ದಿನ 1
ಸೆಪ್ಟೆಂಬರ್ 17 (ಗುರುವಾರ) – ಮಂಗಳೂರಿಗೆ ಆಗಮನ
ಸಂಜೆ 04:10: ಕಲಬುರಗಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ನಿರ್ಗಮನ.
ಸಂಜೆ 05:25: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಬಜಪೆ) ಆಗಮನ.
ರಾತ್ರಿ: ಮಂಗಳೂರಿನಲ್ಲಿ ವಾಸ್ತವ್ಯ.
ದಿನ 2
ಸೆಪ್ಟೆಂಬರ್ 18 (ಶುಕ್ರವಾರ) – ಸಂಪುಟ ಸಭೆ ಹಾಗೂ ಹೆಬ್ರಿ ಭೇಟಿ
ಬೆಳಗ್ಗೆ 10: ಮಂಗಳೂರಿನ ಪಡೀಲ್ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ನೂತನ ಕಚೇರಿ ಸಂಕೀರ್ಣ ‘ಪ್ರಜಾಸೌಧ’ದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ಮತ್ತು ಸಭೆ.
ಮಧ್ಯಾಹ್ನ 02:30: ಮಂಗಳೂರಿನ ಮೇರಿಹಿಲ್ಸ್ ಹೆಲಿಪ್ಯಾಡ್ನಿಂದ ಹೆಲಿಕಾಪ್ಟರ್ ಮೂಲಕ ಉಡುಪಿ ಜಿಲ್ಲೆಯ ಹೆಬ್ರಿಗೆ ನಿರ್ಗಮನ.

ಮಧ್ಯಾಹ್ನ 03: ಹೆಬ್ರಿ ತಲುಪಿ, ಅಲ್ಲಿ ಬಹುಮುಖ್ಯವಾದ ಕಸ್ತೂರಿರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಮಹತ್ವದ ಸಭೆಯಲ್ಲಿ ಭಾಗಿ.
ಸಂಜೆ 05: ಹೆಬ್ರಿಯಿಂದ ಹೆಲಿಕಾಪ್ಟರ್ ಮೂಲಕ ಮರಳಿ ಮಂಗಳೂರಿಗೆ ಪ್ರಯಾಣ.
ಸಂಜೆ 05:30: ಮಂಗಳೂರಿನ ಮೇರಿಹಿಲ್ಸ್ ಹೆಲಿಪ್ಯಾಡ್ಗೆ ಆಗಮನ.
ರಾತ್ರಿ: ಮಂಗಳೂರಿನಲ್ಲೇ ವಾಸ್ತವ್ಯ.
ದಿನ 3
ಸೆಪ್ಟೆಂಬರ್ 19 (ಶನಿವಾರ) – ಮಲೆನಾಡು ಪ್ರವಾಸ, ಬೆಂಗಳೂರಿಗೆ ವಾಪಸ್
ಬೆಳಗ್ಗೆ 09:30: ಮಂಗಳೂರಿನ ಮೇರಿಹಿಲ್ಸ್ ಹೆಲಿಪ್ಯಾಡ್ನಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ನಿರ್ಗಮನ.
ಬೆಳಗ್ಗೆ 10: ತೀರ್ಥಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನಕ್ಕೆ ಆಗಮನ ಹಾಗೂ ಕಸ್ತೂರಿರಂಗನ್ ವರದಿ ಕುರಿತ ಸಭೆಯಲ್ಲಿ ಭಾಗಿ.
ಮಧ್ಯಾಹ್ನ 12:30: ತೀರ್ಥಹಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿಗೆ ಪ್ರಯಾಣ.
ಮಧ್ಯಾಹ್ನ 01 ಶ್ರೀ ರಂಭಾಪುರಿ ಮಠದ ಆವರಣಕ್ಕೆ ಆಗಮನ ಹಾಗೂ ಕಸ್ತೂರಿರಂಗನ್ ವರದಿ ಕುರಿತ ಸಭೆ.
ಮಧ್ಯಾಹ್ನ 03: ಬಾಳೆಹೊನ್ನೂರಿನಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ನಿರ್ಗಮನ.
ಸಂಜೆ 04: ಬೆಂಗಳೂರಿನ ಹೆಚ್.ಎ.ಎಲ್ (HAL) ವಿಮಾನ ನಿಲ್ದಾಣಕ್ಕೆ ವಾಪಸ್.

