Connect with us

ಕ್ರೀಡೆ

RCB: ಐಪಿಎಲ್‌ 2026 ಮಿನಿ ಹರಾಜಿಗೂ ಮುನ್ನ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಸೇರಿ 8 ಆಟಗಾರರನ್ನ ಕೈಬಿಟ್ಟ ಆರ್‌ಸಿಬಿ

Published

on

ಆರ್‌ಸಿಬಿ ಐಪಿಎಲ್ 2025 ಫೈನಲ್‌ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಗೆದ್ದು ಚಾಂಪಿಯನ್‌ ಆಯಿತು. ಇದೀಗ ಎಲ್ಲರ ಕಣ್ಣು 2026ರ ಸೀಸನ್‌ನತ್ತ ನೆಟ್ಟಿದೆ. ಮುಂದಿನ ಆವೃತ್ತಿ ಮಿನಿ ಹರಾಜಿಗೂ ಮುನ್ನ ಬೆಂಗಳೂರು ರಿಟೈನ್‌ ಪಟ್ಟಿಯನ್ನು ಪ್ರಟಕ ಮಾಡಿದೆ. ಈ ವೇಳೆ ಕನ್ನಡಿಗ ಮಯಾಂಕ್‌ ಅಗರ್ವಾಲ್ ಸೇರಿ 8 ಆಟಗಾರರನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ, ಯಾರೆಲ್ಲಾ ಔಟ್‌ ಹಾಗೂ ಉಳಿದ ಹಣವೆಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

‘ಹಾಲಿ ಐಪಿಎಲ್‌ ಚಾಂಪಿಯನ್‌ ಆರ್‌ಸಿಬಿಯು ಮಿನಿ ಹರಾಜಿಗೆ ಮುನ್ನ ರಿಟೈನ್‌ ಪಟ್ಟಿಯನ್ನು ಪ್ರಕಟ ಮಾಡಿದೆ. ತಂಡವು ಎಷ್ಟು ಆಟಗಾರರನ್ನು ಉಳಿಸಿಕೊಂಡಿದೆ ಎನ್ನುವುದನ್ನು ತಿಳಿದುಕೊಳ್ಳುವ ಮುಂಚಿತವಾಗಿ ಎಷ್ಟು ಆಟಗಾರರನ್ನು ಕೈಬಿಟ್ಟಿದೆ ಎಂದು ತಿಳಿಯಿರಿ. ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಸೇರಿ ಒಟ್ಟು ಪ್ರಮುಖ 8 ಮಂದಿ ಆಟಗಾರರನ್ನು ಬಿಡುಗಡೆ ಮಾಡಿದೆ.

ಕಳೆದ ಬಾರಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ತೋರದ ಕಾರಣ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರನ್ನು ಕೈಬಿಟ್ಟಿದೆ. ಜೊತೆಗೆ ಕನ್ನಡಿಗ ದೇವದತ್ ಪಡಿಕ್ಕಲ್‌ ಗಾಯಗೊಂಡ ವೇಳೆ ತಂಡಕ್ಕೆ ಬದಲಿ ಆಟಗಾರನಾಗಿ ಎಂಟ್ರಿ ಕೊಟ್ಟಿದ್ದ ಮತ್ತೊಬ್ಬ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಅವರನ್ನು ಕೂಡ ಬಿಡುಗಡೆ ಮಾಡಿದೆ. ಯಾಕಂದ್ರೆ ನಿಯಮದ ಪ್ರಕಾರ, ಬದಲಿ ಆಟಗಾರನಾಗಿ ತೆಗೆದುಕೊಂಡವರನ್ನು ತಂಡದಲ್ಲಿ ಉಳಿಸಿಕೊಳ್ಳುವಂತಿಲ್ಲ.

ಇವರ ಜೊತೆಗೆ ಯುವ ಆಟಗಾರ ಸ್ವಸ್ತಿಕ್‌ ಚಿಕಾರಾ ಸೇರಿ ಟಿಮ್‌ ಸೀಫರ್ಟ್‌, ಮನೋಜ್‌ ಭಾಂಡಗೆ, ಲುಂಗಿ ಎನ್‌ಗಿಡಿ, ಬ್ಲೆಸಿಂಗ್‌ ಮುಜರಾಬಾನಿ ಹಾಗೂ ಮೋಹಿತ್‌ ರಾಠಿ ಅವರನ್ನು ಕೂಡ ರಾಯಲ್ದ ಚಾಲೆಂಜರ್ಸ್‌ ಬೆಂಗಳೂರು ತಂಡ ಬಿಡುಗಡೆ ಮಾಡಿದೆ. ಇದೀಗ ಆರ್‌ಸಿಬಿ ಬಳಿ ಹರಾಜಿಗೂ ಮುನ್ನ ಉಳಿದಿರುವುದು 16.4 ಕೋಟಿ ರೂಪಾಯಿ.

ಲಿಯಾಮ್ ಲಿವಿಂಗ್​ಸ್ಟೋನ್: ಐಪಿಎಲ್​2025ರಲ್ಲಿ ಆರ್​ಸಿಬಿ ಪರ ಆಲ್​ರೌಂಡರ್ ಆಗಿ ಕಾಣಿಸಿಕೊಂಡ ಲಿಯಾಮ್ ಲಿವಿಂಗ್​ಸ್ಟೋನ್ ನಿರೀಕ್ಷಿದಷ್ಟು ಪ್ರದರ್ಶನ ತೋರದೆ, ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಆಡೊದ 10 ಪಂದ್ಯಗಳಲ್ಲಿ ಅವರು ಕೇವಲ 112 ರನ್​ಮಾತ್ರ ಕಲೆಹಾಕಿದ್ದರು. ಜೊತೆಗೆ 5 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅವರು 2 ವಿಕೆಟ್ ಮಾತ್ರ ಪಡೆದುಕೊಂಡಿದ್ದಾರೆ. ಆದ್ದರಿಂದ ಆರ್​ಸಿ ಸ್ಟೋನ್​ಅವರನ್ನು ತಂಡದಿಂದ ರಿಲೀಸ್‌ ಮಾಡಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement