ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ಮೋದಿಯವರ ರಾಜಕೀಯ ಭವಿಷ್ಯ ಇನ್ನೂ ಎರಡು ವರ್ಷ ಮಾತ್ರ, ಜೊತೆಗೆ ಇದ್ದವರಿಂದಲೇ ಗಂಡಾಂತರ :ಬ್ರಹ್ಮಾಂಡ ಗುರೂಜಿ ಭವಿಷ್ಯ

Published

on

ಬೆಂಗಳೂರು: ಮುಂದೆ ಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದು ಪ್ರಧಾನಿಯಾದರೂ ತಮ್ಮ ಸ್ಥಾನಕ್ಕೆ ಅರ್ಧದಲ್ಲಿ ರಾಜೀನಾಮೆ ಕೊಡಲಿದ್ದಾರೆ. ಯಾಕೆಂದರೆ ಅವರಿಗೆ ಗಂಡಾಂತರ ಎದುರಾಗಲಿದೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಒನ್ ಇಂಡಿಯಾ ಸಂಸ್ಥೆ ನಡೆಸಿರುವ ಸಂದರ್ಶನದಲ್ಲಿ ಅವರು ಈ ಭವಿಷ್ಯ ನುಡಿದಿದ್ದಾರೆ. 12 ವರ್ಷಗಳು ಮಾತ್ರ ಮೋದಿಯವರಿಗೆ ಶುಭ ಯೋಗವಿದೆ. ಆದ್ದರಿಂದ ನರೇಂದ್ರ ಮೋದಿ ಮುಂಬರುವ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ. ಮೋದಿ ಕೈಕೆಳಗಡೆ ಒಂದಿಷ್ಟು ಮಂದಿ ಲಂಚ ತಿನ್ನದವರಿದ್ದರು. ಕ್ಲೀನ್ ಹ್ಯಾಂಡ್‌ಗಳು ಇದ್ದವು. ಆದರೆ ಇತ್ತೀಚೆಗೆ ಅವರೇ ಭ್ರಷ್ಟಾಚಾರ ಮಾಡಿಕೊಂಡು ಬರುತ್ತಿದ್ದಾರೆ. ಯಾಕೆ ಹೀಗೆ ಮಾಡುತ್ತದ್ದಾರೆಂದರೆ, ಒಬ್ಬ ರಾಜನನ್ನು ಹಾಳ ಮಾಡಬೇಕೆಂದು ಹಲವಾರು ಮಂದಿ ಕಾಯುತ್ತಿರುತ್ತಾರೆ. ಅದು ವಿರೋಧ ಪಕ್ಷದವರೇ ಆಗಬೇಕು ಅಂತಿಲ್ಲ. ರಾಜನನ್ನು ಒಬ್ಬ ಮಂತ್ರಿ, ಸೈನಿಕ ಕೂಡ ಹಾಳು ಮಾಡಬಹುದು. ಇವರು ಮಾಡೋ ಕೆಟ್ಟ ಕೆಲಸಗಳಿಂದ ಮೋದಿಗೆ ಕೆಟ್ಟ ಹೆಸರು ಬರಬಹುದು. ಇಂಥಹ ಬಹಳಷ್ಟು ಗಂಡಾಂತರಗಳು ಮೋದಿಗೆ ಇವೆ.







ನರೇಂದ್ರ ಮೋದಿ ವರ್ಚಸ್ಸು ಎಷ್ಟಿದೆ ಅಂದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೇರಿದರೂ ಮೋದಿಯವರು ಗೆಲ್ಲುತ್ತಾರೆ. ಎಲ್ಲಾ ಕಾಂಗ್ರೆಸ್ ನವರು ನರೇಂದ್ರ ಮೋದಿ ಬಳಿಯೇ ಬರುತ್ತಾರೆ. ಹೊರಗಡೆಯಿಂದ ಸಪೋರ್ಟ್ ಮಾಡುವವರು ಬಹಳ ಮಂದಿಯಿದ್ದಾರೆ. ಉದಾಹರಣೆಗೆ ಹೆಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮೋದಿಗೆ ಸಪೋರ್ಟ್ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ನವರು ದೆಹಲಿಯಲ್ಲಿ ಸಾವಿರಾರು ಜನ ಸೇರಿಕೊಂಡರೂ ನರೇಂದ್ರ ಮೋದಿಯವರನ್ನು ಏನು ಮಾಡಕ್ಕೂ ಆಗಲ್ಲ. ಯಾಕೆಂದರೆ ಅವರ ಯೋಗ ಇನ್ನೂ ಚೆನ್ನಾಗಿದೆ.

ಹನ್ನೆರಡು ವರ್ಷ ಮಾತ್ರ ಮೋದಿಗೆ ಶುಭ ಯೋಗವಿದೆ. ಒಂದು ವೇಳೆ ಅವರು ವೈರಾಗ್ಯ ಬಂದು ರಾಜೀನಾಮೆ ನೀಡದೇ ಇದ್ದಲ್ಲಿ ಗಂಡಾಂತರ ಎದುರಾಗಲಿದೆ. ಅಂದರೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ದರ ಮೋದಿ ಅವರಿಗೆ ಏನಾದರೂ ಮಾಡಬಹುದು. ಅವರ ಜನರೇ ಅವರಿಗೆ ಕುತಂತ್ರದಿಂದ ಏನಾದ್ರು ಮಾಡಬಹುದು.

ಮಲ್ಲಿಕಾರ್ಜುನ ಖರ್ಗೆ ಅವರು ಮೋದಿಯವರ ಬಗ್ಗೆ ರಾಜ್ಯದಲ್ಲಿ ಮಾತ್ರ ವಿರೋಧ ಅಷ್ಟೇ. ದೆಹಲಿ ಹೋದ್ರೆ ಆಲ್ ಪಾರ್ಟಿ ಮೀಟಿಂಗ್ ಅಲ್ಲಿ ಅವರೂ ಬಾಯಿ ಮುಚ್ಚಿಕೊಂಡು ಕುಳಿತಿರುತ್ತಾರೆ. ಯಾಕೆಂದರೆ ಮೋದಿ ಹೇಗೆ ಅನ್ನೋದು ಅವರಿಗೆ ಚೆನ್ನಾಗಿ ಗೊತ್ತು. ಮೋದಿಯವರು ಬೇರೆ ಪಕ್ಷಕ್ಕೆ ಅಧಿಕಾರ ಬಿಟ್ಟು ಕೊಡುವುದಿಲ್ಲ. ಯೋಗಿ ಆದಿತ್ಯನಾಥ್ ಅವರನ್ನೇ ಮುಂದಿನ ಪಿಎಂ ಮಾಡಬಹುದು ಎಂದು ಬ್ರಹ್ಮಾಂಡ ಗುರೂಜಿ ತುತೂಹಲದ ಭವಿಷ್ಯ ನುಡಿದಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version