Connect with us

ಕ್ರೈಮ್ ನ್ಯೂಸ್

ಬಿಗ್ ಬ್ರೇಕಿಂಗ್ ನ್ಯೂಸ್ ಮಲ್ಪೆ ಉದ್ಯಮಿ ಸಂದೀಪ್ ಸಾಲಿಯಾನ್ ನಿಗೂಢ ಸಾವು ಪ್ರಕರಣ.. ಗೋವಾ ಪೊಲೀಸರಿಂದ ಮಂಗಳೂರು ಹನಿಟ್ರ್ಯಾಪ್ ಅಕ್ಷತ ಬಂಧನ..!! ಹಾಗಾದರೆ ಸಿಗರೇಟ್ ನಲ್ಲಿ ಏನಿದೆ…???

Published

on

ಮಲ್ಪೆ ಉದ್ಯಮಿ ಸಂದೀಪ್​ ಸಾಲಿಯಾನ್​ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಪ್ರಮುಖ ಆರೋಪಿ ಮಂಗಳೂರು ಮೂಲದ ಅಕ್ಷತಾ ಎಂ.ಕೆ. ಅಲಿಯಾಸ್​ ರೂಪಶ್ರೀ ಎಂಬ ಮಹಿಳೆಯನ್ನು ಗೋವಾ ಪೊಲೀಸರು ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಜಲಕ್ರೀಡಾ ದೋಣಿಗಳ ಉದ್ಯಮಿಯಾಗಿದ್ದ ಸಂದೀಪ ಸಾಲಿಯಾನ್​ ಮಲ್ಪೆ ನಿವಾಸಿಯಾಗಿದ್ದು, ಈ ಹಿಂದೆ ಮಾಜಿ ಸಚಿವರೊಬ್ಬರ ಕಾರು ಚಾಲಕರಾಗಿದ್ದರು. ನಂತರ ಚಾಲಕ ವೃತ್ತಿ ತೊರೆದು ಮಲ್ಪೆಯಲ್ಲಿ ಜಲಕ್ರೀಡಾ ದೋಣಿಯ ವ್ಯವಹಾರ ಆರಂಭಿಸಿದ್ದರು. ಜಲಕ್ರೀಡೆ ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಾಧಿಸಿ ಪ್ರಮುಖ ಉದ್ಯಮಿಯಾಗಿ ಬೆಳೆದರು.

ಗೋವಾಕ್ಕೆ ತೆರಳಿದ್ದ ಸಂದೀಪ ಸಾಲಿಯಾನ್​ ಅವರಿಗೆ ಇದೀಗ ಬಂಧಿತ ಆರೋಪಿ ಅಕ್ಷತಾ ಎಂಬ ಮಹಿಳೆ ಸಿಗರೇಟ್​ ಸೇದಲು ಕೊಟ್ಟಿದ್ದಳು. ಅದನ್ನು ಸೇವಿಸುತ್ತಿದ್ದಂತೆ ಸಂದೀಪ್​ ಪ್ರಜ್ಞಾಹೀನನಾಗಿ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸಂದೀಪ್​ ಕುತ್ತಿಗೆಯಲ್ಲಿದ್ದ ದಪ್ಪದಾದ ಚಿನ್ನದ ಸರವನ್ನು ದೋಚಿ ಆಕೆ ಪರಾರಿಯಾಗಿದ್ದಳು ಎಂದು ಪೊಲೀಸ್​ ತನಿಖೆಯಲ್ಲಿ ತಿಳಿದು ಬಂದಿದೆ.

ಅಕ್ಷತಾ ಶ್ರೀಮಂತರ ಟಾರ್ಗೆಟ್​ ಮಾಡಿ ವಂಚನೆಗೈಯ್ಯುತ್ತಿದ್ದಳು. ಶ್ರೀಮಂತರನ್ನು ಪಣಜಿಗೆ ಕರೆಸಿ ಕ್ಯಾಸಿನೋಗಳಿಗೆ ಬರುವಂತೆ ಆಮಿಷ ಒಡ್ಡಿ, ಅವರು ಬಂದ ಬಳಿಕ ಹೋಟೆಲ್​ಗೆ ಕರೆದುಕೊಂಡು ಹೋಗಿ ಮತ್ತು ಭರಿಸುವ ಅಮಲು ಪದಾರ್ಥ ಅಥವಾ ಸಿಗರೇಟ್​ ಸೇದಲು ಕೊಟ್ಟು ಪ್ರಜ್ಞೆ ತಪ್ಪಿಸುತ್ತಿದ್ದಳು. ಬಳಿಕ ಅವರ ಕುತ್ತಿಗೆಯಲ್ಲಿದ್ದ ಹಾಗೂ ಕೈಬೆರಳುಗಳಲ್ಲಿದ್ದ ಚಿನ್ನಾಭರಣ ದರೋಡೆ ಮಾಡುತ್ತಿದ್ದಳು ಎಂಬ ಆಘಾತಕಾರಿ ಸಂಗತಿಯೂ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಗುಜರಾತ್​ನ ಉದ್ಯಮಿ ತೋಮೇಶ್​ ಯಾದವ್​ ಎಂಬ ಉದ್ಯಮಿಯನ್ನೂ ಸಹ ಹನಿಟ್ರ್ಯಾಪ್​ಗೆ ಸಿಲುಕಿಸಿ, ಗೋವಾಕ್ಕೆ ಕರೆಸಿ ಪ್ರಜ್ಞೆ ತಪ್ಪಿಸಿ ಅವರಿಂದ 2.40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿರುವುದೂ ಸಹ ಇದೀಗ ಬೆಳಕಿಗೆ ಬಂದಿದೆ.

ಗೋವಾದಲ್ಲಿ ಕ್ಯಾಸಿನೋಗಳಿಗೆ ಬರುವ ಶ್ರೀಮಂತರನ್ನು ತನ್ನ ಬಲೆಗೆ ಬೀಳಿಸಿಕೊಂಡು ಹೋಟೆಲ್​ಗಳಿಗೆ ಕರೆದುಕೊಂಡು ಹೋಗಿ, ಪ್ರಜ್ಞೆ ತಪ್ಪಿಸಿ ಚಿನ್ನಾಭರಣ, ಹಣ ದರೋಡೆ ಮಾಡುವುದು, ಬಳಿಕ ಅವರಿಗೆ ಹನಿಟ್ರ್ಯಾಪ್​ ಬೆದರಿಕೆ ಮೂಲಕ ಮತ್ತೆ ಹಣ ಕೀಳುವುದನ್ನೇ ಈ ಮಹಿಳೆ ದಂಧೆ ಮಾಡಿಕೊಂಡಿದ್ದ ಆತಂಕಕಾರಿ ಸಂಗತಿ ಗೋವಾ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement