Published
2 years agoon
By
Akkare News
ಪುತ್ತೂರು: ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಅಲ್ಲಲ್ಲಿ ಮಳೆಯ ಕಾರಣಕ್ಕೆ ಅವಘಡಗಳು ಸಂಭವಿಸುತ್ತಲೇ ಇದೆ. ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು. ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸಬೇಡಿ. ಹೊಳೆ,ಕೆರೆ,ಭಾವಿಯ ಕಡೆ ಮಕ್ಕಳು ತೆರಳದಂತೆ ಎಚ್ಚರವಹಿಸಿ. ವಿದ್ಯುತ್ ಕಂಬ, ಮನೆಯ ವಿದ್ಯುತ್ ಮೀಟರ್, ಟ್ರಾನ್ಸ್ ಫಾರ್ಮರ್ ,ವಿದ್ಯುತ್ ಕಂಬ ಮುಟ್ಟಲು ಹೋಗಬೇಡಿ. ಬಾವಿ ಕುಸಿಯುತ್ತಿರುವ ಘಟನೆಗಳು ನಡೆದಿದ್ದು ಬಾವಿಯಿಂದ ದೂರ ಇರಿ. ಮನೆಯ ಬಳಿ ಧರೆ ಇದ್ದರೆ ಅದಕ್ಕೆ ಪ್ಲಾಸ್ಡಿಕ್ ಹೊದಿಕೆ ಹಾಕಿ ನೀರು ಇಂಗದಂತೆ ನೋಡಿಕೊಳ್ಳಿ. ಧರೆ ಕುಸಿಯುವ ಭೀತಿಯಲ್ಲಿದ್ದರೆ ತಕ್ಷಣ ನನಗೆ ಅಥವಾ ನನ್ನ ಕಚೇರಿಗೆ ಕರೆ ಮಾಡಿ ತಿಳಿಸಿ.


ಮನೆಯ ಪಕ್ಕ ಮರ ಇದ್ದರೆ ಜಾಗೃತೆ ವಹಿಸಿ. ಮನೆ ಅಪಾಯಕಾರಿಯಾಗಿದ್ದಲ್ಲಿ ತಿಳಿಸಿದರೆ ಬದಲಿ ವ್ಯವಸ್ಥೆ ಮಾಡುತ್ತೇವೆ. ಏನೇ ಘಟನೆ ನಡೆದರೂ, ಅವಘಡದಮುನ್ಸೂಚಬೆ ಇದ್ದಲ್ಲಿ ನನ್ನ ಕಚೇರಿಗೆ ತಿಳಿಸಿ ಸಾರ್ವಜನಿಕರು ನೆರವು ಪಡೆದುಕೊಳ್ಳಬಹುದು. ಯಾರೂ ಆತಂಕಪಡಬೇಕಾಗಿಲ್ಲ ಎಂದು ಶಾಸಕರಾದ ಅಶೋಕ್ ರೈ ಸಾರ್ವಜನಿಕರಲ್ಲಿಮನವಿಮಾಡಿದ್ದಾರೆ.
ಶಾಸಕರ ಕಚೇರಿ ಮೊಬೈಲ್ ಸಂಖ್ಯೆ:+91 89047 07969
944-838-0969 ಶಾಸಕ ಅಶೋಕ್ ರೈ ನಂಬರ್ ಗೆ ಕರೆ ಮಾಡಬಹುದು






