Published
2 hours agoon
By
Akkare News
ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ ಇದರ ವತಿಯಿಂದ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ. 14ರಿಂದ 16ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೋಡಿಂಬಾಡಿಯ ಅಶ್ವತ್ಥಕಟ್ಟೆ ವಠಾರದಲ್ಲಿ ನಡೆಯಲಿದೆ.

ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಕೆ. ವಾರಿಸೇನ ಜೈನ್ ಕೋಡಿಯಾಡಿಗುತ್ತು ಚಾವಡಿ ಸಭಾಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ ಕೆ. ಎಸ್., ಪುತ್ತೂರು ವಿಜಯ ಸಾಮ್ರಾಟ್ನ ಅಧ್ಯಕ್ಷ ಸಹಜ್ ರೈ ಬಳಜ್ಜ, ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್ನ ಪುತ್ತೂರು ಯೋಜನಾಧಿಕಾರಿ ಶಶಿಧರ ಎಂ., ಕಂಪಾನಿಯೋ ವೆಲ್ನೆಸ್ ಸೆಂಟರ್ ಮಾಲಕ ಪ್ರಭಾಕರ ಸಾಲಿಯಾನ್ ಬಾಕಿಲಗುತ್ತು, ಕೋಡಿಂಬಾಡಿ ಹಿ.ಪ್ರಾ.ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಸ್ಫೂರ್ತಿ ರಾಜಮಣಿ ರೈ ಮತ್ತು ಪುತ್ತೂರು ಸಹಾಯಕ ಆಯುಕ್ತರ ಕಚೇರಿಯ ನಿವೃತ್ತ ಉಪ ತಹಶೀಲ್ದಾರ್ ಬಾಬು ನಾಯ್ಕ್ ಕಜೆ ಭಾಗವಹಿಸಲಿದ್ದಾರೆ. ರಾತ್ರಿ 8.30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 9ರಿಂದ ತುಳಸಿ ಮತ್ತು ಕೆ. ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು, ವಿವೇಕ್ ಪಿ. ಸಾಲ್ಯಾನ್ ಮತ್ತು ಪೃಥ್ವಿ ಪಿ. ಸಾಲಿಯಾನ್ ಕೈಪ ಕೋಡಿಂಬಾಡಿ ಇವರ ಪ್ರಾಯೋಜಕತ್ವದಲ್ಲಿ ರಾಜ್ ಡಾನ್ಸ್ ಕ್ರಿಯೇಷನ್ಸ್ ಪುತ್ತೂರು ಹಾಗೂ ಟೀಮ್ ಡಾಟ್ ವಿಟ್ಲ ತಂಡದಿಂದ ಡ್ಯಾನ್ಸ್ ನೈಟ್ ಕಾರ್ಯಕ್ರಮ ನಡೆಯಲಿದೆ. ವನಿತಾ ಸಮಾಜ ಕೋಡಿಂಬಾಡಿ ಮತ್ತು ಯುವಶಕ್ತಿ ಗೆಳೆಯರ ಬಳಗ ವಿನಾಯಕ ನಗರ ಕೋಡಿಂಬಾಡಿ ಇವರು ಈ ದಿನ ಸ್ವಯಂಸೇವಕರಾಗಿ ಭಾಗವಹಿಸಲಿದ್ದಾರೆ.
ಎರಡನೇ ದಿನದ ಕಾರ್ಯಕ್ರಮ: ಸೆ.15ರಂದು ಪೂರ್ವಾಹ್ನ 10ರಿಂದ ವೇದಮೂರ್ತಿ ಶ್ರೀವತ್ಸ ಕೆದಿಲಾಯ ಶಿಬರ ಅವರ ನೇತೃತ್ವದಲ್ಲಿ 108 ತೆಂಗಿನಕಾಯಿ ಗಣಯಾಗ, 11.45ಕ್ಕೆ ಗಣಯಾಗದ ಪೂರ್ಣಾಹುತಿ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ-ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ 1ರಿಂದ ನವೀನ್ ಪಾದೆಕಲ್ಲು ಬೆಳ್ಳಿಪ್ಪಾಡಿ ಸಾರಥ್ಯದ ಸ್ಕಂದ ಮ್ಯೂಸಿಕಲ್ಸ್ ಬೆಳ್ಳಿಪ್ಪಾಡಿ ಮತ್ತು ತಂಡದವರಿಂದ ಸ್ವರ ಸಂಗಮ ಸಂಗೀತ ರಸಮಂಜರಿ, ಸಂಜೆ 4.15ರಿಂದ ಧರ್ಮಶ್ರೀ ಭಜನಾ ಮಂಡಳಿ ಅಶ್ವತ್ಥಕಟ್ಟೆ ಕೋಡಿಂಬಾಡಿ ಇವರಿಂದ ಭಜನಾ ಸೇವೆ, ಸಂಜೆ 6ರಿಂದ ಸ್ಥಳೀಯ ಕಲಾ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ. ರಾತ್ರಿ 7ರಿಂದ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಭರತ್ ಗೌಡ ನಿಡ್ಯ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡ ಕಿರಣಚಂದ್ರ ಪುಷ್ಪಗಿರಿ, ಉದ್ಯಮಿ ಉಜ್ವಲ್ ಪ್ರಭು, ದುಬೈಯ ಉದ್ಯಮಿ ಅಜಿತ್ ಕುಮಾರ್ ಕೆ. ಆರ್. ಕೋಡಿಂಬಾಡಿ ಮತ್ತು ನಿವೃತ್ತ ಪೊಲೀಸ್ ಉಪನಿರೀಕ್ಷಕ ರುಕ್ಮಯ ನಾಯ್ಕ್ ಭಾಗವಹಿಸಲಿದ್ದಾರೆ. ರಾತ್ರಿ 8.15ಕ್ಕೆ ರಂಗಪೂಜೆ, 8.45ಕ್ಕೆ ಮಹಾಪೂಜೆ-ಪ್ರಸಾದ ವಿತರಣೆ, ಅನ್ನಸಂತರ್ಪಣೆ, 9ರಿಂದ ದುಬೈಯ ಉದ್ಯಮಿ ಅಜಿತ್ ಕುಮಾರ್ ಕೆ.ಆರ್. ಕೋಡಿಂಬಾಡಿ ಇವರ ಪ್ರಾಯೋಜಕತ್ವದಲ್ಲಿ ಯಶಸ್ವಿ ಕಲಾವಿದೆರ್ ಮಂಜೇಶ್ವರ ಇವರಿಂದ ಅಬ್ಬರ ತುಳು ಹಾಸ್ಯಮಯ-ಭಯಾನಕ ನಾಟಕ ನಡೆಯಲಿದೆ. ಈ ದಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೋಡಿಂಬಾಡಿ ಒಕ್ಕೂಟ ಮತ್ತು ಕೋಡಿಂಬಾಡಿಯ ಅಶ್ವತ್ಥಕಟ್ಟೆ ಧರ್ಮಶ್ರೀ ಕಲಾ ಸಂಘದವರು ಸ್ವಯಂಸೇವಕರಾಗಿ ಭಾಗವಹಿಸಲಿದ್ದಾರೆ.

