Published
2 hours agoon
By
Akkare News
ತೀವ್ರ ಜಟಾಪಟಿಯ ನಡುವೆ ಹೈಕೋರ್ಟ್ ಆದೇಶದಂತೆ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಕಾರ್ಯ ನಡೆದಿತ್ತು. ಮರು ಎಣಿಕೆ ಬಳಿಕ ಸೋತಿದ್ದ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು ಗೆದ್ದಿದ್ದಾರೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದ್ದು, ರಾಜ್ಯ ರಾಜಕೀಯದಲ್ಲಿ ಮತ್ತೆ ವೋಟ್ ಚೋರಿ ಆರೋಪ ಸದ್ದು ಮಾಡ್ತಿದೆ. ಮತಗಳನ್ನು ತಿದ್ದಲಾಗಿದೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದರು. ಮತಗಳ ಮರು ಎಣಿಕೆ ಮಾಡ್ಬೇಕು ಎಂದು ಬಿಜೆಪಿ ಅಭ್ಯರ್ಥಿ ಜೀವರಾಜ್ ಕೋರ್ಟ್ ಮೊರೆ ಹೋಗಿದ್ರು. ಅರ್ಜಿ ಪುರಸ್ಕರಿಸಿ ಮಾರ್ಚ್ 6 ರಂದು ಹೈಕೋರ್ಟ್ ಒಂದು ನಿರ್ದೇಶನ ನೀಡಿತ್ತು. ಮರು ಎಣಿಕೆ ಮಾಡಿ ಡಿಫೆಕ್ಟ್ ಇದ್ರೆ ಪತ್ತೆ ಹಚ್ಚಿ, ಇಲ್ಲದಿದ್ರೆ ಯಥಾಸ್ಥಿತಿ ಘೋಷಿಸಿ ಅಂತ ಹೇಳಿತ್ತು. ಅದರಂತೆ ಮೇ 2 ರಂದು ಮರು ಎಣಿಕೆ ನಡೆದಿದೆ ಎಂದ್ರು.
2023 ರಲ್ಲಿ 569 ಅಂಚೆ ಮತಗಳು ಟಿ.ಡಿ ರಾಜೇಗೌಡಗೆ ಲಭಿಸಿದ್ವು ಮರು ಎಣಿಕೆಯಲ್ಲಿ 314 ಅಂಚೆ ಮತಗಳು ಮಾತ್ರ ವ್ಯಾಲಿಡ್ ಅಂತ ಹೇಳಿದ್ರು. 255 ಮತಗಳು ಇನ್ ವ್ಯಾಲಿಡ್ ಆಗಲು ಕಾರಣವೇನು? 2023 ರಲ್ಲಿ 692 ಅಂಚೆ ಮತಗಳು ಬಿದ್ದಿದ್ವು, ಮರು ಎಣಿಕೆಯಲ್ಲಿ 690 ಮತಗಳು ಬಂದಿವೆ. ರಾಜೇಗೌಡನಿಗೆ 255 ಮತಗಳು ಕಡಿಮೆ ಆಗಿದ್ದು, ಇದನ್ನು ನೋಡಿದಾಗ ಸ್ಪಷ್ಟವಾಗಿ ಗೊತ್ತಾಗುತ್ತೆ ಬಿಜೆಪಿಯವ್ರು ಕ್ರಿಮಿನಲ್ ಕಾನ್ಪರೆನ್ಸಿ ಮಾಡಿ ವೋಟ್ ಚೋರಿ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.255 ಮತಗಳನ್ನ ವ್ಯವಸ್ಥಿತವಾಗಿ ತಿದ್ದಲಾಗಿದ್ದು, ಒಂದು ಮಾರ್ಕ್ ನಿಂದ ಇನ್ನೊಂದು ಮಾರ್ಕ್ ಇದ್ರೆ ಇನ್ ವ್ಯಾಲಿಡ್ ಆಗ್ತೇವೆ. ಹಿಂದಿನ ರಿಟರ್ನಿಂಗ್ ಆಫೀಸರ್ ವ್ಯಾಲಿಡ್ ಅಂತ ಹೇಳಿದ್ರು. ಇದು ವೋಟ್ ಚೋರಿಯಷ್ಟೇ ಅಲ್ಲ ವೋಟ್ ಡಕಾಯಿತಿ ಎಂದರು. ನಾನು ಅಧಿಕಾರಿಗಳು, ಎಲೆಕ್ಷನ್ ಎಕ್ಸ್‌ಪರ್ಟ್‌ಗಳ ಜೊತೆ ಮಾತನಾಡಿದೆ. ಎಲ್ಲಾ ಮುಗಿದ ಮೇಲೆ ದಾಖಲೆಗಳನ್ನ ಟ್ರಂಕ್‌ನಲ್ಲಿ ಇಟ್ಟು ಕಳುಹಿಸ್ತಾರೆ. ಹಿಂದೆ ಚುನಾವಣೆ ನಡೆದಾಗ ಎರಡೂ ಕಡೆ ಬಿಜೆಪಿ ಸರ್ಕಾರ ಇತ್ತು. ಬಿಜೆಪಿಯವ್ರು ಟ್ರಂಕ್ ತರುವ ಸಿಬ್ಬಂದಿ ಮೂಲಕ ತಿದ್ದಿರುವುದು ಖಚಿತವಾಗಿದೆ ಎಂದಿದ್ದಾರೆ. ರಾಜೇಗೌಡ, ಜೀವರಾಜ್ , ಜೆಡಿಎಸ್ ಸೇರಿ ಪ್ರಮುಖ ಅಭ್ಯರ್ಥಿಗಳು ಮೂರನೇ ಸುತ್ತಿನಲ್ಲಿ 170 ಅಂಚೆಮತಗಳು ಇನ್‌ವ್ಯಾಲಿಡ್ ಆಗಿವೆ ಹಣ್ಣು ತಿಂದವನು ತಪ್ಪಿಸಿಕೊಂಡ, ಸಿಪ್ಪಿ ತಿಂದವನು ಸಿಕ್ಕಿಹಾಕಿಕೊಂಡಂತಾಗಿದೆ. ಕೋತಿ ತಿಂದು ಮೇಕೆ ಬಾಯಿಗೆ ಒರೆಸಿತು ಅನ್ನುವಂತಾಗಿದೆ ಬಿಜೆಪಿಯವರ ಕಥೆ ಎಂದು ಸಿಎಂ ಹೇಳಿದ್ದಾರೆ.



