Connect with us

ಅಪಘಾತ

BREAKING NEWS: ಭೀಕರ ಅಪಘಾತದಲ್ಲಿ IAS ಅಧಿಕಾರಿ ಮಹಾಂತೇಶ್​​​​​​​​ ಬೀಳಗಿ ನಿಧನ

Published

on

 ಕಲಬುರಗಿ: ಹಿರಿಯ ಐಎಎಸ್ (IAS)​​​ ಅಧಿಕಾರಿ ಮಹಾಂತೇಶ್​​​​​​​​ ಬೀಳಗಿ  (51) ಅವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
: ಗೌನಳ್ಳಿ ಬಳಿ ಘೋರ ದುರಂತ!

ವಿಜಯಪುರ ಜಿಲ್ಲೆಯಿಂದ ಕಲಬುರಗಿಯತ್ತ ಕಾರಿನಲ್ಲಿ ಬರುತ್ತಿದ್ದಾಗ, ಜೇವರ್ಗಿ ತಾಲೂಕಿನ ಗೌನಳ್ಳಿ ಸಮೀಪ ಈ ದುರಂತ ಸಂಭವಿಸಿದೆ.
ಮಹಾಂತೇಶ್ ಸೇರಿದಂತೆ ಕಾರಿನಲ್ಲಿದ್ದ ಇತರ ಇಬ್ಬರು ಸ್ಥಳದಲ್ಲಿ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮಹಾಂತೇಶ್​​​ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ಮೊದಲು ದಾವಣಗೆರೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅವರು ಪ್ರಸ್ತುತ ಬೆಸ್ಕಾಂನ ಎಂಡಿಯಾಗಿದ್ದರು. ಚಾಲಕನ ನಿಯಂತ್ರಣ ತಪ್ಪಿ ಇನ್ನೊವಾ ಕಾರು ಪಲ್ಟಿಯಾದ ಪರಿಣಾಮ ಈ ಘೋರ ದುರಂತ ಸಂಭವಿಸಿದೆ. ಮಣ್ಣೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬೀಳಗಿ ಅವರು ಅಸುನೀಗಿದ್ದಾರೆ.ಇನ್ನು ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪೊಲೀಸ್​​ ಕಮಿಷನರ್ ಡಾ.ಶರಣಪ್ಪ ಎಸ್​​ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಸೇರಿ ಇತರ ಅಧಿಕಾರಿಗಳು ದೌಡಾಯಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement