ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಬೆಂಗಳೂರು ಕಂಬಳದ ಯಶಸ್ವಿಗಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಶಾಸಕ ಅಶೋಕ್‌ ರೈ

Published

on

ಪುತ್ತೂರು: ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳದ ಯಶಸ್ಸಿಗೆ ಪುತ್ತೂರು ಸೀಮೆ ದೇವರಾದ ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹ ಬೇಕು.ಇತ್ತೀಚೆಗೆ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ದೇವಿಯ ಅನುಗ್ರಹ ಪಡೆದಿದ್ದೇವೆ. ಇದರ ಜೊತೆಗೆ ಎಲ್ಲಾ ಧರ್ಮಗಳ ದೇವರುಗಳ ಅನುಗ್ರಹಬೇಕು. ಈ ನಿಟ್ಟಿನಲ್ಲಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದರು.

 

ಬೆಂಗಳೂರು ಕಂಬಳದ ಯಶಸ್ವಿಗಾಗಿ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಬಳಿಕ ಮಾದ್ಯಮದ ಜೊತೆ ಮಾತನಾಡಿದರು. ಬೆಂಗಳೂರಿನಲ್ಲಿ ನಮ್ಮ ಕಂಬಳ ಬಹಳ ವಿಜ್ರಂಭಣೆಯಿಂದ ವ್ಯವಸ್ಥಿತ ರೀತಿಯಲ್ಲಿ ನಡೆಯಲಿದೆ. ಇದರ ಎಲ್ಲಾ ಪೂರ್ವಭಾವಿ ಕಾರ್ಯಗಳು ನಡೆಯುತ್ತಿದೆ. ಅ.11ರಂದು ಬೆಳಿಗ್ಗೆ ಗಂಟೆ 10.30ಕ್ಕೆ ಬೆಂಗಳೂರಿನಲ್ಲಿ ಕರೆ ಮುಹೂರ್ತ ನಡೆಯಲಿದೆ.ತುಳುನಾಡ ಕ್ರೀಡೆ ಕಂಬಳ ಒಳ್ಳೆಯ ರೀತಿಯಲ್ಲಿ ನಡೆಯಬೇಕು.ಇದಕ್ಕೆ ಎಲ್ಲಾ ಜನರ ಸಹಕಾರ ಬೇಕು. ಸರಕಾರದಿಂದಲೂ ಪೂರ್ಣ ಸಹಕಾರ ಸಿಗಲಿದೆ. ಇದರಲ್ಲಿ ಪಕ್ಷದ ವಿಚಾರ ಇಲ್ಲ. ಎಲ್ಲಾ ಪಕ್ಷದವರು ಸೇರಿಕೊಂಡು ಒಂದೆ ಮನಸ್ಸಿನಿಂದ ಸಹಕಾರ ಕೊಡಬೇಕು. ದಕ್ಷಿಣ ಕನ್ನಡ ಉಡುಪಿ ಅವಿಭಜಿತ ಜಿಲ್ಲೆಯ ಬಂಧುಗಳಿಂದ ಈ ಕ್ರೀಡೆ ದೇಶಕ್ಕೆ ಪರಿಚಯ ಮಾಡುವ ಕಾರ್ಯ ಆಗಲಿದೆ ಎಂದ ಅವರು ಈಗಾಗಲೇ ಕಂಬಳ ಯಾವ ರೀತಿಯ ನಡೆಯಲಿದೆ. ಯಾವಾಗ ಬರಬೇಕು. ಟಿಕೇಟ್ ಇದೆಯಾ ಎಂದು ಜನರು ನನಗೆ ಪೋನ್ ಮಾಡಿ ಕೇಳುತ್ತಿದ್ದಾರೆ. ರಾಜಕೀಯ ಮಂತ್ರಿಗಳು ಕೂಡಾ ನಮಗೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ ಎಂದು ಅವರು ಹೇಳಿದರು. ಈ ಸಂದರ್ಭ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್‌ ಮುಳಿಯ , ಸದಸ್ಯ ಶೇಖರ್ ನಾರಾವಿ, ಕಂಬಳ ಸಮಿತಿಯ ಮುರಳಿಧರ ರೈ ಮಠಂತಬೆಟ್ಟು, ಪಂಜಿಗುಡ್ಡೆ ಈಶ್ವರ ಭಟ್, ಪ್ರಸನ್ನ ಕುಮಾರ್ ರೈ,ಕಂಬಳ ಸಮಿತಿ ಉಮೇಶ್ ಕರ್ಕೆರ, ಕೋಣದ ಮಾಲಕ ಕೇಶವ ಕೈಪ,ಸಮಿತಿ ಕೃಷ್ಣಪ್ರಸಾದ್ ಆಳ್ವ , ಶಿವರಾಮ ಆಳ್ವ, ರಂಜಿತ್ ಬಂಗೇರ ಸಹಿತ ಕಂಬಳದ ಕೋಣಗಳ ಮಾಲಕರುಗಳು ಉಪಸ್ಥಿತರಿದ್ದರು.

 

 

78 ಜೊತೆ ಕೋಣಗಳು ಈಗಾಗಲೇ ನೋಂದಾವಣೆ:

ಈಗಾಗಲೇ ಕಂಬಳ ಸಮಿತಿ ರಚನೆ ಮಾಡಿ ವೆಬ್‌ಸೈಟ್ ಮೂಲಕ ಎಲ್ಲಾ ಮಾಹಿತಿ ನೀಡಲಿದ್ದೇವೆ. ಈ ನಡುವೆ ಈಗಲೇ ಸುಮಾರು 78 ಜೊತೆ ಕೋಣಗಳು ನೋಂದಾವಣೆ ಆಗಿದೆ. ನಮಗೆ ಕೋಣಗಳ ಯಜಮಾನರು ಅಷ್ಟು ದೂರಕ್ಕೆ ಬಂದು ಭಾಗವಹಿಸುತ್ತಾರೋ ಎಂಬ ಆತಂಕವಿತ್ತು. ಆದರೆ ಪೋನ್ ಕರೆ ಮಾಡಿ ನೋಂದಾವಣೆ ಮಾಡುತ್ತಿರುವುದು ಕಂಬಳಕ್ಕೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.

 

 

ಅ.24 ರೈಲು, ಬಸ್‌ಗಳು ಬುಕ್ಕಿಂಗ್:

ಅ.24ಕ್ಕೆ ಮಂಗಳೂರಿನಿಂದ ಹೊರಡುವ ರೈಲು ಬುಕ್ಕಿಂಗ್ ಆಗಿದೆ. ಬಸ್‌ಗಳು ಭರ್ತಿಗೊಂಡಿವೆ. ಈ ನಿಟ್ಟಿನಲ್ಲಿ ಹೆಚ್ಚುವರಿ ರೈಲು ಓಡಿಸಲು ರೈಲ್ವೇ ಮಂತ್ರಿಗಳಲ್ಲಿ ಕಂಬಳ ಸಮಿತಿಯಿಂದ ಮನವಿ ಮಾಡಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಮಾರು 15ಸಾವಿರಕ್ಕೂ ಮಿಕ್ಕಿ ಜನರು ಈಗಾಗಲೇ ಹೊರಟ್ಟಿದ್ದಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.

 

ತುಳು ಭವನ ನಿರ್ಮಾಣ ಉದ್ದೇಶ:

ಕಂಬಳದ ಮೂಲಕ ತುಳು ನಾಡಿನ ಸಂಸ್ಕೃತಿ ದೇಶಕ್ಕೆ ಪರಿಚಯವಾಗಲಿದೆ. ಇದರ ಜೊತೆಗೆ ಬೆಂಗಳೂರಿನಲ್ಲಿ ತುಳು ಭವನ ನಿರ್ಮಾಣ ಮಾಡುವ ಉದ್ದೇಶ ಇದೆ. ಅದಕ್ಕೆ ದೇವರ ಅನುಗ್ರಹ ಬೇಕು. ಕಂಬಳಕ್ಕೆ ಸುಮಾರು 7 ರಿಂದ 8 ಕೋಟಿಯಷ್ಟು ವೆಚ್ಚ ಆಗಬಹುದು. ಎಲ್ಲದಕ್ಕೂ ಸರ್ವ ಧರ್ಮಗಳ ದೇವರ ಅನುಗ್ರಹ ಬೇಕು ಎಂದು ಅಶೋಕ್ ಕುಮಾರ್ ರೈ ಹೇಳಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version