ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಶಾಸಕರ ಭೇಟಿ, ಗುದ್ದಲಿಪೂಜೆ ನಾನು ಗೆಜ್ಜೆಗಿರಿಯ ಭಕ್ತನಾಗಿ ಇಲ್ಲಿಗೆ ಬಂದಿದ್ದೇನೆ-ಅಶೋಕ್ ರೈ

Published

on

ಪುತ್ತೂರು: ನಾನು ಗೆಜ್ಜೆಗಿರಿಯ ಭಕ್ತನಾಗಿ ಇಲ್ಲಿನ ಗರಡಿ ರಸ್ತೆ ಕಾಂಕ್ರಿಟೀಕರಣಕ್ಕೆ 15 ಲಕ್ಷ ರೂ ಅನುದಾನವನ್ನು ನೀಡಿದ್ದೇನೆ. ಚುನಾವಣೆಗೆ ಮುನ್ನವೂ ಈ ಕ್ಷೇತ್ರಕ್ಕೆ ಬಂದಿದ್ದೇವೆ. ನನಗೆ ಆಶೀರ್ವಾದ ಮಾಡಿದ್ದು, ನಾನೀಗ ಶಾಸಕನಾಗಿದ್ದೇನೆ, ಗೆಜ್ಜೆಗಿರಿ ಕ್ಷೇತ್ರದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ನೀಡುವುದಾಗಿ ಶಾಸಕ ಅಶೋಕ್ ರೈ ಹೇಳಿದರು.

ಅವರು ಗೆಜ್ಜೆಗಿರಿ ಗರಡಿ ರಸ್ತೆಗೆ ಕಾಂಕ್ರೀಟ್‌ಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲೇ ಗುರುತಿಸಿಕೊಂಡಿರುವ ಗೆಜ್ಜೆಗಿರಿ ಕ್ಷೇತ್ರಕ್ಕೆ ಭಕ್ತಾದಿಗಳಿಗೆ ತೆರಳುವ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕರು ತಿಳಿಸಿದರು.






ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಶ್ರೀಧರ ಪೂಜಾರಿ, ವಲಯ ಕಾಂಗ್ರೆಸ್ ಅಧ್ಯಕ್ಷ ಆಬಿದ್ ಬಡಗನ್ನೂರು, ಜಯರಾಜ್ ರೈ ಅನಿಲೆ, ಕಾಶ್ಮೀರ್ ಡಿಸೋಜಾ,, ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಕೃಷ್ಣಪ್ರಸಾದ್ ಆಳ್ವ, ಶಾಹುಲ್ ಕಾವುಂಜ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಚಂದ್ರಶೇಖರ ಕಲ್ಲಗುಡ್ಡೆ, ಪ್ರಕಾಶ್ ರೈ ಕೊಯಿಲ, ದೀಕ್ಷಿತ್ ಪಡುವನ್ನೂರು,ಗುತ್ತಿಗೆದಾರ ಯತೀಶ್, ಮೊದಲಾದವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version