Connect with us

ದಕ್ಷಿಣ ಕನ್ನಡ

ಶ್ರೀ ಮಹಾಲಿಂಗೇಶ್ವರ ಐ ಟಿ ಐ ಘಟಿಕೋತ್ಸವದಲ್ಲಿ ಶಾಸಕ ಅಶೋಕ್ ಕುಮಾರ್ ರೈ ರವರಿಗೆ ಸನ್ಮಾನ

Published

on

 

  1.  “ಯಾವುದೇ ಕೆಲಸವನ್ನು ಇಚ್ಛಾಶಕ್ತಿಯಿಂದ ಮಾಡಿದರೆ ಯಶಸ್ವಿ ಖಂಡಿತ”ಅಶೋಕ್ ಕುಮಾರ್ ರೈ

ಪುತ್ತೂರು :ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ ಕೌಶಲ್ಯ ಸಭಾಭವನದಲ್ಲಿನ ಡಿ. ವಿ.ಸದಾನಂದ ಗೌಡ ಮತ್ತು ಸಂಜೀವ ಮಠoದೂರು ವೇದಿಕೆಯಲ್ಲಿ ನಡೆದ ವಾರ್ಷಿಕ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ, ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದರು. ಇಂಜಿನಿಯರಿಂಗ್ ಮಾಡಿದ ತುಂಬಾ ಜನ ಕೆಲಸ ಇಲ್ಲದೆ ಇದ್ದಾರೆ,ಆದರೆ ಐ ಟಿ ಐ ಮಾಡಿದವ ಎಲ್ಲರಿಗೂ ಕಂಪನಿಗಳಲ್ಲಿ, ಸ್ವಉದ್ಯೋಗಗಳಲ್ಲಿ ಮಾನ್ಯತೆ ಸಿಗುವಂತೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಸರಕಾರಿ ಐಟಿಐ ಸೀಟಿಗಾಗಿ ಬೇಕಾದಷ್ಟು ಶಿಫಾರಸ್ಸಿಗಾಗಿ ನನ್ನ ಬಳಿ ಬರುತ್ತಾರೆ. ಇವತ್ತು ಐ ಟಿ ಐ ಗೆ ಹೆಚ್ಚಿನ ಬೇಡಿಕೆ ಇದೆ. ಯಾರು ಸಹ ಹಣವಿದ್ದು ಉದ್ಯಮ ಮಾಡುವುದಿಲ್ಲ, ನಾನು ಕೂಡ. ಜೀವನದಲ್ಲಿ ಕಷ್ಟಪಟ್ಟು, ಇಚ್ಚಾಶಕ್ತಿಯಿಂದ ಕೆಲಸ ಮಾಡಿದರಿಂದ ಇವತ್ತು ಉದ್ಯಮಿಯಾಗಲು ಸಾಧ್ಯವಾಯಿತು ಎಂದರು.

ಈ ಸಂದರ್ಭದಲ್ಲಿ ಐ ಟಿ ಐ ವತಿಯಿಂದ ನೂತನ ಶಾಸಕರನ್ನು ಸನ್ಮಾನಿಸಲಾಯಿತು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version