Published
5 hours agoon
By
Akkare News

ಧಾರ್ಮಿಕ ಮತ್ತು ಪ್ರಾರ್ಥನಾ ಸೇವೆಗಳು: ಅನೂಶ್ ಡಿಸೋಜಾ (ಬಜಾಲ್) ಧಾರ್ಮಿಕ ವಿಧಿವಿಧಾನಗಳ ಸಂಯೋಜಕರು, (Liturgical Coordinator). ಸಂದೀಪ್ ಮಥಾಯಸ್ (ಉಡುಪಿ) ಸಹ ಧಾರ್ಮಿಕ ಮತ್ತು ಸಾಮಾಜಿಕ ಸಂಪರ್ಕ ಸಂಯೋಜಕರು, ಪ್ರೀಮಾ ಮಾರ್ಟಿಸ್ (ಮೂಡುಬೆಳ್ಳೆ) – ಯೂಕರಿಸ್ಟಿಕ್ ಮಿನಿಸ್ಟ್ರಿ ಸಂಯೋಜಕರು, ಸ್ವಯಂಸೇವಕರು ಮತ್ತು ಮಾಧ್ಯಮ ವಿಭಾಗ: ನ್ಯೂಟನ್ ಬ್ರಿಟ್ಟೋ (ಹೊನ್ನಾವರ) ಸ್ವಯಂಸೇವಕರ ಸಂಯೋಜಕರು, ಅಶ್ವಿನಿ ಡಿಸೋಜಾ (ಕಾರ್ಕಳ ಟೌನ್) – ಸಹ ಸ್ವಯಂಸೇವಕರ ಸಂಯೋಜಕರು, ಜೇಸನ್ ಮಿರಾಂಡಾ (ಸಂಸಿ)ಮಾಧ್ಯಮ ಸಂಯೋಜಕರು, ನಿಲೇಶ್ ಜಾಯ್ ಡಯಾಸ್ (ಪುತ್ತೂರು) – ಕ್ರೀಡೆ ಮತ್ತು ಸಾಂಸ್ಕೃತಿಕ ಸಂಯೋಜಕರು, ಡೆನ್ಜಿಲ್ ರಾಲ್ಫ್ ಮೊರಾಸ್ (ಪಲ್ದಾನೆ) – ಸಹ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಯೋಜಕರು, ಅಶ್ವಿನ್ ಪಿಂಟೋ (ಮೊಗರ್ನಾಡ್) – ಕೊಂಕಣ್ ಯುವ ಸಂಯೋಜಕರು, ಜೆ.ಎಮ್.ಜೆ ಪ್ರಾರ್ಥನಾ ತಂಡ – ಸಂಯೋಜಕರು,
ಸೇವಾ ಪರಂಪರೆ ಮತ್ತು ಮುಂದಿನ ಗುರಿಗಳು: 2013 ರಲ್ಲಿ ಆರಂಭವಾದ SMMC, ಯು.ಎ.ಇ.ನಲ್ಲಿರುವ ಮಂಗಳೂರು ಮೂಲದ ಕೊಂಕಣಿ ಕ್ಯಾಥೋಲಿಕ್ ವಲಸಿಗರನ್ನು ಒಟ್ಟುಗೂಡಿಸುವಲ್ಲಿ ಮತ್ತು ಅವರ ಸಾಂಸ್ಕೃತಿಕ ಹಾಗೂ ಧಾರ್ಮಿಕ ಗುರುತನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ರೆ. ಫಾ. ವಿಕ್ಟರ್ ಫೆರ್ನಾಂಡಿಸ್ ಅವರು ನಿರ್ಗಮಿತ ಸಮಿತಿಯ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು ಹಾಗೂ ನೂತನ ತಂಡವು ನಮ್ರತೆ, ಬದ್ಧತೆ ಮತ್ತು ಉತ್ಸಾಹದಿಂದ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಕರೆ ನೀಡಿದರು.
ನೂತನ ಸಂಯೋಜಕ ಬೋನಿಫಾಸ್ ಕಾರ್ಲೋ ಅವರು ಸಮುದಾಯದ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಸಮುದಾಯದ ಒಗ್ಗಟ್ಟು, ಕೊಂಕಣಿ ಸಂಸ್ಕೃತಿಯ ರಕ್ಷಣೆ, ಯುವಜನರ ಏಳಿಗೆ, ಧಾರ್ಮಿಕ ಕಾರ್ಯಕ್ರಮಗಳ ಯಶಸ್ಸು ಹಾಗೂ ಜನಕಲ್ಯಾಣ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.


