ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಮಾವು ಹಾಗೂ ಹಲಸಿನ ಮರಗಳನ್ನು ಏಲಂ ಕರೆಯದಂತೆ ಶಾಸಕರ ಸೂಚನೆ

Published

on

ಪುತ್ತೂರು: ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಮತ್ತು ಸರಕಾರಿ ಜಾಗದಲ್ಲಿರುವ ಮಾವಿನ ಮರ ಹಾಗೂ ಹಲಸಿನ ಮರಗಳನ್ನು ಅದರ ಹಣ್ಣುಗಳಿಗಾಗಿ ಏಲಂ ಮಾಡಬಾರದು ಎಂದು ಪುತ್ತೂರು ನಗರಸಭಾ ಕಮಿಷನರ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರಾದ ಅಶೋಕ್ ರೈ ಯವರು ಸೂಚನೆಯನ್ನು ನೀಡಿದ್ದಾರೆ.

ಮಾವಿನ ಮಿಡಿ ಕೊಯ್ಯವ ಉದ್ದೇಶದಿಂದ ಮಾವಿನ ಮರವನ್ನು ಏಲಂ ಮಾಡಲಾಗುತ್ತಿದೆ. ಅನೇಕ ವರ್ಷಗಳಿಂದ ಮಾವಿನ ಮರಗಳನ್ನು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಏಲಂ ಕರೆಯಲಾಗುತ್ತದೆ. ಏಲಂ ಖಾಯಂ ಮಾಡಿದವರು ಮಾವು ಕೊಯ್ಯುವಾಗ ಮರಗಳು ಅರ್ಧ ಹಾನಿಗೊಳಗಾಗುತ್ತದೆ. ಗೆಲ್ಲುಗಳನ್ನು ಕಡಿದು ಅಥವಾ ಮುರಿದು ಮಾವು ಕೊಯ್ಯುವುದರಿಂದ ಮರಗಳು ಹಾನಿಗೊಳಗಾಗುತ್ತದೆ.‌ಈ ಕಾರಣಕ್ಕೆ ಏಲಂ ಕರೆಯದಂತೆ ಶಾಸಕರು ಸೂಚನೆಯನ್ನು ನೀಡಿದ್ದಾರೆ.







ಸರಕಾರಿ ಜಾಗದಲ್ಲಿರುವ ಅದರಲ್ಲೂ ರಸ್ತೆ ಬದಿಯಲ್ಲಿರುವ ಯಾವುದೇ ಹಣ್ಣಿನ‌ಮರಗಳಿಂದ ಹಣ್ಣು ಕೊಯ್ಯಬಾರದು .ಅದು ಹಣ್ಣಾಗಿ ಬಿದ್ದಲ್ಲಿ ಸಾರ್ವಜನಿಕರು ತಿನ್ನಬಹುದು ಅಥವಾ ಪಕ್ಷಿಗಳಿಗೆ ಆಹಾರವಾಗಬಹುದು ಎಂದು ತಿಳಿಸಿರುವ ಶಾಸಕರು ಮುಂದಿನ ಐದು ವರ್ಷ ಯಾವುದೇ ಮರಗಳನ್ನು ಏಲಂ ಕರೆಯದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಾಟು‌ಮಾವಿನ ಗಿಡ ನೆಟ್ಟಿದ್ದ ಶಾಸಕರು.
ನಶಿಸಿ ಹೋಗುತ್ತಿರುವ ಕಾಟು‌ಮಾವಿನ ಮರವನ್ನು ಉಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಸಕರಾದ ಅಶೋಕ್ ರೈ ಯವರು ರಸ್ತೆ ಬದಿಯಲ್ಲಿ ಕಾಟು ಮಾವು ಹಾಗೂ ಹಲಸಿನ ಗಿಡವನ್ನು ನೆಟ್ಟಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version