ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕಾನೂನು

ಕೋರೆಯಲ್ಲಿ ಜಾರಿ ಬಿದ್ದು ಯುವಕ ಮೃತ್ಯು ಪ್ರಕರಣ : ಬಡ ಕುಟುಂಬಕ್ಕೆ ಚಿಲ್ಲರೆ ಹಣ ನೀಡಿ ಪ್ರಕರಣ ವನ್ನು ಮುಚ್ಚಿ ಹಾಕಲು ಪ್ರಯತ್ನ.

Published

on

ವಿಟ್ಲ: ಕೋರೆಯಲ್ಲಿ ಜಾರಿ ಬಿದ್ದು ಯುವಕ ಮೃತ್ಯು ಪ್ರಕರಣ

*ಬಡ ಕುಟುಂಬಕ್ಕೆ ಚಿಲ್ಲರೆ ಹಣ ನೀಡಿ ಪ್ರಕರಣ ವನ್ನು ಮುಚ್ಚಿ ಹಾಕಲು ಚಿಲ್ಲರೆ ಬುದ್ದಿ ತೋರಿಸಿದ ವಿಟ್ಲ ಮುಡ್ನೂರು ಪಂಚಾಯತ್ ಅಧ್ಯಕ್ಷ*

*ಕೋರೆಯ ಗುಂಡಿ ಮುಚ್ಚದಿರುವುದೇ ಯುವಕನ ಪಾವಿಗೆ ಕಾರಣ*

ವಿಟ್ಲ: ಅಳಿಕೆ ಗ್ರಾಮದ ಅದಾಳ ಎಂಬಲ್ಲಿನ ಕಲ್ಲಿನ ಕೋರೆಯ ಗುಂಡಿಗೆ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಮೃತ ಕಾರ್ಮಿಕನನ್ನು ವಿಟ್ಲಮುಡ್ನೂರು ಗ್ರಾಮದ ಆಲಂಗಾರು ಅಡ್ಡದ ಪಾದೆ ನಿವಾಸಿ ಕೂಲಿ ಕೆಲಸ ಮಾಡುತ್ತಿರುವ ಬಡ ಕುಟುಬದ ಬಾಬು ನಾಯ್ಕ್‌ರವರ ಮಗ ಕಾರ್ತಿಕ್ (23) ಎಂದು ಗುರುತಿಸಲಾಗಿದೆ.



ಕಾರ್ತಿಕ್ ಅವರು ಮಂಗಳವಾರ ಅಳಿಕೆ ಗ್ರಾಮದ ದೇವದಾಸ ಯಾನೆ ಕಾಡು ಎಂಬವರಿಗೆ ಸೇರಿದ ಕಲ್ಲಿನ ಕೋರೆಯ ಮಣ್ಣು ತೆಗೆಯುವ ಕೆಲಸಕ್ಕೆ ನೆರೆಯ ಸತೀಶ್ ಎಂಬವರೊಂದಿಗೆ ಸೇರಿಕೊಂಡು ಹೋಗಿದ್ದರು. ಮಧ್ಯಾಹ್ನ ತನಕ ಕೆಲಸ ಮಾಡಿ ಕೈಕಾಲು ಮುಖ ತೊಳೆಯಲೆಂದು ಕೋರೆಯ ನೀರಿನ ಗುಂಡಿಯ ಬಳಿಗೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಈ ಘಟನೆ ಸಂಭವಿಸಿದೆ.
ಅವರನ್ನು ತಕ್ಷಣ ಮೇಲಕ್ಕೆತ್ತಿದ ಸಹ ಕಾರ್ಮಿಕ ಸತೀಶ ಅವರು ವಿಟ್ಲ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೃತ ಕಾರ್ತಿಕ್ ಅವರ ಸಹೋದರ ಲೋಕೇಶ್ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಆರ್‌ 53/2023 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.


ಇನ್ನು ಕೋರೆಯ ಮಾಲಕ ದೇವದಾಸ ಯಾನೆ ಕಾಡು ರವರು ಕೇರಳ ಗಡಿ ಪ್ರದೇಶ ಅಡ್ಯನಡ್ಕದಲ್ಲಿ ಪೆಟ್ರೋಲ್ ಬಂಕ್ ಮತ್ತು ವೈನ್ ಶಾಪ್ ಹೊಂದಿದ್ದು, ವಿಟ್ಲ ಮುಡ್ನೂರು ಪಂಚಾಯತ್ ಅಧ್ಯಕ್ಷ ಹಾಗೂ ಚಂದಪ್ಪ ಎಂಬವರ ಮೂಲಕ ಮೃತನ ಬಡ ಕುಟುಂಬಕ್ಕೆ ಚಿಲ್ಲರೆ ಹಣ ನೀಡಿ ರಾಜಿ ಪಂಚಾಯತಿ ಮೂಲಕ ಪ್ರಕರಣ ವನ್ನು ಮುಚ್ಚಿ ಹಾಕಲು ಪ್ರಯತ್ನಿಸುತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬರುತ್ತಿದೆ.

ಒಬ್ಬ ಪಂಚಾಯತ್ ಅಧ್ಯಕ್ಷ ತನ್ನ ಗ್ರಾಮದ ಬಡಪಾಯಿಗೆ ಚಿಲ್ಲರೆ ಹಣ ನೀಡಿ ಕೋರೆ ಮಾಲಿಕನ ಪರ ಬ್ಯಾಟಿಂಗ್ ಮಾಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣಲಾಗಿಗದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version