Published
7 hours agoon
By
Akkare News
ಕರ್ನಾಟಕ ಸಾವಯವ ಕೃಷಿ ಯೋಜನೆ ಮಂಗಳ ಕಿಸಾನ್ ಸಮೃದ್ಧಿ ವಿಭಾಗದ 2026ನೇ ಸಾಲಿನ ದ.ಕ. ಉಡುಪಿ, ಕಾಸರಗೋಡು ಒಳಗೊಂಡ ಮಂಗಳೂರು ವಿಭಾಗದ 150 ಕೃಷಿಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು. 
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಕೃಷಿ ಪ್ರಶಸ್ತಿಯನ್ನು ಪ್ರದಾನಗೈದು ಆಶೀರ್ವಚನವಿತ್ತು, ಕೃಷಿಕರನ್ನು ಗೌರವಿಸುವುದು ಬಲುದೊಡ್ಡ ಕಾರ್ಯವಾಗಿದ್ದು, ಸಾವಯವ ಗೊಬ್ಬರದ ಮೂಲಕ ಮಣ್ಣಿನ ಫಲವತ್ತತೆ ಮತ್ತು ಆರೋಗ್ಯವನ್ನು ರಕ್ಷಿಸಲು ಸಾಧ್ಯ. ಪ್ರಸ್ತುತ ದಿನಗಳಲ್ಲಿ ಸಾವಯವ ಕೃಷಿ ಪದ್ಧತಿ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ ಎಂದರು.



