Connect with us

ರಾಜಕೀಯ

ಕೇರಳಂ ನೂತನ ಸಿಎಂ ಆಗಿ ವಿ ಡಿ ಸತೀಶನ್‌ ಆಯ್ಕೆ

Published

on

ಕಳೆದ 10 ದಿನಗಳಿಂದ ಕೇರಳ ರಾಜಕೀಯದಲ್ಲಿದೊಡ್ಡ ಸಸ್ಪೆನ್ಸ್ ಮುಂದುವರಿದಿತ್ತು. 10 ವರ್ಷಗಳ ಬಳಿಕ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮತ್ತೆ ಅಧಿಕಾರಕ್ಕೆ ಬಂದರೂ, ಹೊಸ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗದೇ ಗೊಂದಲ ಹೆಚ್ಚಾಗಿತ್ತು. ಈಗ ಈ ಗೊಂದಲಕ್ಕೆ ಅಂತ್ಯಕಂಡಿದ್ದು, ಹೊಸ ಮುಖ್ಯಮಂತ್ರಿಯ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಪಕ್ಷದೊಳಗೆ ದೀರ್ಘ ಚರ್ಚೆ ನಡೆದಿದ್ದು, ವಿ.ಡಿ. ಸತೀಶನ್ ಹೆಸರು ಅಂತಿಮಗೊಂಡಿದೆ.
ಚುನಾವಣೆಯಲ್ಲಿ ಯುಡಿಎಫ್ ಬಹುಮತ ಪಡೆದ ತಕ್ಷಣವೇ, ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಪಕ್ಷದೊಳಗೆ ತೀವ್ರ ಚರ್ಚೆಗಳು ಆರಂಭವಾದವು. ದೆಹಲಿಯಿಂದ ತಿರುವನಂತಪುರದವರೆಗೆ ಹಲವಾರು ಸಭೆಗಳು, ಲಾಬಿ, ಮುಚ್ಚಿದ ಬಾಗಿಲಿನ ಮಾತುಕತೆಗಳು ನಡೆದವು. ಇದೀಗ ಇದಕ್ಕೆ ಉತ್ತರ ಸಿಕ್ಕಿದೆ. ನೂತಮ ಮುಖ್ಯಮಂತ್ರಿಯಾಗಿ ವಿ,ಡಿ ಸತೀಶ್​ನ ಆಯ್ಕೆ
ಇಲ್ಲಿ ಮುಖ್ಯ ಪ್ರಶ್ನೆ ಕೇರಳಂಗೆ ‘ಯಾರು ಮುಖ್ಯಮಂತ್ರಿಯಾಗುತ್ತಾರೆ?’ ಎಂಬುದಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಕೇರಳ ಕಾಂಗ್ರೆಸ್‌ನ ರಾಜಕೀಯ ನಾಯಕತ್ವವನ್ನು ಯಾರ ಕೈಗೆ ಒಪ್ಪಿಸಬೇಕು ಎಂಬುದೂ ಆಗಿತ್ತು. ಈ ಸಂಪೂರ್ಣ ಪ್ರಕ್ರಿಯೆಯನ್ನು ರಾಹುಲ್ ಗಾಂಧಿ ಸಮೀಪದಿಂದಲೇ ಗಮನಿಸಿ ಮುನ್ನಡೆಸಿದ್ದು, ಅವರು ಕೇರಳ ಕಾಂಗ್ರೆಸ್‌ನ ಹಿರಿಯ ನಾಯಕರು, ಮಾಜಿ ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವವರೊಂದಿಗೆ ಹಲವಾರು ಸುತ್ತಿನ ಚರ್ಚೆ ನಡೆಸಿ ಈಗ ಫೈನಲ್​ ಮಾಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement