ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಬಡವರ ಕಣ್ಣೀರು ಒರೆಸುವ ಉದ್ದೇಶಕ್ಕಾಗಿಯೇ ನಮ್ಮ ‘ಟ್ರಸ್ಟ್’ : ಸುಮಾ ಅಶೋಕ್ ರೈ

Published

on

ಪುತ್ತೂರು: ಶಾಸಕರಾದ ಅಶೋಕ್ ಕುಮಾರ್ ರೈ ಅವರ ಸಾರಥ್ಯದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ನವಂಬರ್ 13ರ ಸೋಮವಾರದಂದು ಪುತ್ತೂರಿನ ಕೊಂಬೆಟ್ಟುವಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಟ್ರಸ್ಟ್ ನ ಪಲಾನುಭವಿಗಳ ಸಮಾವೇಶ,ವಸ್ತ್ರ ವಿತರಣೆ, ಗೂಡು ದೀಪ ಸ್ಪರ್ಧೆ ಕಾರ್ಯಕ್ರಮಕ್ಕೆ ಗ್ರಾಮಸ್ಥರನ್ನು ಅಹ್ವಾನ ಮಾಡುವ ಗ್ರಾಮ ಭೇಟಿ ಕಾರ್ಯಕ್ರಮ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರ ಮನೆಯಲ್ಲಿ ಇಂದು ನಡೆಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಯವರ ಧರ್ಮಪತ್ನಿ ಸುಮಾ ಅಶೋಕ್ ರೈಯವರು, 12 ವರ್ಷಗಳ ಹಿಂದೆಯೇ ನಮ್ಮ ಮನೆಗೆ ಅನೇಕ ಬಡವರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾ ಸಹಾಯಕ್ಕಾಗಿ ಬರುತ್ತಿದ್ದರು. ನಂತರ ದಿನಗಳಲ್ಲಿ ಇಂತಹ ಕಷ್ಟದಲ್ಲಿರುವ ಬಡ ಜನರ ಕಣ್ಣೀರು ಒರೆಸುವ ಉದ್ದೇಶದಿಂದಲೇ ಟ್ರಸ್ಟನ್ನು ಸ್ಥಾಪಿಸಲಾಗಿದೆ. ನಮ್ಮ ಟ್ರಸ್ಟ್ ಗೆ ಯಾರ ಕೈಯಿಂದಲೂ ಡೊನೇಷನ್ ಕೇಳುವ ಕೆಲಸ ನಾವು ಮಾಡಿಲ್ಲ, ಕೇವಲ ನಮ್ಮ ಸಂಪಾದನೆಯಿಂದಲೇ ಈ ಟ್ರಸ್ಟ್ ನ್ನು ನಡೆಸಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು. ದೀಪಾವಳಿ ಹಬ್ಬದಂದು ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಸಮಾವೇಶ, ವಸ್ತ್ರ ವಿತರಣೆ ಮತ್ತು ಗೂಡುದೀಪ ಸ್ಪರ್ಧೆಯಲ್ಲಿ ಎಲ್ಲರೂ ಪ್ರೀತಿಯಿಂದ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಸಭೆಯಲ್ಲಿ ಅಶೋಕ್ ಕುಮಾರ್ ರೈ ಅವರ ಸಹೋದರಿ ನಳಿನಿ ಪಿ. ಶೆಟ್ಟಿ, ಕೋಡಿಂಬಾಡಿ ಗ್ರಾ.ಪಂ.ಉಪಾಧ್ಯಕ್ಷ ಜಯಪ್ರಕಾಶ ಬದಿನಾರು, ರಾಮಣ್ಣ ಪಿಲಿಂಜೆ , ಸಂಕಪ್ಪಗೌಡ ಮೊದಲಾದರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version