Connect with us

ಆರೋಗ್ಯ

ಪೈನ್ ಕ್ಯೂಲರ್ ತ್ಯಜಿಸಿ -ಕಿಡ್ನಿ ರಕ್ಷಿಸಿ-ಜೀವ ಉಳಿಸಿ’ ಆಂದೋಲನ : ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಜಾಥಾ

Published

on

ಪುತ್ತೂರು: ಎಪ್ರಿಲ್ 6ರಂದು ಸಂಜೆ 3:30 ಗಂಟೆಗೆ ಸರಿಯಾಗಿ ದರ್ಬೆ ಸರ್ಕಲ್ ಬಳಿಯಿಂದ ಬೊಳ್ವಾರ್ ವರೆಗೆ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ “ಪೈನ್ ಕಿಲ್ಲರ್ ತ್ಯಜಿಸಿ-ಕಿಡ್ನಿ ರಕ್ಷಿಸಿ-ಜೀವ ಉಳಿಸಿ” ಎಂಬ ಜನಜಾಗೃತಿ ಕಾರ್ಯಕ್ರಮ ಶಾಲಾ ಮಕ್ಕಳ ಜಾಥಾದೊಂದಿಗೆ ನಡೆಯಲಿದೆ.

ರಾಜ್ಯದಲ್ಲಿ, ಅದರಲ್ಲೂ ಪುತ್ತೂರಿನಲ್ಲಿ ಕಿಡ್ನಿರೋಗಿಗಳ ಸಂಖ್ಯೆ ಹೆಚ್ಚುತಿರುವುದಕ್ಕೆ ಶಾಸಕ ಅಶೋಕ್ ರೈ ಅವರು ಕಾರಣ ಹುಡುಕಿದಾಗ ಪೈನ್ ಕಿಲ್ಲರ್ ಔಷಧಿಗಳು ಎಂಬುದು ಮನವರಿಕೆಯಾಗಿದ್ದು, ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ಸೇವಿಸುವುದು ದೇಹಕ್ಕೆ ಹಾನಿಕಾರ ಎಂಬ ವಿಷಯದ ಬಗ್ಗೆ ಜನರಿಗೆ ತಿಳಿಸಲು ಮತ್ತು ವೈದ್ಯರ ಚೀಟು ಇಲ್ಲದೆ ಔಷಧಿಗಳನ್ನು ಕೊಡುವುದನ್ನು ನಿಷೇಧಿಸಬೇಕೆಂದು ಮೆಡಿಕಲ್ ನವರಿಗೆ ಮನವಿ ಮಾಡುವ ಮೂಲಕ ಜನಸಾಮಾನ್ಯರ ಜೀವ ರಕ್ಷಣೆಯ ಮಾಹಿತಿ ಮುಟ್ಟಿಸುವ ಸಲುವಾಗಿ ಕಾರ್ಯಕ್ರಮವನ್ನು ರೂಪಿಸಿಕೊಳ್ಳಲಾಗಿದೆ

 

 

Continue Reading
Click to comment

Leave a Reply

Your email address will not be published. Required fields are marked *

Advertisement