Connect with us

ಧಾರ್ಮಿಕ

ಕರಾವಳಿಯಾದ್ಯಂತ ಇಂದು ಶ್ರದ್ಧಾಭಕ್ತಿಯ ನಾಗರ ಪಂಚಮಿ ಆಚರಣೆ

Published

on

ಮಂಗಳೂರು: ಶ್ರದ್ಧಾಭಕ್ತಿಯ ನಾಗರ ಪಂಚಮಿ ಜು. 29ರಂದು ಜಿಲ್ಲೆಯಾದ್ಯಂತ ನಡೆಯಲಿದ್ದು, ಬಹುತೇಕ ನಾಗಸನ್ನಿಧಿಗಳಲ್ಲಿ ಸಿದ್ಧತೆ ಪೂರ್ಣಗೊಂಡಿದೆ.
ಮುಂಬರುವ ಹಬ್ಬಗಳ ಸರದಿಗೆ ಮುನ್ನುಡಿ ಯೆಂಬಂತೆ ನಾಗರ ಪಂಚಮಿ ನಡೆಯುತ್ತಿದ್ದು, ಇದರೊಂದಿಗೆ ಉಪಾಕರ್ಮ, ರಕ್ಷಾಬಂಧನ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹೀಗೆ ನಿರಂತರ ಹಬ್ಬಗಳು ಬರಲಿವೆ.

ಮಂಗಳವಾರ ನಡೆಯುವ ನಾಗರ ಪಂಚಮಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಕುಡುಪು ಅನಂತಪದ್ಮನಾಭ ಕ್ಷೇತ್ರ, ಅಲ್ಲದೆ ಹಲವು ದೇವಸ್ಥಾನಗಳ ನಾಗ ಸನ್ನಿಧಿ, ನಾಗಬನ ಮುಂತಾದೆಡೆ ನಾಗತಂಬಿಲ ನಡೆಯಲಿದೆ. ನಾಗರ ಪಂಚಮಿಗೆ ಮುನ್ನಾದಿನ ಸೋಮವಾರ ಜಿಲ್ಲೆಯಲ್ಲಿ ಮಳೆಯ ಅಬ್ಬರವೂ ಕಡಿಮೆ ಇದ್ದ ಕಾರಣ ನಾಗತಂಬಿಲಕ್ಕೆ ಬೇಕಾದಂತಹ ಅರಸಿನ ಎಲೆ, ಎಳನೀರು, ಹೂ ಇತ್ಯಾದಿ ಖರೀದಿ ಗೌಜಿಯಿಂದಲೇ ನಡೆದಿದೆ.

 

ಇಂದು: ಕುಕ್ಕೆಯಲ್ಲಿ ನಾಗರಪಂಚಮಿ ಸಂಭ್ರಮ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿಯನ್ನು ಜು.29 ರಂದು ಆಚರಿಸಲಾಗುತ್ತದೆ. ದೇವಸ್ಥಾನದಲ್ಲಿ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿ ನಾಗರಾಜನಿಗೆ ಹಾಲು ಮತ್ತು ಎಳನೀರಿನ ಅಭಿಷೇಕ ನೆರವೇರಲಿದೆ. ಮಧ್ಯಾಹ್ನ ಮಹಾಪೂಜೆಯ ನಂತರ ನಾಗಪ್ರತಿಷ್ಠಾ ಮಂಟಪದಲ್ಲಿ ವಿಶೇಷ ನೈವೇದ್ಯ ಸಮರ್ಪಣೆ ನೆರವೇರಲಿದೆ. ಪ್ರಾತ:ಕಾಲ ವಿಶೇಷ ಪಂಚಾಮƒತ ಮಹಾಭಿಷೇಕ ನಡೆಯಲಿದೆ. ಪ್ರತಿದಿನ ನಡೆಯುವ ಹರಕೆ ಸೇವೆಗಳು ಎಂದಿನಂತೆ ನಡೆಯುತ್ತವೆ.ನಾಗಪ್ರತಿಷ್ಠಾ ಮಂಟಪವನ್ನು ಹೂವುಗಳಿಂದ ಮತ್ತು ಪ್ರಾಕೃತಿಕ ವಸ್ತುಗಳಿಂದ ವಿಶೇಷವಾಗಿ ಅಲಂಕರಿಸಲಾಗುತ್ತದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement