Published
2 hours agoon
By
Akkare News

ಕಾರ್ಯಕ್ರಮವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಕೆ.ಎಸ್. ಅವರು ಉದ್ಘಾಟಿಸಲಿದ್ದು, ದೀಪ ಪ್ರಜ್ವಲನೆಯನ್ನು ಜಿಲ್ಲಾ ಸಹಕಾರಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್, ಕೊಳಕೆ ಇರ್ವತ್ತೂರು ಅವರು ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜಿತ್ ಕೆ.ಆರ್. ಪೂಜಾರಿ ಅವರು ವಹಿಸಲಿದ್ದು, ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಇದರ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ನೆರವೇರಿಸಲಿದ್ದಾರೆ.
ಭದ್ರತಾ ಕೊಠಡಿ ಉದ್ಘಾಟನೆಯನ್ನು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಪುತ್ತೂರು ಇದರ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಎನ್. ಅವರು ನೆರವೇರಿಸಲಿದ್ದು, ನಗದು ಪತ್ರ ವಿತರಣೆಯನ್ನು ರೈ ಎಸ್ಟೇಟ್ & ಬಿಲ್ಡರ್ಸ್ ಮಂಗಳೂರು ಮಾಲಕರಾದ ಶ್ರೀಮತಿ ಸುಮಾ ಅಶೋಕ್ ರೈ ಅವರು ನೆರವೇರಿಸಲಿದ್ದಾರೆ.