ಸೇವಾರ್ಥಿಗಳು: ಬೆಳ್ಳಿಪ್ಪಾಡಿ ಶ್ರೀಕಾಂತ್ ರೈ ಮತ್ತು ಮನೆಯವರು ಶ್ರೀ ಮಹಾಗಣಪತಿಯ ವಿಗ್ರಹದ ಸೇವಾರ್ಥಿಯಾಗಿ ಸಹಕರಿಸಲಿದ್ದಾರೆ. ಸದಾಶಿವ ಸಾಮಾನಿ ಮತ್ತು ಮನೆಯವರು ಸಂಪಿಗೆದಡಿ ಮಠಂತಬೆಟ್ಟು, ಪ್ರಗತಿಪರ ಕೃಷಿಕ ರಾಜೀವ ಶೆಟ್ಟಿ ಕೇದಗೆ ಹಾಗೂ ಸದಾಶಿವ ರೈ ಮಠಂತಬೆಟ್ಟು ತರವಾಡು ಮನೆ ಇವರು ಈ ವರ್ಷದ ಅಲಂಕಾರ ಸೇವಾಕರ್ತರಾಗಿದ್ದಾರೆ ಎಂದು ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ವಾರಿಸೇನ ಹೈನ್ ಕೋಡಿಯಾಡಿಗುತ್ತು ಚಾವಡಿ, ಅಧ್ಯಕ್ಷ ಭರತ್ ಗೌಡ ನಿಡ್ಯ, ಕಾರ್ಯಾಧ್ಯಕ್ಷ ಕೇಶವ ಭಂಡಾರಿ ಕೈಪ, ಪ್ರಧಾನ ಕಾರ್ಯದರ್ಶಿ ದೇವಾನಂದ ಕೆ, ಕಾರ್ಯದರ್ಶಿ ಕುಮಾರನಾಥ ಯಸ್. ಪಳ್ಳತ್ತಾರು, ಕೋಶಾಧಿಕಾರಿ ಚೆನ್ನಣ್ಣ ಗೌಡ ಬರಮೇಲು, ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು, ಪ್ರದೀಪ್ ಕುಮಾರ್ ಶೆಟ್ಟಿ ಪನಿಪಾಲು, ದೀಕ್ಷಿತ್ ಯಂ. ಎಲ್. ಮೇಲಿನಹಿತ್ತಿಲು, ಅಶೋಕ ಪ್ರಭು ದಾರಂದಕುಕ್ಕು, ಪ್ರಭಾಕರ ಸಾಮಾನಿ ಮಠಂತಬೆಟ್ಟು, ಶಾರದಾ ಸಿ. ರೈ ಸರೋಳಿ, ಬಾಬು ಗೌಡ ಭಂಡಾರದ ಮನೆ, ಶೇಖರ ಪೂಜಾರಿ ನಿಡ್ಯ, ಉಮೇಶ ಗೌಡ ಪಿ. ಪನಿತೋಟ, ಜಯಾನಂದ ಗೌಡ ಕೊಲ್ಯ ದಾರಂದಕುಕ್ಕು, ಗೌರವ ಸಲಹೆಗಾರರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಕೆ. ಬಾಲಕೃಷ್ಣ ಬೋರ್ಕರ್ ಕೂರ್ನಡ್ಕ, ಕೆ. ಜಯಾನಂದ ಕೋಡಿಂಬಾಡಿ, ಎ. ಮುರಳೀಧರ ರೈ ಮಠಂತಬೆಟ್ಟು, ರಮೇಶ್ ನಾಯಕ್ ನಿಡ್ಯ, ಉಲ್ಲಾಸ್ ಕೋಟ್ಯಾನ್ ಪಳ್ಳತ್ತಾರು, ಯನ್. ಸುಭಾಸ್ ನಾಯಕ್ ನೆಕ್ಕರಾಜೆ ಮತ್ತು ಪ್ರಧಾನ ಅರ್ಚಕ ಬಾಲಕೃಷ್ಣ ಐತಾಳ್ ತಿಳಿಸಿದ್ದಾರೆ.