Connect with us

ಕ್ರೀಡೆ

ಗುಜರಾತ್‌ ಬಗ್ಗುಬಡಿದು ಫೈನಲ್‌ಗೆ RCB ‘ರಾಯಲ್‌’ ಎಂಟ್ರಿ – ಈ ಸಲನೂ ಕಪ್‌ ನಮ್ದೆ?

Published

on

ನಾಯಕ ರಜತ್‌ ಪಾಟಿದಾರ್‌ ಅಬ್ಬರದ ಬ್ಯಾಟಿಂಗ್‌ ಹಾಗೂ ಜಾಕೋಬ್ ಡಫ್ಫಿ ಬೆಂಕಿ ಬೌಲಿಂಗ್‌ಗೆ ಗುಜರಾತ್‌ ಧೂಳೀಪಟವಾಯ್ತು. ಕ್ವಾಲಿಫೈಯರ್‌-1 ಪಂದ್ಯದಲ್ಲಿ 92 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಆರ್‌ಸಿಬಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಐಪಿಎಲ್‌ನಲ್ಲಿ ಸತತ ಎರಡನೇ ಟ್ರೋಫಿ ಗೆಲ್ಲುವ ಭರವಸೆಯನ್ನು ಅಭಿಮಾನಿಗಳಲ್ಲಿ ಆರ್‌ಸಿಬಿ ಜೀವಂತವಾಗಿರಿಸಿದೆ..
ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 254 ರನ್‌ಗಳ ಬೃಹತ್‌ ಮೊತ್ತವನ್ನು ಕಲೆಹಾಕಿತು. 255 ರನ್‌ಗಳ ಗುರಿ ಬೆನ್ನತ್ತಿದ ಜಿಟಿ ಬ್ಯಾಟಿಂಗ್‌ನಲ್ಲಿ ಮಕಾಡೆ ಮಲಗಿತು. 162 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 254 ರನ್‌ಗಳ ಬೃಹತ್‌ ಮೊತ್ತವನ್ನು ಕಲೆಹಾಕಿತು. 255 ರನ್‌ಗಳ ಗುರಿ ಬೆನ್ನತ್ತಿದ ಜಿಟಿ ಬ್ಯಾಟಿಂಗ್‌ನಲ್ಲಿ ಮಕಾಡೆ ಮಲಿಗಿತು. 162 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.

ಬೃಹತ್‌ ರನ್‌ ಗುರಿ ತಲುಪುವ ಭರವಸೆಯೊಂದಿಗೆ ಬ್ಯಾಟಿಂಗ್‌ ಆರಂಭಿಸಿದ ಗುಜರಾತ್‌ ಬ್ಯಾಟಿಂಗ್‌ನಲ್ಲಿ ಎಡವಿತು. ಆರಂಭದಲ್ಲೇ ಮೂರು ಫೋರ್‌ಗಳನ್ನು ಹೊಡೆದು ಲಯ ಕಂಡುಕೊಂಡ ಸಾಯಿ ಸುದರ್ಶನ್‌ (14) ಬ್ಯಾಟ್‌ ಕೈಬಿಟ್ಟು ಹಿಟ್‌ ವಿಕೆಟ್‌ ಆಗಿ ಹೊರ ನಡೆದರು. ಇವರ ಬೆನ್ನಲ್ಲೇ ಭುವನೇಶ್ವರ್‌ ಮಾರಕ ಬೌಲಿಂಗ್‌ ಎದುರಿಸಲು ಆಗದೇ ಶುಭಮನ್‌ ಗಿಲ್‌ ಕೇವಲ 2 ರನ್‌ಗೆ ಕ್ಲೀನ್‌ ಬೌಲ್ಡ್‌ ಆದರು. ಈ ನಡುವೆ ತಂಡಕ್ಕೆ ಆಸರೆಯಾಗಿ ಯಾರು ಕೂಡ ನಿಲ್ಲಲಾಗಲಿಲ್ಲ. ಜೋಶ್‌ ಬಟ್ಲರ್‌ 29, ನಿಶಾಂತ್‌ ಸಿಂಧು 5, ವಾಷಿಂಗ್ಟನ್‌ ಸುಂದರ್‌ ಕೇವಲ 8 ರನ್‌ ಅಷ್ಟೇ ಗಳಿಸಿ ನಿರ್ಗಮಿಸಿ ನಿರಾಸೆ ಮೂಡಿಸಿದರು. 51 ರನ್‌ ಇದ್ದಾಗಲೇ ತಂಡ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಜೇಸನ್‌ ಹೋಲ್ಡರ್‌ ಶೂನ್ಯ ಸುತ್ತಿ ನಿರ್ಗಮಿಸಿದರು. ಸೋಲು ಖಚಿತವಾಗಿದ್ದರೂ ಸಮಾಧಾನಕರ ಆಟವಾಡಿದ ರಾಹುಲ್ ತೆವಾಟಿಯಾ ಅರ್ಧಶತಕ (68) ಗಳಿಸಿದರು. ಆರ್‌ಸಿಬಿ ಬೌಲರ್‌ಗಳ ದಾಳಿಗೆ ಕಂಗೆಟ್ಟ ಗುಜರಾತ್‌ ಅಂತಿಮವಾಗಿ 19.3 ಓವರ್‌ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 162 ರನ್‌ ಗಳಿಸಿ ಸೋತು ಶರಣಾಯಿತು.

