ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ಹಿಂದುತ್ವದ ಅಮಲಿನಲ್ಲಿ ಹಿಂದುಳಿದ ವರ್ಗದ ಯುವಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಮೇಲ್ವರ್ಗದವರು ಅಧಿಕಾರ ನಡೆಸುತ್ತಿದ್ದಾರೆ- ಇದಕ್ಕೆಲ್ಲ ತಿಲಾಂಜೆಲಿ ನೀಡುವ ಕೆಲಸ ಪದ್ಮರಾಜ್ ಆ‌ರ್ ಪೂಜಾರಿಯನ್ನು ಗೆಲ್ಲಿಸುವ ಮೂಲಕ ಆಗಬೇಕಿದೆ :ಜನಾರ್ದನ ಪೂಜಾರಿ

Published

on

ದೈವ-ದೇವರ ನಾಡಾಗಿರುವ ಈ ತುಳುನಾಡು ದೇವರು, ದೇವಾಲಯಗಳನ್ನೊಳಗೊಂಡ ಸತ್ಯ ಧರ್ಮ, ನಿಷ್ಠೆಗೆ ಪ್ರಾಮುಖ್ಯವನ್ನು ನೀಡುವ ನಾಡಾಗಿದೆ. ಈ ನಾಡಿನಲ್ಲಿ ಪರಸ್ಪರ ದ್ವೇಷ, ಅಧರ್ಮವನ್ನು ಕೊಣೆಗಾಣಿಸಿ, ಸತ್ಯ ಧರ್ಮ, ಸೌಹಾರ್ದಕ್ಕೆ ಗೆಲುವು ಆಗಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಅಂಟಿಕೊಂಡ ಮತೀಯ ಸೂಕ್ಷ್ಮಎಂಬ ಹಣೆಪಟ್ಟಿ ಹೋಗಬೇಕು.

ಅಪಪ್ರಚಾರವನ್ನು ಮೆಟ್ಟಿ ನಿಂತು, ಜನರು ಸತ್ಯ – ಧರ್ಮವನ್ನು ಗೆಲ್ಲಿಸಬೇಕಿದೆ.ಹಿಂದೂ ಅಂದರೆ ಮಾನವೀಯತೆಯ ಧರ್ಮ, ಮಾನವೀಯತೆಗಿಂತಲೂ ಮಿಗಿಲಾದ ಧರ್ಮವಿಲ್ಲ. ಪದ್ಮರಾಜ್‌ ಇದನ್ನು ಚೆನ್ನಾಗಿ ಪಾಲನೆ ಮಾಡುತ್ತಿದ್ದಾರೆ ಎಂದರು. ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಗೆಲುವಿನ ಮೂಲಕ ಜನತೆಯ ಅಭಿವೃದ್ಧಿಯ ಕನಸಿಗೆ ಚೈತನ್ಯ ಸಿಗಬೇಕು. ನನ್ನ ಶಿಷ್ಯನ ಗೆಲುವನ್ನು ಕಣ್ಣಾರೆ ನೋಡಬೇಕು ಎಂದು ಹಿರಿಯ ಕಾಂಗ್ರೆಸಿಗ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.

ಈ ಲೋಕಸಭಾ ಚುನಾವಣೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಕ್ಷೇತ್ರಗಳು, ಬೀಚ್, ಪಶ್ಚಿಮಘಟ್ಟ ಇತ್ಯಾದಿ ಪ್ರವಾಸೋದ್ಯಮದ ನೈಸರ್ಗಿಕ ಸೌಂದರ್ಯದ ದ.ಕ. ಜಿಲ್ಲೆ ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರಬೇಕಿತ್ತು. ಇನ್ನೂ ಕಾಲ ಮಿಂಚಿಲ್ಲ, ಜನರು ಅಭಿವೃದ್ಧಿಗಾಗಿ ಬೆಂಬಲಿಸಬೇಕು ಎಂದು ಹೇಳಿದರು.

ಭೂಮಿ ಒಡೆತನ ನೀಡಿದ್ದು ಕಾಂಗ್ರೆಸ್ ದ.ಕ. ಜಿಲ್ಲೆಗೆ ಬಂದರು, ವಿಮಾನಯಾನ, ರೈಲು, ರಸ್ತೆ ಸಾರಿಗೆ ನೀಡಿದ್ದು ಕೇಂದ್ರದ ಕಾಂಗ್ರೆಸ್‌ ಸರ್ಕಾರ. ಭೂಮಸೂದೆ ಜಾರಿ ಮೂಲಕ ನಾಡಿನ ಶೇ.80ರಷ್ಟು ಮಂದಿ ಭೂಮಿಯ ಒಡೆಯರಾದರು. 70 ವರ್ಷಗಳಲ್ಲಿ ಏನಾಗಿದೆ ಕೇಳುವವರು ಕಳೆದ 33 ವರ್ಷಗಳಲ್ಲಿ ಜನರಿಗೆ ಏನಾದರೂ ಕೊಡುಗೆ ಸಿಕ್ಕಿದ್ದರೆ ಹೇಳಲಿ ಎಂದರು. ಕಾಂಗ್ರೆಸ್ ಮಾಡಿದ ಅಭಿವೃದ್ಧಿ ಈ ಜಿಲ್ಲೆಯಲ್ಲಿಯೇ ಶಾಶ್ವತವಾಗಿ ನಮ್ಮ ಕಣ್ಣ ಮುಂದಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








ಅಭಿವೃದ್ಧಿಗೆ ಚೈತನ್ಯ ಸಿಗಬೇಕು ಎಂದ ಕೇಂದ್ರ ಮಾಜಿ ಸಚಿವ ಮೋದಿ ಅಲೆ ಎನ್ನುವಂಥದ್ದು ಭ್ರಮೆ. 10 ವರ್ಷಗಳ ಹಿಂದೆ ನೀಡಿದ ಭರವಸೆಗಳಲ್ಲಿ ಒಂದೂ ಈಡೇರಿಸಿಲ್ಲ. ನನ್ನ ಸಾಲ ಮೇಳದಂತಹ ಒಂದು ಯೋಜನೆ ಮೋದಿ ಕೊಟ್ಟಿದ್ದಾರಾ? ಅಭಿವೃದ್ಧಿ ಅಂದರೆ ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನವಲ್ಲ, ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವಂತಾಗಬೇಕು ಎಂದರು.

ಹಿಂದುತ್ವದ ಅಮಲಿನಲ್ಲಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯದ ಯುವಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಮೇಲ್ವರ್ಗದವರು ಅಧಿಕಾರ ನಡೆಸುತ್ತಿದ್ದಾರೆ. ಇದಕ್ಕೆಲ್ಲ ತಿಲಾಂಜಲಿ ನೀಡುವ ಕೆಲಸ ಆಗಬೇಕಿದೆ. ಯುವ ಸಮುದಾಯಕ್ಕೆ ಕೆಲಸ ನೀಡಿ ಮುನ್ನಡೆಸುವ ಕೆಲಸ ಮಾಡಬೇಕು. ನಾರಾಯಣ ಗುರುಗಳು, ವಿವೇಕಾನಂದರ ತತ್ವ ಚಿಂತನೆಯನ್ನು ಇಂದಿನ ಯುವ ಸಮಾಜ ಅರ್ಥೈಸಿಕೊಳ್ಳಬೇಕು ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version