Published
47 minutes agoon
By
Akkare News
ಪುತ್ತೂರು: ಗಣೇಶ ಚತುರ್ಥಿಯ ಶುಭ ಸಂದರ್ಭವನ್ನು ಇನ್ನಷ್ಟು ಸಡಗರದಿಂದ ಆಚರಿಸಲು ಖ್ಯಾತ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ತಮ್ಮ ಗ್ರಾಹಕರಿಗಾಗಿ ವಿಶೇಷ ಆಫರ್ಗಳನ್ನು ಪ್ರಕಟಿಸಿದೆ. ಸೆಪ್ಟೆಂಬರ್ 12ರಿಂದ 14ರವರೆಗೆ ಕೇವಲ 3ದಿನಗಳ ಕಾಲ ಈ ಸೀಮಿತ ಅವಧಿಯ ಕೊಡುಗೆಗಳು ಲಭ್ಯವಿರಲಿವೆ.
1957ರಿಂದ ಆಭರಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯು ಪುತ್ತೂರು, ಸುಳ್ಯ, ಮೂಡಬಿದ್ರೆ, ಹಾಸನ ಹಾಗೂ ಕುಶಾಲನಗರ ಶಾಖೆಗಳನ್ನು ಹೊಂದಿವೆ. ಮಂಗಳೂರಿನಲ್ಲಿ ತನ್ನ ನೂತನ ಮತ್ತು ಬೃಹತ್ ಶೋರೂಂ ಅನ್ನು ಪ್ರಾರಂಭಿಸಲು ಭರಪೂರ ಸಿದ್ಧತೆ ನಡೆಸುತ್ತಿದೆ.2027ರ ಆರಂಭದಲ್ಲಿ ಈ ನೂತನ ಶಾಖೆಯು ಅಧಿಕೃತವಾಗಿ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ. ಗ್ರಾಹಕರಿಗೆ ಅತ್ಯುತ್ತಮ ಖರೀದಿಯ ಅನುಭವ ಹಾಗೂ ವಿಶೇಷ ಆಫರ್ಗಳೊಂದಿಗೆ ಶೀಘ್ರದಲ್ಲೇ ಶುಭಾರಂಭದ ದಿನಾಂಕವನ್ನು ಸಂಸ್ಥೆಯು ಪ್ರಕಟಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 