ಆರ್‌ಸಿಬಿ ಪರ ಜಾಕೋಬ್ ಡಫ್ಫಿ ಮೂರು ವಿಕೆಟ್‌ ಕಿತ್ತು ಮಿಂಚಿದರು. ಭುವನೇಶ್ವರ್‌, ರಸಿಕ್ ಸಲಾಂ, ಕೃಣಾಲ್‌ ಪಾಂಡ್ಯ ತಲಾ 2 ವಿಕೆಟ್‌ ಪಡೆದು ಗಮನ ಸೆಳೆದರು. ಜೋಶ್‌ ಹೇಜಲ್‌ವುಡ್‌ 1 ವಿಕೆಟ್‌ ಪಡೆದರು. ಬ್ಯಾಟಿಂಗ್‌ನಲ್ಲಿ ಫಾರ್ಮ್‌ನಲ್ಲಿರುವ ಆರ್‌ಸಿಬಿ ಉತ್ತಮ ಆರಂಭವನ್ನೇ ಪಡೆಯಿತು. ಫೋರ್‌, ಸಿಕ್ಸರ್‌ನೊಂದಿಗೆ ಆಟವಾಡಿದ ವೆಂಕಟೇಶ್‌ ಅಯ್ಯರ್‌ 19 ರನ್‌ ಗಳಿಸಿದರು. ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್‌ ನೀಡಿ ಪೆವಿಲಿಯನ್‌ ಕಡೆ ಹೊರಟರು. ಇನ್ನು ವಿರಾಟ್‌ ಕೊಹ್ಲಿ ತಮ್ಮ ಚಾಣಾಕ್ಷತನದ ಬ್ಯಾಟಿಂಗ್‌ ಪ್ರದರ್ಶನದೊಂದಿಗೆ 43 ರನ್‌ ಕಲೆಹಾಕಿದರು. ಸೈಡಲ್ಲಿ ಹೋಗುತ್ತಿದ್ದ ಬಾಲ್‌ಗೆ ಆಡಲು ಹೋಗಿ ಕೊಹ್ಲಿ ಬೌಲ್ಡ್‌ ಆದರು. ಇನ್ನು ದೇವದತ್‌ ಪಡಿಕ್ಕಲ್‌ 30 ರನ್‌ ಕಲೆಹಾಕಿದರು.

Continue Reading
Click to comment

Leave a Reply

Your email address will not be published. Required fields are marked *

Advertisement