Published
12 hours agoon
By
Akkare News
ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ಕೊಡಗು ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ ಆಡಳಿತ ಕೊಡಗು ಮತ್ತು ಜ್ಞಾನ ಭಾರತಿ ಪ್ರೌಢಶಾಲೆ ಕುಶಾಲನಗರ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ 17ರ ವಯೋಮಾನದ ಕಬಡ್ಡಿ ಪಂದ್ಯಾಟದಲ್ಲಿ ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಶಾಲಾ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಸತತ 4ನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 
ಜುಏನಾ ಡ್ಯಾಝಲ್ ಕುಟಿನ್ಹ ,ಸನ್ನಿಧಿ,ಹಾರ್ದಿಕ ಪಿ,ಜೆನಿಟ ಸಿಂಧು ಪಸನ್ನ,ಧನ್ಯ ಶ್ರೀ,ಜನನಿ ಪಿ ಗೌಡ,ಆಯಿಷತ್ ಶಹೀಮ,ಫಾತಿಮತ್ ಅಫ್ರಾ,ಹೆಚ್ ನಮೃತಾ ಶೆಟ್ಟಿ, ದಿಶಾ ಸುನಿಲ್ ಸಾಲಿಯಾನ್ ಶಾನ್ವಿ, ಮನಸ್ವಿ, ಶ್ರೇಯ, ನಿಧಿಶ್ರೀ ಉತ್ತಮ ಪ್ರದರ್ಶನ ನೀಡಿದರು. ಜುಏನಾ ಡ್ಯಾಝಲ್ ಕುಟಿನ್ಹಾ ಸವ್ಯಸಾಚಿ ಆಟಗಾರ್ತಿ ಹಾಗೂ ಹಾರ್ದಿಕ ಪಿ ಉತ್ತಮ ದಾಳಿಗಾರ್ತಿ ಪ್ರಶಸ್ತಿ ಪಡೆದುಕೊಂಡರು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಅನಿತಾ ಟ್ರೆಸ್ಸಿ ಯವರ ಮಾರ್ಗದರ್ಶನದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್ ತರಬೇತಿ ನೀಡಿದ್ದಾರೆ.







